ಶಂಕರ್‌ ರಾಮನ್‌ ನಿರ್ದೇಶನಲ್ಲಿ ಸಾನ್ಯಾ ಮಲ್ಹೋತ್ರಾ ಮತ್ತು ವಿಕ್ರಾಂತ್‌ ಮೆಸ್ಸೀ ನಟಿಸಿರುವ ‘ಲವ್‌ ಹಾಸ್ಟೆಲ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಟ ಶಾರುಖ್‌ ಖಾನ್‌ ಮತ್ತು ದೃಶ್ಯಂ ಫಿಲ್ಮ್ಸ್‌ ನಿರ್ಮಾಣದ ಸಿನಿಮಾ ಫೆಬ್ರವರಿ 25ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ಬಾಬ್ಬಿ ಡಿಯೋಲ್‌, ವಿಕ್ರಾಂತ್‌ ಮೆಸ್ಸಿ ಮತ್ತು ಸಾನ್ಯಾ ಮಲ್ಹೋತ್ರಾ ಅಭಿನಯದ ‘ಲವ್‌ ಹಾಸ್ಟೆಲ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರೊಮ್ಯಾಂಟಿಕ್‌ ಡ್ರಾಮಾ ಕತೆಗೆ ನಿರ್ದೇಶಕ ಶಂಕರ್‌ ರಾಮನ್‌ ಕ್ರೈಂ ಆಂಗಲ್‌ ಕೊಟ್ಟಿದ್ದಾರೆ. ಅಶು ಮತ್ತು ಜ್ಯೋತಿ ಪ್ರೀತಿಗೆ ಶ್ರೀಮಂತ ಕುಟುಂಬದ ಜ್ಯೋತಿ ಅವರ ಮನೆಯವರ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಪ್ರೇಮಿಗಳು ಓಡಿ ಹೋದಾಗ ಅವರನ್ನು ಹಿಡಿದು ತರುವ ಕೆಲಸವನ್ನು ಪಾತಕಿ ಡ್ಯಾಗರ್‌ಗೆ (ಬಾಬ್ಬಿ ಡಿಯೋಲ್‌) ವಹಿಸಲಾಗುತ್ತದೆ. ಪ್ರೇಮಿಗಳನ್ನು ಚೇಸ್‌ ಮಾಡುವ ಡ್ಯಾಗರ್‌ ಪಿಸ್ತೂಲಿನಿಂದ ಹಾರುವ ಗುಂಡುಗಳು ಹಲವು ಹೆಣಗಳನ್ನು ಉರುಳಿಸುತ್ತವೆ. ಬಾಬ್ಬಿ ಪಾತ್ರ ಪ್ರೇಮಿಗಳನ್ನು ಬೇರ್ಪಡಿಸುತ್ತದೋ? ಇಲ್ಲವೇ ಅವರ ಪೋಷಕರನ್ನೇ ಎದುರು ಹಾಕಿಕೊಳ್ಳುತ್ತದೋ? ಎನ್ನುವ ಕುತೂಹಲ ಕಾಯ್ದಿರಿಸಲಾಗಿದೆ.

ಬಾಬ್ಬಿ ಡಿಯೋಲ್‌ ಈ ಡ್ಯಾಗರ್‌ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆಯಾಗಿದ್ದಾರೆ. ಈ ಚಿತ್ರದ ಮೂಲಕ ‘ಪೋಷಕ ನಟ’ನಾಗಿ ಬೆಳ್ಳಿತೆರೆಯಲ್ಲಿ ಅವರ ಎರಡನೇ ಇನ್ನಿಂಗ್ಸ್‌ ಶುರುವಾಗುವಂತಿದೆ. “ಡ್ಯಾಗರ್‌ ತನ್ನದೇ ಆದ ಐಡಿಯಾಲಜಿ ಹೊಂದಿದ್ದಾನೆ. ಇದಕ್ಕೆ ಎದುರಾಗುವ ವ್ಯಕ್ತಿಗಳಿಗೆ ಉಳಿಗಾಲವಿಲ್ಲ. ಅವನು ತೀರಾ ದುಷ್ಟ. ಪಾತ್ರವನ್ನು ಬರೆದಿರುವ ರೀತಿ ನನಗೆ ತುಂಬಾ ಇಷ್ಟವಾಯ್ತು. ಹಿಂದೆಂದೂ ಮಾಡಿರದಂತಹ ಪಾತ್ರ. ನನ್ನ ಕಂಫರ್ಟ್‌ ಜೋನ್‌ನಿಂದ ಹೊರತಾದ ಪಾತ್ರವಾದ್ದರಿಂದ ಸಮ್ಮತಿ ನೀಡಲು ತುಂಬಾ ಸಮಯ ತೆಗೆದುಕೊಂಡೆ” ಎನ್ನುತ್ತಾರೆ ಬಾಬ್ಬಿ. ನಟ ಶಾರುಖ್‌ ಖಾನ್‌ ಅವರ ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಮತ್ತು ದೃಶ್ಯಂ ಫಿಲ್ಮ್ಸ್‌ ಜೊತೆಗೂಡಿ ನಿರ್ಮಿಸಿರುವ ಸಿನಿಮಾ ZEE5ನಲ್ಲಿ ಫೆಬ್ರವರಿ 25ರಿಂದ ಸ್ಟ್ರೀಮ್‌ ಆಗಲಿದೆ.

Previous articleಅತ್ಯುತ್ತಮ ತಂತ್ರಗಾರಿಕೆಯ ಮೊದಲ ಮಹಾಯುದ್ಧದ ಚಿತ್ರಕಥನ ‘1917’
Next articleವೆಬ್‌ ಸರಣಿಯಾಗಿ ಮೀನಾ ಕುಮಾರಿ – ಕಮಲ್‌ ಅಮ್ರೋಹಿ ಲವ್‌ಸ್ಟೋರಿ

LEAVE A REPLY

Connect with

Please enter your comment!
Please enter your name here