ನನ್ಬನ್‌ ಗ್ರೂಪ್‌ ಉದ್ಯಮ ವಲಯದಲ್ಲಿ ಚಿರಪರಿಚಿತ ಸಂಸ್ಥೆ. ಅವರೀಗ ಮನರಂಜನಾ ಉದ್ಯಮ ಪ್ರವೇಶಿಸುತ್ತಿದ್ದಾರೆ. ತಮಿಳು ಸಿನಿಮಾ ನಿರ್ಮಾಣದೊಂದಿಗೆ ನನ್ಬನ್‌ ಎಂಟರ್‌ಟೇನ್‌ಮೆಂಟ್‌ಗೆ ಚಾಲನೆ ಸಿಗಲಿದೆ. ಮುಂದಿನ ದಿನಗಳಲ್ಲಿ PAN ಇಂಡಿಯಾ ಸಿನಿಮಾಗಳನ್ನು ನಿರ್ಮಿಸುವುದು ಅವರ ಯೋಜನೆ.

ಉದ್ಯಮ ವಲಯದಲ್ಲಿ ಹೆಸರು ಮಾಡಿರುವ ನನ್ಬನ್ ಗ್ರೂಪ್ ಮನರಂಜನಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದೆ. ನನ್ಬನ್ ಗ್ರೂಪ್ ವತಿಯಿಂದ ನನ್ಬನ್ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಸಂಸ್ಥೆ ಪ್ರಾರಂಭವಾಗಿದೆ. ಮೊನ್ನೆ ಚೆನ್ನೈನಲ್ಲಿ ನನ್ಬನ್ ಎಂಟರ್‌ಟೇನ್‌ಮೆಂಟ್‌ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನನ್ಬನ್ ಗ್ರೂಪ್ ಸಂಸ್ಥಾಪಕ ಗೋಪಾಲ ಕೃಷ್ಣನ್, ‘ನನ್ಬನ್ ಗ್ರೂಪ್ ಹಲವಾರು ಸಾಮಾಜಿಕ ಕಾರಣಗಳಿಗಾಗಿ ಸಹಾಯ ಹಸ್ತ ನೀಡುತ್ತಿದೆ. ನನ್ಬನ್ ಗ್ರೂಪ್ ಅನ್ನು ಪ್ರಾರಂಭಿಸಲು ಮುಖ್ಯ ಕಾರಣ ಸ್ನೇಹ. ನಾವು ಯಾವ ರೀತಿಯ ಜೀವನವನ್ನು ನಡೆಸುತ್ತೇವೆ ಮತ್ತು ನಾವು ಎಲ್ಲಿದ್ದೇವೆ ಎಂಬುದರ ಹೊರತಾಗಿಯೂ, ಸ್ನೇಹ ಸುತ್ತಮುತ್ತಲಿನವರಿಗೆ ಪ್ರೀತಿಯಿಂದ ಬೇಷರತ್ತಾದ ಸಹಾಯವನ್ನು ನೀಡುತ್ತದೆ. ನಮ್ಮಲ್ಲಿ ಜಾತಿ, ಮತ, ಸಮುದಾಯ ಅಥವಾ ಲಿಂಗದ ಆಧಾರದ ಮೇಲೆ ಜನರ ನಡುವೆ ವ್ಯತ್ಯಾಸವನ್ನು ಹೊಂದಿಲ್ಲ’ ಎಂದರು.

ನನ್ಬನ್‌ ಗ್ರೂಪ್‌ನಿಂದ ಇದೀಗ ನನ್ಬನ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ಆರಂಭವಾಗಿದೆ. ಈ ಸಂಸ್ಥೆಯಡಿ ಉತ್ತಮ – ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸುವುದು, ಯುವ ಪ್ರತಿಭಾವಂತರ ಕನಸುಗಳಿಗೆ ವೇದಿಕೆ ಒದಗಿಸುವುದು ತಮ್ಮ ಗುರಿ ಎನ್ನುತ್ತಾರೆ ಗೋಪಾಲಕೃಷ್ಣನ್‌. ‘ನನ್ಬನ್ ಗ್ರೂಪ್‌ನಿಂದ ನಾವೀಗ ನನ್ಬನ್ ಎಂಟರ್‌ಟೇನ್‌ಮೆಂಟ್‌ ಎಂಬ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಈ ಸಂಸ್ಥೆಯು ಸಿನಿಮಾ ನಿರ್ಮಾಣದತ್ತ ಗಮನಹರಿಸುತ್ತದೆ.‌ ಮೊದಲು ತಮಿಳು ಸಿನಿಮಾ ನಿರ್ಮಾಣ, ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಗುರಿ ಹೊಂದಿದ್ದೇವೆ’ ಎನ್ನುತ್ತಾರವರು. ನನ್ಬನ್ ಗ್ರೂಪ್ ಮುಖ್ಯಸ್ಥ ನರೈನ್ ರಾಮಸ್ವಾಮಿ, ನನ್ಬನ್ ಗ್ರೂಪ್ ಸಹಸಂಸ್ಥಾಪಕ ಮಣಿವಣ್ಣನ್ ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನನ್ಬನ್ ಗ್ರೂಪ್ ಭಾರತದ ರಾಯಭಾರಿ ನಟ ಆರಿ ಅರ್ಜುನನ್ ನನ್ಬನ್ ಸಂಸ್ಥೆ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡರು.

Previous articleಫಹಾದ್‌ ಫಾಸಿಲ್‌ ಬರ್ತ್‌ಡೇ | ಪೋಸ್ಟರ್‌ ರಿಲೀಸ್‌ ಮಾಡಿದ ‘ಪುಷ್ಪ2’ ಟೀಮ್‌
Next article‘ಸಪ್ತ ಸಾಗರದಾಚೆ ಎಲ್ಲೋ’ ಟೈಟಲ್‌ ಟ್ರ್ಯಾಕ್‌ | ಬಹುನಿರೀಕ್ಷಿತ ರಕ್ಷಿತ್‌ ಶೆಟ್ಟಿ ಸಿನಿಮಾ

LEAVE A REPLY

Connect with

Please enter your comment!
Please enter your name here