ರೋಹಿತ್‌ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್’ ಸರಣಿಯ ಟ್ರೇಲರ್‌ ಬಿಡುಗಡೆಯಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್‌ ಒಬೆರಾಯ್‌ ಮತ್ತು ಶಿಲ್ಪಾ ಶೆಟ್ಟಿ ಸರಣಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜನವರಿ 19ರಿಂದ Amazon primeನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್‌ ಒಬೆರಾಯ್‌ ಮತ್ತು ಶಿಲ್ಪಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ‘ಇಂಡಿಯನ್ ಪೋಲೀಸ್ ಫೋರ್ಸ್ ಸೀಸನ್ 1’ ಹಿಂದಿ ಸರಣಿಯ ಟ್ರೇಲರ್‌ ಬಿಡುಗಡೆಯಾಗಿದೆ. ಸರಣಿಯನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಟ್ರೇಲರ್‌ನಲ್ಲಿ ಸಿದ್ಧಾರ್ಥ್‌ ಮೇಲಧಿಕಾರಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದೇಶದ ಅಮಾಯಕ ಜನರಿಗೆ ತೊಂದರೆ ಕೊಡುತ್ತಿರುವ ಅಪರಾಧಿಗಳನ್ನು ಬಂಧಿಸುವುದೇ ದೊಡ್ಡ ಸವಾಲಾಗಿ ಮಾರ್ಪಡುತ್ತದೆ. ಎಲ್ಲೆಂದರಲ್ಲಿ ದಾಳಿ, ಬಾಂಬ್‌ ಅಟ್ಯಾಕ್‌ಗಳು ನಡೆಯುತ್ತಿರುತ್ತವೆ. ಇದರಿಂದ ಅಮಾಯಕರು ಸಾವನ್ನಪ್ಪುತ್ತಿರುತ್ತಾರೆ. ಅಪರಾಧಿಗಳನ್ನು ಸೆರೆಹಿಡಿಯುವಲ್ಲಿ ಪೊಲೀಸ್‌ ಪಡೆ ಯಶಸ್ವಿಯಾಗುತ್ತದೆಯೋ? ಇಲ್ಲವೋ? ಎನ್ನುವುದು ಸರಣಿಯ ಕಥಾವಸ್ತು.

ಏಳು ಕಂತುಗಳ ಈ ಆಕ್ಷನ್ ಥ್ರಿಲ್ಲರ್ ಸರಣಿಯು ಭಾರತೀಯ ಪೊಲೀಸ್ ಅಧಿಕಾರಿಗಳ ಬದ್ಧತೆಗೆ ಗೌರವ ಸಲ್ಲಿಸುವ ಒಂದು ಪ್ರಕಾರವಾಗಿದೆ. ದೇಶದ ಪ್ರಜೆಗಳನ್ನು ಸುರಕ್ಷಿತವಾಗಿಡಲು ತಮ್ಮ ಕರ್ತವ್ಯದಲ್ಲಿ ಎಲ್ಲವನ್ನೂ ಸಮತೋಲನದಲ್ಲಿರಿಸುವ ಭಾರತೀಯ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ದೇಶಭಕ್ತಿಗೆ ಈ ಸರಣಿಯು ಹೆಮ್ಮೆಯಿಂದ ಗೌರವ ಸಲ್ಲಿಸುತ್ತದೆ ಎಂದು ತಯಾರಕರು ತಿಳಿಸಿದ್ದಾರೆ. ಸರಣಿಯಲ್ಲಿ ಶ್ವೇತಾ ತಿವಾರಿ, ನಿಕಿತಿನ್ ಧೀರ್, ರಿತುರಾಜ್ ಸಿಂಗ್, ಮುಖೇಶ್ ರಿಷಿ, ರೋಹಿತ್ ಶೆಟ್ಟಿ, ಲಲಿತ್ ಪರಿಮೂ ಭಾರತೀಯ ಪೊಲೀಸ್ ಪಡೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿ, ಸುಶ್ವಂತ್ ಪ್ರಕಾಶ್, ಸಂದೀಪ್ ಸಾಕೇತ್, ಅನುಷಾ ನಂದಕುಮಾರ್, ಆಯುಷ್ ತ್ರಿವೇದಿ, ವಿಧಿ ಘೋಡಗಾಂವ್ಕರ್, ಸಂಚಿತ್ ಬೇಂದ್ರೆ ಸರಣಿ ಬರವಣಿಗೆಯಲ್ಲಿ ಕೆಲಸ ಮಾಡಿದ್ದಾರೆ. ಸರಣಿಯು Amazon Primeನಲ್ಲಿ ಜನವರಿ 19ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here