ಡಿಜೋ ಜೋಸ್‌ ಆಂಥೋನಿ ನಿರ್ದೇಶನದ ‘ಮಲಯಾಳಿ ಫ್ರಂ ಇಂಡಿಯಾ’ ಮಲಯಾಳಂ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ನಿವಿನ್‌ ಪೌಲಿ, ಧ್ಯಾನ್‌ ಶ್ರೀನಿವಾಸನ್‌, ಅನಸ್ವರ ರಾಜನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

ನಿವಿನ್‌ ಪೌಲಿ ಮುಖ್ಯಭೂಮಿಕೆಯಲ್ಲಿರುವ ‘ಮಲಯಾಳಿ ಫ್ರಂ ಇಂಡಿಯಾ’ ಮಲಯಾಳಂ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಡಿಜೋ ಜೋಸ್ ಆಂಥೋನಿ ನಿರ್ದೇಶಿಸುತ್ತಿದ್ದು, ಶರೀಸ್‌ ಮೊಹಮ್ಮದ್‌ ಚಿತ್ರಕಥೆ ರಚಿಸಿದ್ದಾರೆ. ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ಪ್ರಪಂಚದ ವಿವಿಧ ದೇಶಗಳ ಜನರು ಮತ್ತು ಬುಡಕಟ್ಟು ಸಮುದಾಯದ ಜನರಿದ್ದಾರೆ. ಪೋಸ್ಟರ್‌ ವಿಭಿನ್ನ ಮಾದರಿಯಲ್ಲಿ ಮೂಡಿಬಂದಿದೆ. ಚಿತ್ರವು ಯಾವ ವಿಷಯದ ಬಗ್ಗೆ ಹೇಳಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸದ್ಯದಲ್ಲೇ ತಿಳಿಸುವುದಾಗಿ ಚಿತ್ರತಂಡ ತಿಳಿಸಿದೆ. ಚಿತ್ರದಲ್ಲಿ ಧ್ಯಾನ್ ಶ್ರೀನಿವಾಸನ್, ಅನಸ್ವರ ರಾಜನ್, ಮಂಜು ಪಿಳ್ಳೈ, ಶೈನ್ ಟಾಮ್ ಚಾಕೋ, ಸಲೀಂ ಕುಮಾರ್ ಮತ್ತು ವಿಜಯಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2023ರಲ್ಲಿ ನಿವಿನ್‌ ‘ತುರಮುಖಂ’ ಮತ್ತು ‘ರಾಮಚಂದ್ರ ಬಾಸ್ & ಕಂ’ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇವರು ‘ಏಳು ಕಡಲ್ ಏಳು ಮಲೈ’ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರವು ರೋಟರ್‌ಡ್ಯಾಮ್ 2024ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here