ಅಭಿಲಾಷ್‌ ಜೋಶಿ ನಿರ್ದೇಶನದಲ್ಲಿ ದುಲ್ಕರ್‌ ಸಲ್ಮಾನ್‌ ನಟಿಸಿರುವ ‘ಕಿಂಗ್‌ ಆಫ್‌ ಕೋಥಾ’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇಲ್ಲಿ ಭೂಗತ ಜಗತ್ತಿನ ಕತೆಯಿದ್ದು ಟೀಸರ್‌ ತುಂಬಾ ಹೀರೋ ದುಲ್ಕರ್‌ ರಕ್ತಸಿಕ್ತ ದೃಶ್ಯಗಳಿವೆ. ಆಗಸ್ಟ್‌ 24ರಂದು ಸಿನಿಮಾ ತೆರೆಕಾಣಲಿದೆ.

ದುಲ್ಕರ್ ಸಲ್ಮಾನ್ ಅಭಿನಯದ ‘ಕಿಂಗ್ ಆಫ್ ಕೋಥಾ’ ಮಲಯಾಳಂ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಭೂಗತ ಪಾತಕಿ ಪಾತ್ರ ನಿರ್ವಹಿಸಿದ್ದಾರೆ. ವಾಯ್ಸ್‌ಓವರ್‌ನೊಂದಿಗೆ ಆರಂಭಗೊಳ್ಳುವ ಟೀಸರ್ ಕೋಥಾದ ಪಾತಕಿಗಳನ್ನು ಪರಿಚಯಿಸುತ್ತದೆ. ‘ಇದು ಗಾಂಧಿಗ್ರಾಮ ಅಲ್ಲ. ಇದು ಕೋಥಾ’ ಎಂದು ಕೇಳಿಸುತ್ತದೆ. ಇದು ಕೋಥಾ ರಾಜನ ಎರಡು ಯುಗಗಳ ಕತೆಯನ್ನು ಪರಿಚಯಿಸ ಹೊರಟಿದೆ. ದುಲ್ಕರ್‌ ಸಲ್ಮಾನ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಟೀಸರ್‌ ಹಂಚಿಕೊಂಡಿದ್ದಾರೆ. ದುಲ್ಕರ್‌ ತಂದೆ, ನಟ ಮಮ್ಮೂಟಿ ಚಿತ್ರತಂಡಕ್ಕೆ ಶುಭಕೋರಿ ಟ್ವೀಟ್‌ ಮಾಡಿದ್ದಾರೆ.

ಈ ಆಕ್ಷನ್‌ – ಥ್ರಿಲ್ಲರ್‌ ಚಿತ್ರವನ್ನು ಅಭಿಲಾಷ್ ಜೋಶಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಐಶ್ವರ್ಯ ಲಕ್ಷ್ಮಿ ನಟಿಸಿದ್ದಾರೆ. ಶಬೀರ್ ಕಲ್ಲರಕ್ಕಲ್, ಚೆಂಬನ್ ವಿನೋದ್ ಜೋಸ್, ನೈಲಾ ಉಷಾ, ಶಾಂತಿ ಕೃಷ್ಣ ಮುಖ್ಯ ಪಾತ್ರಗಳಲ್ಲಿದ್ದಾರೆ. ಮಾಸ್ ಎಂಟರ್‌ಟೇನರ್‌ ಚಿತ್ರವನ್ನು ವೇಫೇರರ್ ಫಿಲ್ಮ್ಸ್ ಮತ್ತು ಝೀ ಸ್ಟುಡಿಯೋಸ್ ನಿರ್ಮಿಸಿದೆ. ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಟೀಸರ್‌ ಬಿಡುಗಡೆಯಾಗಿದೆ. ನಿಮಿಶ್ ರವಿ ಛಾಯಾಗ್ರಹಣ, ಅಭಿಲಾಷ್ ಎನ್ ಚಂದ್ರನ್ ಚಿತ್ರಕಥೆ ಚಿತ್ರಕ್ಕಿದೆ. ಜೇಕ್ಸ್ ಬಿಜಾಯ್ ಮತ್ತು ಶಾನ್ ರೆಹಮಾನ್ ಸಂಗೀತ ಸಂಯೋಜಿಸಿದ್ದು, ಸಿನಿಮಾ ಆಗಸ್ಟ್‌ 24ರಂದು ತೆರೆಕಾಣಲಿದೆ.

Previous articleಯುದ್ಧ ಗೆದ್ದ ‘ಮಾಮನ್ನನ್‌’
Next article‘ಕೀಡಾ ಕೋಲಾ’ ಟೀಸರ್‌ | ತರುಣ್‌ ಭಾಸ್ಕರ್‌ ಮತ್ತು ಬ್ರಹ್ಮಾನಂದಂ ಕ್ರೈಂ – ಕಾಮಿಡಿ

LEAVE A REPLY

Connect with

Please enter your comment!
Please enter your name here