ವಿಶ್ವದಾದ್ಯಂತ ಭಾರಿ ಸದ್ದು ಮಾಡಿದ್ದ ‘Spider Man – Across the Spider Verse’ ಹಾಲಿವುಡ್ ಆನಿಮೇಟೆಡ್‌ ಸಿನಿಮಾ ಪ್ರಸ್ತುತ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ. Marvel Entertainments ಸಹಯೋಗದೊಂದಿಗೆ Columbia Pictures ಮತ್ತು Sony Entertainment ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು Kemp Powers ಮತ್ತು Justin K Thompson.

ಜೂನ್‌ 2ರಂದು ವಿಶ್ವದಾದ್ಯಂತ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದ್ದ ‘Spider Man – Across the Spider Verse’ ಅನಿಮೇಟೆಡ್‌ ಹಾಲಿವುಡ್‌ ಸಿನಿಮಾ ನಿನ್ನೆಯಿಂದ (ಆಗಸ್ಟ್‌ 8) ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಚಿತ್ರ ಬಿಡುಗಡೆಯಾಗಿ ಮೊದಲ ಏಳು ದಿನಗಳಲ್ಲಿಯೇ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 22.87 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಮೂಲ ಇಂಗ್ಲಿಷ್‌ ಸೇರಿದಂತೆ ಒಂಬತ್ತು ಪ್ರಾದೇಶಿಕ ಬಾಷೆಗಳಲ್ಲಿ ಸಿನಿಮಾ ತೆರೆಕಂಡಿತ್ತ. 2018ರಲ್ಲಿ ಬಿಡುಗಡೆಯಾದ ‘Spider-Man: Into the Spider-Verse’ ಅಮೇರಿಕನ್ ಫ್ರ್ಯಾಂಚೈಸ್ ಕತೆಯ sequel ಇದು. Spider Verse ಅಥವಾ ಸ್ಪೈಡರ್ ಪ್ರಪಂಚದಲ್ಲಿ ನಡೆಯುವ ಸಾಹಸಗಾಥೆ. ಹೊಸದಾಗಿ ‘SpiderMan2’ ಆದ Miles Morales ಮತ್ತು Spider Woman ಒಟ್ಟಾಗಿ ನಡೆಸುವ ರೋಮಾಂಚನಕಾರಿ ಸಾಹಸಗಳು ಮತ್ತು ಅವರ ನಡುವಿನ ಪ್ರೇಮಕಥೆಯೇ ಸಿನಿಮಾದ ಕಥಾಹಂದರ. Marvel Entertainments ಸಹಯೋಗದೊಂದಿಗೆ Columbia Pictures ಮತ್ತು Sony Entertainment ನಿರ್ಮಿಸಿರುವ ಚಿತ್ರವನ್ನು Kemp Powers ಮತ್ತು Justin K Thompson ನಿರ್ದೇಶಿಸಿದ್ದಾರೆ. Phil Lord, Christopher Miller ಮತ್ತು Dave Callaham ಚಿತ್ರಕಥೆ ರಚಿಸಿದ್ದು, Daniel Pemberton ಸಂಗೀತ ಸಂಯೋಜಿಸಿದ್ದಾರೆ.

Previous article‘ದಿ ಫ್ರೀಲ್ಯಾನ್ಸರ್‌’ ಟೀಸರ್‌ | ನೀರಜ್‌ ಪಾಂಡೆ ಹಿಂದಿ ವೆಬ್‌ ಸರಣಿ DisneyPlus Hotstarನಲ್ಲಿ
Next articleರಜನಿ ‘ಜೈಲರ್‌’ ಸಿನಿಮಾ ರಿಲೀಸ್‌ ಕ್ರೇಝ್‌ | ರಜೆ ಘೋಷಿಸಿದ ಕೆಲವು ಖಾಸಗಿ ಕಂಪನಿಗಳು

LEAVE A REPLY

Connect with

Please enter your comment!
Please enter your name here