ಹರೀಶ್‌ ಶಂಕರ್‌ ನಿರ್ದೇಶನದಲ್ಲಿ ರವಿತೇಜ ನಟಿಸುತ್ತಿರುವ ‘ಮಿಸ್ಟರ್‌ ಬಚ್ಚನ್‌’ ತೆಲುಗು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಅಜಯ್‌ ದೇವಗನ್‌ ನಟನೆಯ ‘ರೇಡ್‌’ ಹಿಂದಿ ಚಿತ್ರದ ಅಧಿಕೃತ ರಿಮೇಕಿದು. ‘ಯಾರಿಯಾನ್ 2’ ಸಿನಿಮಾ ಖ್ಯಾತಿಯ ಭಾಗ್ಯಶ್ರೀ ಬೋರ್ಸೆ ಸಿನಿಮಾದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ತೆಲುಗು ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಈ ಸಿನಿಮಾ ಅಜಯ್ ದೇವಗನ್ ಅಭಿನಯದ ‘ರೇಡ್’ ಹಿಂದಿ ಚಿತ್ರದ ಅಧಿಕೃತ ರಿಮೇಕ್. ಚಿತ್ರವನ್ನು ಹರೀಶ್ ಶಂಕರ್ ನಿರ್ದೇಶಿಸುತ್ತಿದ್ದಾರೆ. People Media Factory ಬ್ಯಾನರ್‌ ಅಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ. Panorama Studios ಮತ್ತು T Series ಸಹನಿರ್ಮಾಣವಿದೆ. ಚಿತ್ರದಲ್ಲಿ ‘ಯಾರಿಯಾನ್ 2’ ಸಿನಿಮಾ ಖ್ಯಾತಿಯ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದು, ಇವರು ಈ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಯನಂಕ ಬೋಸ್ ಛಾಯಾಗ್ರಹಣವಿರುವ ಚಿತ್ರಕ್ಕೆ ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜಿಸುತ್ತಿದ್ದಾರೆ. ‘ದುವ್ವಾಡ ಜಗನ್ನಾಥಂ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ನಂತರ ಈ ಸಿನಿಮಾ ಹರೀಶ್ ಶಂಕರ್ ಅವರೊಂದಿಗೆ ಅಯನಂಕ ಬೋಸ್‌ ಅವರ ಮೂರನೇ ಸಹಯೋಗವಾಗಿದೆ. ‘ಸಲಾರ್’, ‘ಕೆಜಿಎಫ್’ ಖ್ಯಾತಿಯ ಉಜ್ವಲ್ ಕುಲಕರ್ಣಿ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ರವಿತೇಜ ಈ ಹಿಂದೆ ‘ಟೈಗರ್‌ ನಾಗೇಶ್ವರ ರಾವ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ Pan India ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ನೂಪುರ್‌ ಸನೂರ್‌ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಸಿನಿಮಾಗೆ ವಂಶಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದರು.

LEAVE A REPLY

Connect with

Please enter your comment!
Please enter your name here