ಪ್ರೇಮ್‌ ಕುಮಾರ್‌ ನಿರ್ದೇಶನದ ‘ಕಾರ್ತಿ 27’ ತಮಿಳು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಕಾರ್ತಿ ಹೀರೋ ಆಗಿ ನಟಿಸುತ್ತಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಕರುಣಾಕರನ್‌, ಶ್ರೀದಿವ್ಯಾ ಮತ್ತು ಸ್ವಾತಿ ಕೊಂಡೆ ಇದ್ದಾರೆ. ಗೋವಿಂದ್‌ ವಸಂತ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಕಾರ್ತಿ ಮುಖ್ಯ ಭೂಮಿಕೆಯಲ್ಲಿರುವ ‘ಕಾರ್ತಿ 27′ ತಮಿಳು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಲನಚಿತ್ರವನ್ನು ’96’ ಖ್ಯಾತಿಯ ಪ್ರೇಮ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಕರುಣಾಕರನ್ ಮತ್ತು ಸ್ವಾತಿ ಕೊಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 2023ರಲ್ಲಿ ಚಿತ್ರೀಕರಣ ಆರಂಭಿಸಿದ್ದ ಈ ಸಿನಿಮಾವನ್ನು ತಮಿಳುನಾಡಿನ ಕಾರೈಕುಡಿ, ಕುಂಭಕೋಣಂ ಮತ್ತು ಇತರೆ ಸ್ಥಳಗಳಲ್ಲಿ ಚಿತ್ರಿಸಲಾಗಿದೆ. ತಾತ್ಕಾಲಿಕವಾಗಿ ‘ಕಾರ್ತಿ 27’ ಎಂದು ಶೀರ್ಷಿಕೆ ಇಡಲಾಗಿರುವ ಇದು ಕೌಟುಂಬಿಕ ಕಥಾಹಂದರದ ಸಿನಿಮಾ. ಶ್ರೀದಿವ್ಯಾ ಅವರು ಕಾರ್ತಿ ಅವರ ಸಹೋದರಿಯಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರವನ್ನು ಜ್ಯೋತಿಕಾ ಅವರ ಹೋಮ್ ಬ್ಯಾನರ್ 2D Entertainment ಅಡಿಯಲ್ಲಿ ಕಾರ್ತಿ ಅವರ ಸಹೋದರ ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸತ್ಯನ್ ಸೂರ್ಯನ್ ಛಾಯಾಗ್ರಾಹಣ, ಗೋವಿಂದ್ ವಸಂತ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ‘ಜಪಾನ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿ, ಲೋಕೇಶ್ ಕನಕರಾಜ್ ಅವರೊಂದಿಗೆ ‘ಕೈಥಿ 2’ ಮತ್ತು ಪಿ ಎಸ್ ಮಿತ್ರನ್ ಅವರೊಂದಿಗೆ ‘ಸರ್ದಾರ್ 2’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here