ನಟ ವಿಜಯ್‌ ಸೇತುಪತಿ ಅವರು ‘ಮಂಗೈ’ ತಮಿಳು ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಇದೊಂದು ಮಹಿಳಾ ಕೇಂದ್ರಿತ ಕತೆ. ಗುಬೇಂತಿರನ್‌ ಕಾಮಚಿ ನಿರ್ದೇಶನದ ಸಿನಿಮಾದ ನಾಯಕನಟಿಯಾಗಿ ಕಾಯಲ್‌ ಆನಂದಿ ನಟಿಸಿದ್ದಾರೆ.

ಕಾಯಲ್ ಆನಂದಿ ಅಭಿನಯದ ‘ಮಂಗೈ’ ತಮಿಳು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಟ ವಿಜಯ್ ಸೇತುಪತಿ, ಚಲನಚಿತ್ರ ನಿರ್ಮಾಪಕರಾದ ವೆಟ್ರಿಮಾರನ್ ಮತ್ತು ಅಮೀರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರವನ್ನು ಗುಬೇಂತಿರನ್ ಕಾಮಚಿ ನಿರ್ದೇಶಿಸುತ್ತಿದ್ದು, ಚಿತ್ರದ ಪೋಸ್ಟರ್‌ನಲ್ಲಿ ಕಾಯಲ್‌ ನಿಂತಿದ್ದು, ಅವರ ಪೋಟೋವನ್ನು ಮೋಬೈಲ್‌ಗಳಲ್ಲಿ ಸೆರೆಹಿಡಿಯುವ ರೀತಿಯಾಗಿ ಕಾಣಿಸುತ್ತದೆ. ಈ ಮೂಲಕ ಮಹಿಳಾ ಕೇಂದ್ರಿತ ಚಲನಚಿತ್ರದ ಬಗ್ಗೆ ಪೋಸ್ಟರ್ ಸುಳಿವು ನೀಡುತ್ತದೆ. ಚಿತ್ರವನ್ನು JSM Pictures ಬ್ಯಾನರ್‌ ಅಡಿಯಲ್ಲಿ ಎ ಆರ್ ಜಾಫರ್ ಸಾದಿಕ್ ನಿರ್ಮಿಸಿದ್ದಾರೆ.

ಮಹಿಳಾ ಪ್ರಧಾನವಾದ ಈ ಸಿನಿಮಾದಲ್ಲಿ ಪುರುಷರ ದಬ್ಬಾಳಿಕೆಗೆ ಒಳಗಾದ ಮಹಿಳೆಯರು ಯಾವ ರೀತಿ ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆಂಬ ಕತೆಯಿದೆ. ಚಿತ್ರವನ್ನು ಕೇರಳದ ಮುನ್ನಾರ್ ಮತ್ತು ಪೂಪಾರಾ, ತಮಿಳುನಾಡಿನ ತೇಣಿ, ಕುಂಬಂ, ಕೂಡಲೂರ್, ಲೋವರ್ ಕ್ಯಾಂಪ್ ಮತ್ತು ಚೆನ್ನೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವು ಇದೇ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ದುಷ್ಯಂತ್ ಜಯಪ್ರಕಾಶ್, ರಾಮ್ ಮತ್ತು ಆದಿತ್ಯ ಕಥಿರ್ ಈ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ನಟ ಮತ್ತು ನಿರ್ಮಾಪಕ ಜಯಪ್ರಕಾಶ್ ಅವರ ಪುತ್ರ ದುಷ್ಯಂತ್‌ ಅವರು ಶಶಿಕುಮಾರ್ ನಿರ್ದೇಶನದ ‘ಈಸನ್’ (2010) ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

LEAVE A REPLY

Connect with

Please enter your comment!
Please enter your name here