‘ಮಿಷನ್‌ ಮಜ್ನೂ’ ಹಿಂದಿ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರದಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ RAW ಏಜೆಂಟ್‌ ಪಾತ್ರದಲ್ಲಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣರಿಗೆ ಇದು ಮೊದಲ ಹಿಂದಿ ಸಿನಿಮಾ.

ಶಂತನು ಬಾಗ್ಚಿ ನಿರ್ದೇಶನದಲ್ಲಿ ಸಿದ್ದಾರ್ಥ್‌ ಮಲ್ಹೋತಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ‘ಮಿಷನ್‌ ಮಜ್ನೂ’ ಹಿಂದಿ ಸಿನಿಮಾ ಜೂನ್‌ 10ರಂದು ಥಿಯೇಟರ್‌ಗೆ ಬರುತ್ತಿದೆ. 1970ರ ಕಾಲಘಟ್ಟದ ಕತೆಯಲ್ಲಿ ಹೀಬರೋ ಸಿದ್ದಾರ್ಥ್‌ ಮಲ್ಹೋತ್ರಾ RAW ಏಜೆಂಟ್‌ ಆಗಿ ಕಾಣಸಿಕೊಳ್ಳುತ್ತಿದ್ದಾರೆ. ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೊದಲು ಯೋಜಿಸಿದಂತೆ ‘ಮಿಷನ್‌ ಮಜ್ನೂ’ ಸಿನಿಮಾ ಮೇ 13ರಂದು ತೆರೆಕಾಣಬೇಕಿತ್ತು. ಈಗ ರಿಲೀಸ್‌ ಡೇಟ್‌ ಬದಲಾಗಿ ಜೂನ್‌ 10 ಎಂದಾಗಿದೆ. “The target is set! Get ready to be a part of India’s most daring RAW mission in the heart of Pakistan. Inspired by true events, #MissionMajnu releasing on 10th June 2022,” ಎಂದು ಚಿತ್ರ ನಿರ್ಮಿಸಿರುವ RSVP ಟ್ವೀಟ್‌ ಮಾಡಿದೆ. ಸಿನಿಮಾಗೆ ಪರ್ವೀಜ್‌ ಶೇಕ್‌, ಅಸೀಮ್‌ ಅರೋರಾ ಮತ್ತು ಸುಮಿತ್‌ ಬತೇಜಾ ಚಿತ್ರಕಥೆ ರಚಿಸಿದ್ದಾರೆ. ಶರೀಬ್‌ ಹಶ್ಮಿ ಮತ್ತು ಕುಮುದ್‌ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Previous articleಪ್ರೈಮ್‌ನಲ್ಲಿ ನಟ ರಿಷಿ ಕಪೂರ್‌ ಕೊನೆಯ ಸಿನಿಮಾ ‘ಶರ್ಮಾಜಿ ನಮ್‌ಕೀನ್‌’
Next articleರಿವರ್ಸ್‌ ಸ್ಕ್ರೀನ್‌ಪ್ಲೇಗೆ ಇನ್ನಷ್ಟು ಬಿಗುವು ಸಿಕ್ಕಿದ್ದಿದ್ದರೆ…

LEAVE A REPLY

Connect with

Please enter your comment!
Please enter your name here