‘Modern Love Mumbai’ನಲ್ಲಿ ಆರು ಭಿನ್ನ ಲವ್‌ ಸ್ಟೋರಿಗಳಿವೆ. ಪ್ರತೀಕ್‌ ಗಾಂಧಿ, ಫಾತಿಮಾ ಸನಾ ಶೇಕ್‌, ನಾಸಿರುದ್ದೀನ್‌ ಷಾ, ಆರ್ಷದ್‌ ವಾರ್ಸಿ, ರಿತ್ವಿಕ್‌ ಭೋಮಿಕ್‌, ಸಾರಿಕಾ ಮತ್ತಿತರರು ನಟಿಸಿರುವ ಸರಣಿ ಮೇ 13ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

‘Modern Love Mumbai’ ಟ್ರೈಲರ್‌ ಹೊರಬಿದ್ದಿದೆ. ಬಾಲಿವುಡ್‌ನ ಜನಪ್ರಿಯ ಚಿತ್ರನಿರ್ದೇಶಕರಾದ ವಿಶಾಲ್‌ ಭಾರದ್ವಾಜ್‌, ಹನ್ಸಲ್‌ ಮೆಹ್ತಾ, ಶೋನಾಲಿ ಭೋಸ್‌, ಧ್ರುವ್‌ ಸೆಹ್ಗಲ್‌, ಅಲಂಕೃತಾ ಶ್ರೀವಾತ್ಸವ್‌, ನೂಪುರ್‌ ಆಸ್ತಾನಾ ನಿರ್ದೇಶನದ ಐದು ಭಿನ್ನ ಲವ್‌ಸ್ಟೋರಿಗಳಿವು. ಪ್ರತೀಕ್‌ ಗಾಂಧಿ, ಫಾತಿಮಾ ಸನಾ ಶೇಕ್‌, ನಾಸಿರುದ್ದೀನ್‌ ಷಾ, ಆರ್ಷದ್‌ ವಾರ್ಸಿ, ರಿತ್ವಿಕ್‌ ಭೋಮಿಕ್‌, ಸಾರಿಕಾ ಮತ್ತಿತರರು ನಟಿಸಿದ್ದಾರೆ. ಪ್ರಿತೀಶ್‌ ನಂದಿ ಕಮ್ಯುನಿಕೇಷನ್ಸ್‌ ಬ್ಯಾನರ್‌ನಡಿ ರಂಗಿತಾ ಪ್ರತೀಶ್‌ ನಂದಿ ಮತ್ತು ಇಶಿತಾ ಪ್ರಿತೀಷ್‌ ನಂದಿ ಸರಣಿಯನ್ನು ನಿರ್ಮಿಸಿದ್ದಾರೆ.

ಮುಂಬಯಿ ಮಹಾನಗರದಲ್ಲಿನ ಪ್ರೇಮಕತೆಗಳನ್ನು ಹೇಳುವುದರೊಂದಿಗೆ ಟ್ರೈಲರ್‌ ಶುರುವಾಗುತ್ತದೆ. ಆರ್ಷದ್‌ ವಾರ್ಸಿ ಮತ್ತು ಚಿತ್ರಾಂಗಧಾ ಸಿಂಗ್‌ ಇಲ್ಲಿ ಪತಿ – ಪತ್ನಿಯಾಗಿ ನಟಿಸಿದ್ದಾರೆ. ‘Scam 1992’ ಸರಣಿಯಲ್ಲಿ ಮಿಂಚಿದ್ದ ಪ್ರತೀಕ್‌ ಗಾಂಧಿ ಮತ್ತು ಹನ್ಸಲ್‌ ಮೆಹ್ತಾ ಇಲ್ಲಿ ಮತ್ತೆ ಜೊತೆಯಾಗಿದ್ದಾರೆ. ಪ್ರತೀಕ್‌ಗೆ gay love story ಇದೆ. ಆತನ ತಂದೆ ಈ ಸಂಬಂಧವನ್ನು ಸುತಾರಾಂ ಸಿದ್ಧರಿಲ್ಲ. ತನಗಿಂತ ತುಂಬಾ ಚಿಕ್ಕವನಾದ ಯುವಕನೆಡೆಗೆ ಮಧ್ಯವಯಸ್ಸಿನ ಮಹಿಳೆಗೆ (ಸಾರಿಕಾ) ಪ್ರೀತಿ, ಮತ್ತೊಂದು ಕತೆಯಲ್ಲಿ ರಿತ್ವಿಕ್‌ ಭೋಮಿಕ್‌ ಮತ್ತು ಮಸಬಾ ಗುಪ್ತಾ ಕಾಣಿಸಿಕೊಂಡಿದ್ದಾರೆ. ಮೇ 13ರಿಂದ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here