ದೇವರಾಜ್‌ ಪೂಜಾರಿ ರಚಿಸಿ, ನಿರ್ದೇಶಿಸಿರುವ ‘ಮತ್ಸ್ಯಗಂಧ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಪೃಥ್ವಿ ಅಂಬಾರ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ಥ್ರಿಲ್ಲರ್‌ ಸಿನಿಮಾ ಇದೇ ಫೆಬ್ರವರಿ 23ರಂದು ತೆರೆಗೆ ಬರುತ್ತಿದೆ.

ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮತ್ಸ್ಯಗಂಧ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ದೇವರಾಜ್ ಪೂಜಾರಿ ಬರೆದು, ನಿರ್ದೆಶಿಸಿದ್ದಾರೆ. ಸಿನಿಮಾದಲ್ಲಿ ಪೃಥ್ವಿ ಅಂಬಾರ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರ ಬಾಷೆ, ಬದುಕು, ಸಂಪ್ರದಾಯ, ಹೋರಾಟ, ಮೀನುಗಾರರ ಸ್ವಾಭಿಮಾನ, ಬವಣೆಯನ್ನು ಪರಿಚಯಿಸುತ್ತ ಸಾಗುವ ಚಿತ್ರವಿದು. ಸಮಾಜದಲ್ಲಿ ಪೋಲಿಸರು ಮತ್ತು ಜನಸಾಮಾನ್ಯರ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತಾ ಸಾಗುತ್ತದೆ. ನಟ ಪ್ರಶಾಂತ್ ಸಿದ್ದಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಚಿತ್ರದಲ್ಲಿ ಶರತ್ ಲೋಹಿತಾಶ್ವ, ಭಜರಂಗಿ ಲೋಕೇಶ್, ನಿಧಿನ್ ಹೆಗ್ಡೆ, ನಾಗರಾಜ್ ಬೈಂದೂರು, ಕಿರಣ್ ನಾಯಕ್, ಅಶೋಕ್ ಹೆಗ್ಡೆ, ಪಿಡಿ ಸತೀಶ್ ಚಂದ್ರ, ದಿಶಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸದ್ಯಕ್ಕೆ ಕನ್ನಡದ 5 ಚಿತ್ರಗಳು ಫೆಬ್ರವರಿ 23ರಂದು ಬಿಡುಗಡೆಗೆ ಸಿದ್ಧವಾಗಿವೆ. ಪೃಥ್ವಿ ಅವರ ‘ಮತ್ಸ್ಯಗಂಧ’ ಹಾಗೂ ‘ಫಾರ್‌ ರಿಜಿಸ್ಟ್ರೇಶನ್‌’ ಸಿನಿಮಾಗಳು ಇದೇ ದಿನದಂದು ತೆರೆಕಾಣಲಿವೆ. ಇವರ ‘ಜೂನಿ’ ಚಿತ್ರ ಸದ್ಯ ಚಿತ್ರಮಂದಿರದಲ್ಲಿದೆ. ಈ ಚಲನಚಿತ್ರವನ್ನು Sahyadri Productions ಬ್ಯಾನರ್‌ ಅಡಿಯಲ್ಲಿ B S ವಿಶ್ವನಾಥ್‌ ನಿರ್ಮಿಸಿದ್ದಾರೆ. ಪೃಥ್ವಿ ಅವರು ‘ಲೈಫ್ ಈಸ್ ಬ್ಯೂಟಿಫುಲ್’, ‘ಭುವನಂ ಗಗನಂ’, ‘ಎ ಡೇ ಇನ್ ಡಾಲರ್ಸ್‌ಪೇಟೆ’, ʼಅಬ ಜಬ ದಬ’ ಮತ್ತು ‘ಅಮರ ಮಧುರ ಪ್ರೇಮ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here