ನಟಿ ಸೋನಂ ಕಪೂರ್‌ ನಟನೆಗೆ ಮರಳಿದ್ದು, ಅವರ ‘ಬ್ಲೈಂಡ್‌’ ಹಿಂದಿ ಸಿನಿಮಾದ ಸ್ಟ್ರೀಮಿಂಗ್‌ ದಿನಾಂಕ ಹೊರಬಿದ್ದಿದೆ. 2011ರಲ್ಲಿ ತೆರೆಕಂಡ ಇದೇ ಶೀರ್ಷಿಕೆಯ ಕೊರಿಯಾ ಸಿನಿಮಾದ ಹಿಂದಿ ಅವತರಣಿಕೆಯಿದು.

ಸೋನಂ ಕಪೂರ್‌ ನಟನೆಯ ‘ಬ್ಲೈಂಡ್‌’ ಚಿತ್ರ ಜಿಯೋ ಸಿನಿಮಾದಲ್ಲಿ ಜುಲೈ 7ರಿಂದ ಸ್ಟ್ರೀಮ್‌ ಆಗಲಿದೆ. ತಾಯ್ತನದ ವಿರಾಮದ ನಂತರ ಅವರು ನಟನೆಗೆ ಮರಳಿದ್ದು ಥ್ರಿಲ್ಲರ್‌ ಸಿನಿಮಾದ OTT ಬಿಡುಗಡೆಗಾಗಿ ಕಾತುರರಾಗಿದ್ದಾರೆ. ಇದು ಅವರ ಮೊದಲ ಡಿಜಿಟಲ್‌ ಬಿಡುಗಡೆ. ಶೋಮ್ ಮಖಿಜಾ ನಿರ್ದೇಶಿಸಿರುವ ಚಿತ್ರದ ನಿರ್ಮಾಪಕರು ಸುಜಯ್ ಘೋಷ್. ಪುರಬ್ ಕೊಹ್ಲಿ, ವಿನಯ್ ಪಾಠಕ್, ಲಿಲೆಟ್ ದುಬೆ, ಶುಭಂ ಸರಾಫ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ‘ಬ್ಲೈಂಡ್’ ಸಿನಿಮಾವನ್ನು 2020ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರವು 2011ರಲ್ಲಿ ತೆರೆಕಂಡ ಇದೇ ಶೀರ್ಷಿಕೆಯ ಕೊರಿಯಾ ಸಿನಿಮಾದ ಹಿಂದಿ ಅವತರಣಿಕೆ. ಸರಣಿ ಕೊಲೆಗಾರನ ಹುಡುಕಾಟದಲ್ಲಿ ಒಬ್ಬ ಅಂಧ ಪೊಲೀಸ್ ಅಧಿಕಾರಿಯ ಸುತ್ತ ಕಥೆ ಕೇಂದ್ರೀಕೃತವಾಗಿದೆ. RV ಮೋಷನ್ ಪಿಕ್ಚರ್ಸ್ ಮತ್ತು ಲೀಡ್ ಫಿಲ್ಮ್ಸ್, ಕನೈ, ಅವ್ಮಾ ಮತ್ತು ಕ್ರಾಸ್ ಪಿಕ್ಚರ್ಸ್ ನಿರ್ಮಾಣದ ಸಹಯೋಗದೊಂದಿಗೆ ಜಿಯೋ ಸ್ಟುಡಿಯೋಸ್ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದೆ.

Previous articleನಟ ಉಮಾಪತಿ ಅವರನ್ನು ವರಿಸಲಿರುವ ಅರ್ಜುನ್‌ ಸರ್ಜಾ ತಾರಾಪುತ್ರಿ ಐಶ್ವರ್ಯ
Next article‘ನೈಟ್‌ ಮ್ಯಾನೇಜರ್‌ ಸಿಸನ್‌ 2’ ಸರಣಿ | DisneyPlus Hotstarನಲ್ಲಿ ಜೂನ್‌ 30ರಿಂದ

LEAVE A REPLY

Connect with

Please enter your comment!
Please enter your name here