ಫುಟ್‌ಬಾಲ್‌ ಲೆಜೆಂಡ್ ಮರಡೋನಾ ವೃತ್ತಿ, ಬದುಕು ಆಧರಿಸಿದ ‘ಮರಡೋನಾ: ಬ್ಲೆಸ್ಡ್‌ ಡ್ರೀಮ್‌’ ಸರಣಿ ಸಿದ್ಧವಾಗಿದೆ. ಇದೇ ಅಕ್ಟೋಬರ್‌ 29ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸರಣಿ ಸ್ಟ್ರೀಮ್ ಆಗಲಿದೆ.

ಫುಟ್‌ಬಾಲ್ ಜಗತ್ತಿನ ದಂತಕತೆ ಮರಡೋನಾ ಅಭಿಮಾನಿಗಳಿಗೆ ಇದು ಸಿಹಿಸುದ್ದಿ. ಮರಡೋನಾ ವೃತ್ತಿ, ಬದುಕನ್ನು ಆಧರಿಸಿ ತಯಾರಾಗಿರುವ ‘ಮರಡೋನಾ: ಬ್ಲೆಸ್ಡ್‌ ಡ್ರೀಮ್‌’ ಸರಣಿ ಇದೇ ಅಕ್ಟೋಬರ್‌ 29ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ನಿರ್ದೇಶಕ ಅಲೆಜಾಂಡ್ರೊ ಎಮಿಟ್ಟಾ ಈ ಸರಣಿಯನ್ನು ಅರ್ಜೆಂಟೈನಾ, ಮೆಕ್ಸಿಕೋ ಮತ್ತು ಉರುಗ್ವೆಯಲ್ಲಿ ಚಿತ್ರಿಸಿದ್ದಾರೆ. ಮೂಲ ಒರಿಜಿನಲ್ ಸ್ಪಾನಿಷ್‌ ಭಾಷೆಯಲ್ಲಿದ್ದು, ಭಾರತೀಯರಿಗೆ ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸರಣಿ ಲಭ್ಯವಾಗಲಿದೆ. ಜಗತ್ತಿನ ಸಾರ್ವಕಾಲಿಕ ಶ್ರೇ‍ಷ್ಠ ಫುಟ್‌ಬಾಲ್ ಆಟಗಾರರಲ್ಲೊಬ್ಬರು ಮರಡೋನಾ. ಫುಟ್‌ಬಾಲ್‌ ದುನಿಯಾದ ಮತ್ತೊಬ್ಬ ಶ್ರೇಷ್ಠ ಆಟಗಾರ ಪೀಲೆ ಅವರೊಂದಿಗೆ ‘FIFA ಶತಮಾನದ ಆಟಗಾರ’ ಗೌರವ ಹಂಚಿಕೊಂಡಿದ್ದಾರೆ.

ಮೊದಲ ಸೀಸನ್‌ನಲ್ಲಿ ಹತ್ತು ಮತ್ತು ಎರಡನೇ ಸೀಸನ್‌ ಹತ್ತು ಎಪಿಸೋಡ್‌ಗಳು ಸ್ಟ್ರೀಮ್ ಆಗಲಿವೆ. ಸರಣಿಯಲ್ಲಿ ಮರಡೋನಾ ಬಾಲ್ಯ, ಯೌವ್ವನ, ಡ್ರಗ್ಸ್‌ ಪ್ರಕರಣ, ಗರ್ಲ್‌ಫ್ರೆಂಡ್‌ ಆರೋಪ, ‘ಹ್ಯಾಂಡ್‌ ಆಫ್‌ ಗಾಡ್‌’ ವಿವಾದ ಸೇರಿದಂತೆ ಹಲವು ಸಂಗತಿಗಳು ಪ್ರಸ್ತಾಪವಾಗಲಿವೆ. ಜುವಾನ್‌ ಪಲೊಮಿನೊ ಮತ್ತು ನಿಕೋಲಸ್‌ ಗೋಲ್ಡ್‌ಸ್ಮಿಡ್ತ್‌ ಮರಡೋನಾ ಬಾಲ್ಯ ಮತ್ತು ಯೌವ್ವನದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ದೇಶ, ಭಾಷೆಗಳ ಗಡಿಗಳನ್ನು ಮೀರಿ ಎಲ್ಲರಿಗೂ ಸ್ಫೂರ್ತಿಯಾಗಬಹುದಾದ ಸರಣಿಯಿದು. ಭಾರತದ ಐದು ಪ್ರಾದೇಷಿಕ ಭಾಷೆಗಳಲ್ಲಿ ಸರಣಿ ಸ್ಟ್ರೀಮ್‌ ಆಗಲಿದ್ದು, ಮರಡೋನಾರ ಭಾರತೀಯ ಅಭಿಮಾನಿಗಳಿಗೆ ಖಂಡಿತ ಇದು ಇಷ್ಟವಾಗಲಿದೆ” ಎಂದಿದ್ದಾರೆ ಅಮೇಜಾನ್ ಪ್ರೈಮ್‌ ಭಾರತೀಯ ವಿಭಾಗ ನಿರ್ದೇಶಕ ಸುಶಾಂತ್ ಶ್ರೀರಾಮ್‌.

Previous article‘ಓಲ್ಡ್ ಮಾಂಕ್’ನಲ್ಲೂ ಗಿಚ್ಚ ಗಿಲಿಗಿಲಿ; ಇದು ಶ್ರೀನಿ ಪ್ರಪಂಚ
Next article‘ಆಶ್ರಮ್’ ವೆಬ್ ಸರಣಿ ಶೂಟಿಂಗ್ ಸೆಟ್‌ ಮೇಲೆ ದಾಳಿ; ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ

LEAVE A REPLY

Connect with

Please enter your comment!
Please enter your name here