1952 ರಿಂದ 1962ರ ಅವಧಿಯ ಕಾಲಘಟ್ಟವನ್ನು ಕಲಾ ನಿರ್ದೇಶಕರು ಚೆನ್ನಾಗಿ ಕಟ್ಟಿದ್ದಾರೆ. ಎ ಆರ್‌ ರೆಹಮಾನ್‌ ಅವರ ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಅಲ್ಲಲ್ಲಿ ಸಿನಿಮಾ ಕೊಂಚ ಎಳೆದಿದೆ ಅನಿಸುತ್ತಾದರೂ, ಕ್ಲೈಮ್ಯಾಕ್ಸ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ನಾಲ್ಕು ವರ್ಷಗಳ ಹಿಂದೆಯೇ ರಿಲೀಸ್‌ ಆಗಬೇಕಿದ್ದ ಹಿಂದಿ ಸಿನಿಮಾ ‘ಮೈದಾನ್‌’ ನಾನಾ ಕಾರಣಗಳಿಂದ ಈಗ ಬಿಡುಗಡೆಯಾಗಿದೆ. ಹಲವಾರು ವಿವಾದಗಳ ನಡುವೆಯೇ ಬಿಡುಗಡೆಯಾಗಿರುವ ಚಿತ್ರ ಲೇಟಾದ್ರೂ ಲೆಟೆಸ್ಟ್‌ ಆಗಿ ರಿಲೀಸ್‌ ಆಗಿದೆ. ಸ್ಪೋರ್ಟ್ಸ್‌ ಡ್ರಾಮಾ ಜಾನರ್ ಚಿತ್ರಗಳಲ್ಲಿ ಬಹುತೇಕ ಘಟನೆಗಳು ಒಂದೇ ರೀತಿ ಎನಿಸೋದು ಸಹಜ. ಅದರಲ್ಲೂ ನೈಜ ಘಟನೆ ಹಾಗೂ ಜನರಿಗೆ ಗೊತ್ತಿರುವ ಕಥೆಯನ್ನ ಹೇಳಬೇಕು ಎಂದಾಗ ಅದನ್ನು ಪ್ರಸ್ತುತಪಡಿಸುವ ವಿಧಾನದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರವಾಗುತ್ತದೆ.

ಸಿನಿಮಾವನ್ನು ಪ್ರೆಸೆಂಟ್‌ ಮಾಡುವ ವಿಷಯದಲ್ಲಿ ನಿರ್ದೇಶಕ ಅಮಿತ್‌ ಶರ್ಮಾ ಗೆದ್ದಿದ್ದಾರೆ. 3 ಗಂಟೆಗಳ ಕಥೆಯನ್ನು ಸರಳವಾಗಿ ಮತ್ತು ಎಂಗೇಜಿಂಗ್‌ ಆಗಿ ಹೇಳಿದ್ದಾರೆ. ಅಲ್ಲಲ್ಲಿ ಪಂಚಿಂಗ್‌ ಡೈಲಾಗ್ಸ್‌, ತಿಳಿ ಹಾಸ್ಯವಿದೆ. ಆದರೆ, ಕೆಲವು ದೃಶ್ಯಗಳು ನಾಯಕ ಹೇಳುವ ಡೈಲಾಗ್ಸ್‌ ಸಪ್ಪೆ ಎನಿಸುತ್ತೆ. ಚಿತ್ರದಲ್ಲಿ ಫುಟ್ಬಾಲ್‌ ಮ್ಯಾಚ್‌ ದೃಶ್ಯಗಳು ಆಕರ್ಷಕವಾಗಿವೆ. ವರ್ಲ್ಡ್‌ಕ್ಲಾಸ್‌ ಲೆವೆಲ್‌ಗೆ ಪಂದ್ಯಗಳ ಚಿತ್ರೀಕರಣ ಮಾಡಲಾಗಿದೆ. ಫುಟ್ಬಾಲ್‌ ಆಟ ಅರ್ಥವಾಗದವರಿಗೂ ಸಿನಿಮಾ ಆಸಕ್ತಿಕರ ಎನಿಸುವಂತೆ ಗೇಮ್‌ಗೆ ಎಂಟರ್‌ಟೇನ್‌ಮೆಂಟ್‌ ಟಚ್‌ ಕೊಟ್ಟಿದ್ದಾರೆ ನಿರ್ದೇಶಕ.

ಕ್ರೀಡಾ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟ-ನಟಿಯರನ್ನ ನೋಡಿ ಬೋರ್‌ ಆದವರಿಗೆ ಈ ಸಿನಿಮಾದಲ್ಲಿ ಕೊಂಚ ಹೊಸತನ ಸಿಗಲಿದೆ. ಬಣ್ಣದ ಲೋಕದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿರುವ ನಿರ್ದೇಶಕ, ಅವರಿಂದ ಹಾಗೆ ಕೆಲಸವನ್ನೂ ತೆಗೆದಿದ್ದಾರೆ. ಫುಟ್ಬಾಲ್‌ ತಂಡದ ಕೋಚ್‌ ಸೈಯದ್‌ ಅಬ್ದುಲ್‌ ರಹೀಂ ಪಾತ್ರದಲ್ಲಿ ಅಜಯ್‌ ದೇವಗನ್‌ ನಟನೆ ಒಂದೇ ತರ ಅನಿಸುತ್ತೆ. ಈ ಸಿನಿಮಾದ ಕಥೆ ಹಾಗೂ ಅದನ್ನು ಪ್ರಸ್ತುತಪಡಿಸಿರುವ ರೀತಿ ನಿಜವಾದ ಹೀರೋ. ಕ್ರೀಡಾ ಪ್ರಧಾನ ಸಿನಿಮಾಗಳಲ್ಲಿ ಬರುವ ಕೆಟ್ಟ ರಾಜಕೀಯ, ಸ್ವಪ್ರತಿಷ್ಠೆಯ ಹಿಂದೆ ಬೀಳೋ ಪಾತ್ರಗಳೂ ಇಲ್ಲೂ ಇವೆ. ಇನ್ನು 1952-1962 ರ ಕಾಲಘಟ್ಟದಲ್ಲಿ ಫುಟ್ಬಾಲ್‌ ಫೆಡರೇಷನ್‌ನಲ್ಲಿ ಕ್ರೀಡೆ ಹಾಗೂ ರಾಜಕೀಯ ಹೇಗೆ ಹ್ಯಾಂಡ್‌ ಇನ್‌ ಹ್ಯಾಂಡ್‌ ನಡೆಯುತ್ತೆ ಅನ್ನೋದನ್ನ ಚೆನ್ನಾಗಿ ತೋರಿಸಲಾಗಿದೆ.

ಮೈದಾನ್‌ನಲ್ಲಿ ಮತ್ತೊಂದು ಆಕರ್ಷಣೆ ಅಂದ್ರೆ ಈ ಚಿತ್ರದ ಖಳನಾಯಕ. ಹಿಂದಿ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ಗಜರಾಜ್‌ ರಾವ್‌ ‘ಮೈದಾನ್‌’ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಯನಟನಲ್ಲಿ ಅಡಗಿದ್ದ ಆ ಕ್ರೂರ ಮನಸ್ಸಿನ ಖಳನಾಯಕನ ಪರಿಚಯ ಮಾಡಿಕೊಡುತ್ತೆ ಮೈದಾನ್‌. ಸಿನಿಮಾದಲ್ಲಿ ಮಳೆಗಾಲದಲ್ಲಿ ಕೊಲ್ಕತ್ತಾದ ಕಿರಿದಾದ ರಸ್ತೆಗಳು ಎಷ್ಟು ಚೆಂದ ಕಾಣ ಸಿಗುತ್ತೆ ಅಂತ ಸುಂದರವಾಗಿ ಚಿತ್ರಿಸಲಾಗಿದೆ.

1952 ರಿಂದ 1962ರ ಅವಧಿಯ ಕಾಲಘಟ್ಟವನ್ನು ಕಲಾ ನಿರ್ದೇಶಕರು ಚೆನ್ನಾಗಿ ಕಟ್ಟಿದ್ದಾರೆ. ಎ ಆರ್‌ ರೆಹಮಾನ್‌ ಅವರ ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಅಲ್ಲಲ್ಲಿ ಸಿನಿಮಾ ಕೊಂಚ ಎಳೆದಿದೆ ಅನಿಸುತ್ತಾದರೂ, ಕ್ಲೈಮ್ಯಾಕ್ಸ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆಗ ಭಾರತದ ಫುಟ್ಬಾಲ್‌ ಯಾವ ಸ್ಥಿತಿಯಲ್ಲಿತ್ತು ಅಂತ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಕೋಚ್‌ ಮಡದಿಯಾಗಿ ಪ್ರಿಯಾಮಣಿ ಪಾತ್ರಕ್ಕೂ ಅದರದ್ದೇ ಆದ ಸ್ಪೇಸ್‌ ನೀಡಲಾಗಿದೆ. ಇಂಗ್ಲಿಷ್‌ ಕಲಿಯುತ್ತಾ ಪತಿಗೆ ಕೆಲವು ಸನ್ನಿವೇಶಗಳಲ್ಲಿ ಟಾಂಟ್‌ ಕೊಡುವ ಟಿಪಿಕಲ್‌ ಹೆಂಡತಿ, ಪತಿ ಕುಗ್ಗಿದಾಗ ಹುರಿದುಂಬಿಸುವ ಆಶಾಕಿರಣವಾಗುತ್ತಾಳೆ. ಈ ಪಾತ್ರವನ್ನು ಪ್ರಿಯಾಮಣಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಸಿನಿಮಾ ಅಲ್ಲಲ್ಲಿ ಎಳೆದಿದೆ ಎನಿಸಿದರೂ ಕ್ಲೈಮ್ಯಾಕ್ಸ್‌ ಎಲ್ಲ ಬೇಸರವನ್ನು ಮರೆಸಿಬಿಡುತ್ತದೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನ ಹಿಡಿದು ಕೂರಿಸುತ್ತೆ. ಚಿತ್ರದ ಕೊನೆಯಲ್ಲಿ ನಿಜ ಜೀವನದಲ್ಲಿನ ಕೋಚ್‌ ಹಾಗೂ ಆಟಗಾರರ ಪರಿಚಯ ಮಾಡಿಕೊಡಲಾಗುತ್ತದೆ. ಇದನ್ನ ಮಾತ್ರ ಮಿಸ್‌ ಮಾಡಿಕೊಳ್ಳಬೇಡಿ.

LEAVE A REPLY

Connect with

Please enter your comment!
Please enter your name here