ಕಾಳಿದಾಸ ರಚಿತ ಶ್ರೇಷ್ಠ ಕಾವ್ಯ ಆಧರಿಸಿ ತಯಾರಾಗಿರುವ ‘ಶಾಕುಂತಲಾ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಗುಣಶೇಖರ್‌ ನಿರ್ದೇಶನದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಸಮಂತಾ ಮತ್ತು ದೇವ್‌ ಮೋಹನ್‌ ನಟಿಸಿದ್ದಾರೆ. ಏಪ್ರಿಲ್‌ 14ರಂದು ಸಿನಿಮಾ ತೆರೆಕಾಣಲಿದೆ.

ಸಮಂತಾ ಮತ್ತು ದೇವ್‌ ಮೋಹನ್‌ ಅಭಿನಯದ ‘ಶಾಕುಂತಲಾ’ ಐತಿಹಾಸಿಕ ತೆಲುಗು ಸಿನಿಮಾದ ನೂತನ ಟ್ರೈಲರ್‌ ರಿಲೀಸ್‌ ಆಗಿದೆ. ಅದ್ಧೂರಿತನ ಮತ್ತು VFXಗಾಗಿ ನಿರ್ಮಾಪಕರು ಹೆಚ್ಚು ಖರ್ಚು ಮಾಡಿರುವುದು ಟ್ರೈಲರ್‌ನಲ್ಲಿ ಕಂಡುಬರುತ್ತದೆ. ಪ್ರತಿ ಹಂತದಲ್ಲೂ ರೋಮಾಂಚನಕಾರಿಯಾಗಿರುವ ಕಾಳಿದಾಸನ ಕಲಾತೀತ ನಾಟಕವನ್ನು ‘ಶಾಕುಂತಲಂ’ ಮೂಲಕ ಆಧುನಿಕ ತಾಂತ್ರಿಕತೆಯ ಲೇಪದೊಂದಿಗೆ ನಿರ್ದೇಶಕ ಗುಣಶೇಖರ್ ರೂಪಿಸಿದ್ದಾರೆ. ಸಿನಿಮಾ ತನ್ನದೇ ಆದ ಛಾಪು ಮೂಡಿಸಲು ಸಜ್ಜಾಗಿದೆ.

ಯುದ್ಧದ ದೃಶ್ಯಗಳು, ದುಷ್ಯಂತ ಮಹಾರಾಜ ಮತ್ತು ಆನೆಯ ನಡುವಿನ ಕಾಳಗ ಸೊಗಸಾಗಿ ಮೂಡಿಬಂದಿದೆ. CGI ಇನ್ನೂ ಪರ್ಫೆಕ್ಟ್‌ ಆಗಿರಬೇಕಿತ್ತು ಎನಿಸಿದರೂ ಅರಣ್ಯದ ವಿಹಂಗಮ ನೋಟ ಮುದ ನೀಡುತ್ತದೆ. ಕೆಲವು ಮಿತಿಗಳೊಂದಿಗೆ ಟ್ರೈಲರ್‌ ಸಿನಿಮಾ ಕುರಿತಾಗಿ ಭರವಸೆ ಮೂಡಿಸುತ್ತದೆ. ನಟಿ ಸಮಂತಾ ಚಿತ್ರಕ್ಕಾಗಿ ಶೇ.100ರಷ್ಟು ಶ್ರಮ ಹಾಕಿದ್ದಾರೆ. ಟ್ರೈಲರ್‌ನ ಪ್ರತೀ ಸನ್ನಿವೇಶಗಳೂ ಇದಕ್ಕೆ ಸಾಕ್ಷ್ಯ ನುಡಿಯುತ್ತವೆ. ನಿರ್ದೇಶಕರ ಈ ಹಿಂದಿನ ‘ರುದ್ರಮ್ಮದೇವಿ’ ಸಿನಿಮಾಗಿಂತ ‘ಶಾಕುಂತಲಂ’ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಎಂಟು ವರ್ಷಗಳ ಬಳಿಕ ಗುಣಶೇಖರ್‌ ಮರಳಿದ್ದಾರೆ ಎನ್ನುವುದು ವಿಶೇಷ. ಮೋಹನ್ ಬಾಬು, ಅಲ್ಲು ಆರ್ಹಾ, ಅದಿತಿ ಬಾಲನ್, ಗೌತಮಿ, ಸಚಿನ್‌ ಖೇಡ್ಕರ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಏಪ್ರಿಲ್ 14ರಂದು ಸಿನಿಮಾ ತೆರೆಕಾಣಲಿದೆ.

Previous articleಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ‘ಪುಷ್ಪ-2’ ಟೀಸರ್; ಈಗ ಬಂದಿದೆ ಗ್ಲಿಂಪ್ಸ್!
Next article‘ಮಿಷನ್‌: ಚಾಪ್ಟರ್‌ 1’ ಟೀಸರ್‌ | ಅರುಣ್‌ ವಿಜಯ್‌ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ

LEAVE A REPLY

Connect with

Please enter your comment!
Please enter your name here