ಮಹಿ ವಿ ರಾಘವ್‌ ನಿರ್ದೇಶನದ ‘ಯಾತ್ರಾ 2’ ತೆಲುಗು ಬಯೋಪಿಕ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಮ್ಮೂಟಿ ಮತ್ತು ಜೀವಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಆಂಧ್ರದ ಪ್ರಭಾವಿ ರಾಜಕೀಯ ಮುಖಂಡರಾದ ದಿವಂಗತ ವೈ ಎಸ್‌ ರಾಜಶೇಖರ ರೆಡ್ಡಿ, ಜಗನ್‌ ಮೋಹನ್‌ ರೆಡ್ಡಿ ಅವರ ರಾಜಕೀಯ ಬದುಕಿನ ಏಳು – ಬೀಳು ಚಿತ್ರದ ಕಥಾವಸ್ತು.

ಮಮ್ಮೂಟಿ ಮತ್ತು ಜೀವಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಯಾತ್ರಾ 2’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಮಹಿ ವಿ ರಾಘವ್ ನಿರ್ದೇಶಿಸಿದ್ದಾರೆ. ‘ಯಾತ್ರಾ’ ಚಿತ್ರದ ಮೊದಲ ಭಾಗವು ರಾಜ್ಯಾದ್ಯಂತ ಪಾದಯಾತ್ರೆ ನಡೆಸುವ ಮೂಲಕ ವೈಎಸ್ ರಾಜಶೇಖರ ರೆಡ್ಡಿ ಅವರನ್ನು ಚುನಾವಣಾ ಸೋಲಿನ ಅಂಚಿನಿಂದ ಹೇಗೆ ರಕ್ಷಿಸಿತು ಎಂಬುದರ ಮೇಲೆ ಕೇಂದ್ರೀಕೃತವಾಗಿತ್ತು. ಆ ಘಟನೆಗಳು ಅವರನ್ನು ರಾಜ್ಯದ ಅಪ್ರತಿಮ ವ್ಯಕ್ತಿಯಾಗಲು ಕಾರಣವಾಯಿತು. ಭಾಗ ಎರಡರಲ್ಲಿ ಪ್ರಸ್ತುತ ಆಂದ್ರಪ್ರದೇಶದ ಮುಖ್ಯಮಂತ್ರಿಗಳಾದ Y S ಜಗನ್ ಮೋಹನ್ ರೆಡ್ಡಿ ಅವರ ಜೀವನ, ರಾಜಕೀಯದ ಕುರಿತಾಗಿದೆ. ಜಗನ್ ಮೋಹನ್‌ ರೆಡ್ಡಿ ತನ್ನ ತಂದೆ ಹಲವು ವರ್ಷಗಳಿಂದ ಗಳಿಸಿದ್ದ ಬೆಂಬಲ ಮತ್ತು ಅಭಿಮಾನವನ್ನು ತೋರಿಸುವ ಘಟನೆಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಜಗನ್ ತಮ್ಮ ತಂದೆಯ ಅಕಾಲಿಕ ಮರಣದ ನಂತರ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ನಂತರ ಅವರ ರಾಜಕೀಯ ಪ್ರತಿಸ್ಪರ್ಧಿಗಳು ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಲು ಪಿತೂರಿ ನಡೆಸುತ್ತಿರುವುದನ್ನು ಟೀಸರ್‌ನಲ್ಲಿ ಕಾಣಬಹುದು.

ಈ ಚಿತ್ರವು 2019ರ ಮಮ್ಮೂಟಿ ಅಭಿನಯದ ‘ಯಾತ್ರಾ’ ಚಿತ್ರದ ಮುಂದುವರೆದ ಭಾಗವಾಗಿದ್ದು, ಸಿನಿಮಾ ಆಂಧ್ರದ ಪ್ರಸ್ತುತ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಕಥೆಯನ್ನು ಹೇಳಲಿದೆ. ಜಗನ್‌ ಮೋಹನ್‌ ರೆಡ್ಡಿ ಅವರ ಪಾತ್ರವನ್ನು ಜೀವಾ ನಿರ್ವಹಿಸಿದ್ದಾರೆ. ಭಾಗ ಒಂದರಲ್ಲಿ ಮಮ್ಮುಟಿ ಅವರು ವೈ ಎಸ್‌ ರಾಜಶೇಖರ್‌ ಅವರ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರವನ್ನು ಸಹ ಮಹಿ ವಿ ರಾಘವ್ ಅವರೇ ನಿರ್ದೇಶಿಸಿದ್ದರು. ಚಿತ್ರವನ್ನು V Celluloid ಮತ್ತು Three Autumn Leaves ಬ್ಯಾನರ್‌ ಅಡಿಯಲ್ಲಿ ಶಿವ ಮೇಕಾ ನಿರ್ಮಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದು, ಆರ್ ಮಾಧಿ ಮತ್ತು ಶ್ರವಣ್ ಕಾಟಿಕನೇನಿ ಸಂಕಲನ ಮಾಡಿದ್ದಾರೆ. ಚಿತ್ರವು ಮುಂದಿನ ತಿಂಗಳು ಫೆಬ್ರವರಿ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here