‘ಅಪಹರಣ್’ ಸೆಕೆಂಡ್‌ ಸೀಸನ್‌ Voot Select ನಲ್ಲಿ ಸ್ಟ್ರೀಮ್‌ ಆಗಲು ದಿನಗಣನೆ ಶುರುವಾಗಿದೆ. ಅರುಣೋದಯ್‌ ಸಿಂಗ್‌ ಅವರು ರುದ್ರ ಶ್ರೀವಾತ್ಸವ್‌ ಪಾತ್ರದಲ್ಲಿದ್ದು, ಹಿರಿಯ ನಟ ಜಿತೇಂದ್ರ, ನಿಧಿ ಸಿಂಗ್‌, ವರುಣ್‌ ಬಡೋಲಾ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್‌ 18ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

Voot Select ‘ಅಪಹರಣ್‌ 2’ ವೆಬ್‌ ಸರಣಿಯ ಟ್ರೈಲರ್‌ ಬಿಡುಗಡೆ ಮಾಡಿದೆ. ನಟ ಅರುಣೋದಯ ಸಿಂಗ್‌ ಸರಣಿಯಲ್ಲಿ ದೇಸಿ ಕಾಪ್‌ ರುದ್ರ ಶ್ರೀವಾತ್ಸವ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಏಕ್ತಾ ಕಪೂರ್‌ ಮತ್ತು ಜಿಯೋ ಸ್ಟುಡಿಯೋಸ್‌ ನಿರ್ಮಿಸಿರುವ ಸರಣಿಯಲ್ಲಿ ಪೊಲೀಸ್‌ ಅಧಿಕಾರಿ ರುದ್ರ, ಕ್ರಿಮಿನಲ್‌ ಮಾಸ್ಟರ್‌ಮೈಂಡ್‌ BBS ನನ್ನು ಕಿಡ್ನಾಪ್‌ ಮಾಡುವ ಟಾಸ್ಕ್‌ ಇದೆ. ಈ ಹಾದಿಯಲ್ಲಿ ಹತ್ತಾರು ದುಷ್ಟರನ್ನು ಆತ ಎದುರಿಸಬೇಕಾಗುತ್ತದೆ. ವಿದೇಶದಲ್ಲಿರುವ BBS ಕರೆತರಲು ಪೊಲೀಸ್‌ ಇಲಾಖೆಯಿಂದ ಅಧಿಕೃತ ಆರ್ಡರ್‌ ಇಲ್ಲವೆಂದಾದಾಗ ರುದ್ರ ಹೆಚ್ಚಿನ ಸಂಕಷ್ಟಕ್ಕೆ ಸಿಲುಕುತ್ತಾನೆ. ಟ್ರೈಲರ್‌ನಲ್ಲಿ ಬಾಲಿವುಡ್‌ನ ಜನಪ್ರಿಯ ಸಾಂಗ್‌ಗಳು ಹಿನ್ನೆಲೆಯಲ್ಲಿ ಕೇಳಿಬರುವುದು ವಿಶೇಷ.

2018ರಲ್ಲಿ ಹನ್ನೆರೆಡು ಎಪಿಸೋಡುಗಳ ಮೊದಲ ಸೀಸನ್‌ ಸ್ಟ್ರೀಮ್‌ ಆಗಿತ್ತು. ಅರುಣೋದಯ ಸಿಂಗ್‌ ಜೊತೆ ಆಗ ವರುಣ್‌ ಬಡೋಲಾ, ಮಹೀ ಗಿಲ್‌, ಮೋನಿಕಾ ಚೌಧರಿ, ನಿಧಿ ಸಿಂಗ್‌ ನಟಿಸಿದ್ದರು. ಈ ಸೀಸನ್‌ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ ವೀಕ್ಷಕರು 2ನೇ ಸೀಸನ್‌ ಎದುರು ನೋಡುತ್ತಿದ್ದರು. ಮೊದಲ ಸೀಸನ್‌ನಂತೆ ಸೆಕೆಂಡ್‌ ಸೀಸನ್‌ನಲ್ಲೂ ನಟ ಅರುಣೋದಯ ಸಿಂಗ್‌ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಅವರು ಗಮನ ಸೆಳೆಯುತ್ತಾರೆ. ಹಿರಿಯ ನಟ ಜಿತೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸರಣಿಯ ಸೆಕೆಂಡ್‌ ಸೀಸನ್‌ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ರುದ್ರ ಶ್ರೀವಾತ್ಸವ್‌ ಮರಳುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ ಒಳ್ಳೆಯ ಮನಸ್ಸಿನ ಆದರೆ ಖಡಕ್‌ ಪೊಲೀಸ್‌ ಆಫೀಸರ್‌. ಅಪಹರಣದ ಕೇಸ್‌ಗಳನ್ನು ಬಗೆಹರಿಸುವ ಎಕ್ಸ್‌ಪರ್ಟ್‌. ಈ ಬಾರಿ ಮತ್ತಷ್ಟು ರೋಚಕ ಕೇಸ್‌ಗಳಲ್ಲಿ ರುದ್ರನನ್ನು ಕಣ್ತುಂಬಿಕೊಳ್ಳಬಹುದು”. ಎರಡನೇ ಸೀಸನ್‌ ನಿರೀಕ್ಷೆಯಲ್ಲಿದ್ದ ವೀಕ್ಷಕರು ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಸರಣಿ ಮಾರ್ಚ್‌ 18ರಿಂದ Voot Selectನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಮನೋಜ್‌ ಬಾಜಪೈ – ಕೊಂಕಣ ನೆಟ್‌ಫ್ಲಿಕ್ಸ್‌ ಡಾರ್ಕ್‌ ಕಾಮಿಡಿ ಸರಣಿ; ಇಲ್ಲಿದೆ ಪ್ರೋಮೊ
Next articleBiffes | ವರ್ತಮಾನಕ್ಕೆ ಕನ್ನಡಿ ಹಿಡಿಯುವ ಬೋಸ್ನಿಯಾ ಚಿತ್ರ ‘Where Are You Going, Aida?’

LEAVE A REPLY

Connect with

Please enter your comment!
Please enter your name here