ಎರಿಕ್ ಮೊರ್ಲೆ ಅವರ ಕನಸಿನ ಯೋಜನೆ ‘ಮಿಸ್ ವರ್ಲ್ಡ್’ ಶುರುವಾಗಿದ್ದು 1951ರಲ್ಲಿ. ಸ್ವೀಡನ್ ದೇಶದ ಕಿಕಿ ಹಕನ್ಸನ್ ಮೊದಲ ಬಾರಿಗೆ ಕಿರೀಟ ತೊಟ್ಟಿದ್ದರು. ಭಾರತಕ್ಕೆ ಮೊದಲ ಮಿಸ್ ವರ್ಲ್ಡ್ ತಂದುಕೊಟ್ಟವರು ರೀಟಾ ಫೆರಿಯಾ (1966). ಅಂದಹಾಗೆ ಈ ಬಾರಿ 71ನೇ ಆವೃತ್ತಿಯ Miss World ಸ್ಪರ್ಧೆಗೆ ಭಾರತ ಸಾಕ್ಷಿಯಾಗುತ್ತಿದೆ.
ಜಾಗತಿಕ ಮಟ್ಟದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ – ‘ಮಿಸ್ ವರ್ಲ್ಡ್’. ಈ ಸ್ಪರ್ಧೆಯಲ್ಲಿ ತಮ್ಮ ನೆಲವನ್ನು ಪ್ರತಿನಿಧಿಸಿ ಕಿರೀಟ ತೊಟ್ಟುಬರಲಿ ಎಂದು ಜಗತ್ತಿನ ಪ್ರತೀ ದೇಶಗಳು ಅಪೇಕ್ಷೆ ಪಡುತ್ತವೆ. ಕಳೆದ ಏಳು ದಶಕಗಳಿಂದ ಚಾಲ್ತಿಯಲ್ಲಿರುವ ‘Miss World’ ಶುರುವಾಗಿದ್ದು 1951 ರಲ್ಲಿ. ಇದು ಅಮೆರಿಕದ ಎರಿಕ್ ಮೊರ್ಲೆ ಅವರ ಕನಸಿನ ಕೂಸು. ಲಂಡನ್‌ನಲ್ಲಿ ‘ಮಿಸ್ ವರ್ಲ್ಡ್’ ಪ್ರಧಾನ ಕಚೇರಿಯಿದೆ. ಎರಿಕ್ (2000) ಮರಣದ ನಂತರ ಅವರ ಪತ್ನಿ ಜ್ಯೂಲಿಯಾ ಮೊರ್ಲೆ ಅವರು ಸಂಸ್ಥೆಯ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಪ್ರಿಯ ಸೌಂದರ್ಯ ಸ್ಪರ್ಧೆಗಳಾದ ‘Miss Universe’ ಮತ್ತು ‘Miss Earth’ನಂತೆಯೇ ‘Miss World’ ಕೂಡ ಎಲ್ಲರಿಗೂ ಚಿರಪರಿಚಿತ.
Miss World ಸ್ಪರ್ಧೆಯಲ್ಲಿ ಹಲವು ದೇಶಗಳಿಂದ 17 ವರ್ಷ ಮೇಲ್ಪಟ್ಟ 27 ವರ್ಷದೊಳಗಿನ ಅವಿವಾಹಿತ ಯುವತಿಯರು ಭಾಗವಹಿಸುತ್ತಾರೆ. ಒಂದು ತಿಂಗಳ ಅವಧಿಯಲ್ಲಿ ನಡೆಯುವ ಥರಹೇವಾರಿ ಕಾಂಪಟೇಶನ್‌ಗಳಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಿ, ಸೈ ಎನಿಸಿಕೊಂಡ ಒಬ್ಬ ಯುವತಿಗೆ Miss World ಪಟ್ಟ. ಗೆದ್ದ ಯುವತಿಗೆ 10 ಕೋಟಿ ನಗದು, Miss World ಕಿರೀಟ. ಸ್ಪರ್ಧೆಯ ವಿಜೇತರು ಒಂದು ವರ್ಷ ಕಾಲ Miss World ಸಂಸ್ಥೆಯ ರಾಯಭಾರಿಯಾಗಿರುತ್ತಾರೆ. ಮತ್ತು ಪ್ರಪಂಚದಾದ್ಯಂತ ಸುತ್ತಿ, ಹಲವಾರು ಸಂಸ್ಥೆಗಳಿಂದ ಹಣವನ್ನು ಸಂಗ್ರಹಿಸಿ ಜಗತ್ತಿನಾದ್ಯಂತ NGO ಸಂಸ್ಥೆಗಳಿಗೆ ದತ್ತಿ ದಾನಗಳನ್ನು ಮಾಡುತ್ತಾರೆ. ವಿಶ್ವ ಸುಂದರಿ ಸಂಸ್ಥ, ಆರಂಭವಾದಾಗಿನಿಂದ ಅಂಗವಿಕಲ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಶತಕೋಟಿಗಿಂತ ಹೆಚ್ಚಿನ ಹಣ ಸಂಗ್ರಹಿಸಿದೆ. Miss World ಅನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ಫ್ರಾಂಚೈಸ್ ಮಾಡಲಾಗಿದೆ.
Miss Worldನಲ್ಲಿ ಭಾಗವಹಿಸುವ ಯುವತಿಯರು ವಿವಿಧ ಸ್ಪರ್ಧೆಗಳನ್ನು ಎದುರಿಸುತ್ತಾರೆ. ಅದರಲ್ಲಿ ‘Fast-Track’ ಸ್ಪರ್ಧೆಗಳ ವಿಜೇತರು ನೇರವಾಗಿ ಕ್ವಾರ್ಟರ್ ಅಥವಾ ಸೆಮಿಫೈನಲ್‌ಗೆ ಆಯ್ಕೆಯಾಗುತ್ತಾರೆ. ಮಿಸ್‌ವರ್ಲ್ಡ್ ಬ್ಯೂಟಿ ವಿತ್ ಎ ಪರ್ಪಸ್, ಮಿಸ್‌ವರ್ಲ್ಡ್ ಟ್ಯಾಲೆಂಟ್, ಮಿಸ್‌ವರ್ಲ್ಡ್ ಟಾಪ್ ಮಾಡೆಲ್, ಮಿಸ್‌ವರ್ಲ್ಡ್ ಸ್ಪೋರ್ಟ್ಸ್ ಚಾಲೆಂಜ್, ಮಲ್ಟಿಮೀಡಿಯಾ ಅವಾರ್ಡ್ – ಇವು ‘Fast-Track’ ವಿಭಾಗಗಳು. ಮಿಸ್ ವರ್ಲ್ಡ್ ಸ್ಪೋರ್ಟ್ಸ್ ಅನ್ನು 2003ರಲ್ಲಿ, ಮಿಸ್ ವರ್ಲ್ಡ್ ಟಾಪ್ ಮಾಡೆಲ್ ಅನ್ನು 2004ರಲ್ಲಿ, ಮಿಸ್ ವರ್ಲ್ಡ್ ಮಲ್ಟಿಮೀಡಿಯಾವನ್ನು 2012ರಲ್ಲಿ ಅಳವಡಿಸಲಾಗಿದೆ. 2003ರಲ್ಲಿ ಸ್ಥಾಪಿಸಿದ್ದ ಮಿಸ್ ವರ್ಲ್ಡ್ ಬೀಚ್ ಬ್ಯೂಟಿಯನ್ನು 2015ರಲ್ಲಿ ತೆಗದುಹಾಕಲಾಯ್ತು.
1959ರಲ್ಲಿ BBC ನ್ಯೂಸ್ Miss World ಸ್ಪರ್ಧೆಯನ್ನು ಬಿತ್ತರಿಸಿತ್ತು. ದೂರದರ್ಶನದ ಆಗಮನದೊಂದಿಗೆ, ಜನಪ್ರಿಯತೆ ಇನ್ನೂ ಬೆಳೆಯಿತು. 1960 ಮತ್ತು 1970 ಅವಧಿಯ ಬ್ರಿಟಿಷ್ TVಯಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮಗಳಲ್ಲೊಂದಾಗಿ ಪ್ರಸಿದ್ಧಿಯಾಯಿತು. ಈ ಎಲ್ಲಾ ಹಂತಗಳನ್ನು ದಾಟಿ Miss World ತನ್ನದೇ ಆದ ಖ್ಯಾತಿ ಮುಂದುವರೆಸಿದೆ. ಮೊದಲ ಮಿಸ್ ವರ್ಲ್ಡ್ ಆಗಿ ಸ್ವೀಡನ್ನ ಕಿಕಿ ಹಕನ್ಸನ್ 1951ರಲ್ಲಿ ಮತ್ತು ಭಾರತದ ಮೊದಲ ಮಿಸ್ ವರ್ಲ್ಡ್ ರೀಟಾ ಫೆರಿಯಾ 1966ರಲ್ಲಿ ಆಯ್ಕೆಯಾಗಿದ್ದರು. 1994ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತಾ ಮುಖಿ, 2000ರಲ್ಲಿ ಪ್ರಿಯಾಂಕಾ ಛೋಪ್ರಾ ಮತ್ತು 2017ರಲ್ಲಿ ಮಾನುಷಿ ಛಿಲ್ಲರ್ ಮಿಸ್ ವರ್ಲ್ಡ್ ಗೌರವಕ್ಕೆ ಪಾತ್ರರಾಗಿದ್ದಾರೆ. Miss World 2022 ಆಗಿ ಪೋಲೆಂಡ್‌ನ Karolina Bielawska ಕಿರೀಟ ಅಲಂಕರಿಸಿದ್ದರು.
ವಿಶೇಷವೆಂದರೆ ಈ ಬಾರಿಯ Miss World 27 ವರ್ಷಗಳ ಬಳಿಕ ಭಾರತದಲ್ಲಿ ಎರಡನೇ ಬಾರಿಗೆ ಆಯೋಜನೆಗೊಂಡಿದ್ದು, 130ಕ್ಕೂ ಹೆಚ್ಚು ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ. ‘Femina Miss India 2022’ ವಿಜೇತ ಕನ್ನಡತಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Your favorite Miss World moments!
— Miss World (@MissWorldLtd) December 11, 2020
To celebrate our 70th birthday we are producing a Program looking back at the most special memories!
Share with us your favorite Miss World moments!
The most popular moments as voted for by our fans on Socials will be included! #MissWorld pic.twitter.com/R3PY7YJBxw