‘ಲಕ್ಕೀ ಮ್ಯಾನ್‌’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ ದೇವರಾಗಿದ್ದಾರೆ! ಅಪ್ಪುಗೆ ಈ ಚಿತ್ರದಲ್ಲಿ ವಿಶೇಷ ಪಾತ್ರ. ಡಾರ್ಲಿಂಗ್‌ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್‌ ಅಭಿನಯದ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಗಲಿದ ನಟ ಪುನೀತ್‌ ರಾಜಕುಮಾರ್‌ ಅವರ ‘ಲಕ್ಕೀ ಮ್ಯಾನ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದು ತೆರೆಕಾಣಲಿರುವ ಪುನೀತ್‌ರ ಕೊನೆಯ ಫೀಚರ್‌ ಸಿನಿಮಾ. ಡಾರ್ಲಿಂಗ್‌ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾದಲ್ಲಿ ಅಪ್ಪು ವಿಶೇಷ ಪಾತ್ರದಲ್ಲಿ ದೇವರಾಗಿ ಕಾಣಿಸಿಕೊಂಡಿದ್ದಾರೆ. ತಮಿಳು ಸಿನಿಮಾ ‘ಓಹ್‌ ಮೈ ಕಡವುಳೆ’ ಕನ್ನಡ ರೀಮೇಕಿದು. ತಮಿಳಿನಲ್ಲಿ ವಿಜಯ್‌ ಸೇತುಪತಿ ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್‌ ನಿರ್ವಹಿಸಿದ್ದಾರೆ. ವಿಫಲ ಮದುವೆ ಸಂಬಂಧವನ್ನು ಸರಿಪಡಿಸಿಕೊಳ್ಳಲು ಹೀರೋಗೆ ಸೆಕೆಂಡ್‌ ಛಾನ್ಸ್‌ ನೀಡುವ ದೇವರ ಪಾತ್ರ ಪುನೀತ್‌ರದ್ದು. ಈ ಫ್ಯಾಂಟಸಿ ಡ್ರಾಮಾ ಸಿನಿಮಾದಲ್ಲಿ ನಟ, ಡ್ಯಾನ್ಸರ್‌ ಪ್ರಭುದೇವ ಕೂಡ ಕಾಣಿಸಿಕೊಳ್ಳುತ್ತಿದಾರೆ. ಪುನೀತ್‌ ರಾಜಕುಮಾರ್‌ ಮತ್ತು ಪ್ರಭುದೇವ ಜೋಡಿಯ ಡ್ಯಾನ್ಸ್‌ ಈ ಸಿನಿಮಾದ ಹೈಲೈಟ್‌. ಎಸ್‌.ನಾಗೇಂದ್ರ ಪ್ರಸಾದ್‌ ನಿರ್ದೇಶನದ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here