ಮೊನ್ನೆಯಷ್ಟೇ ‘ಜುರಾಸಿಕ್‌ ವರ್ಲ್ಡ್‌ ಡೊಮಿನಿಯಾನ್‌’ ಪೋಸ್ಟರ್‌ ಮತ್ತು BTS ವೀಡಿಯೋ ಬಿಡುಗಡೆಯಾಗಿತ್ತು. ಇದೀಗ ಟ್ರೈಲರ್‌ ರಿಲೀಸ್‌ ಆಗಿದ್ದು, ಜೂನ್‌ 10ರಂದು ಸಿನಿಮಾ ತೆರೆಗೆ ಬರುತ್ತಿದೆ.

ಕೊಲಿನ್‌ ಟ್ರೆವೊರೊ ನಿರ್ದೇಶನದ ‘ಜುರಾಸಿಕ್‌ ವರ್ಲ್ಡ್‌ ಡೊಮಿನಿಯಾನ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದು ಜನಪ್ರಿಯ ಜುರಾಸಿಕ್‌ ಫ್ರಾಂಚೈಸ್‌ನ ಆರನೇ ಸಿನಿಮಾ. ದೈತ್ಯ ಪ್ರಾಣಿ Velociraptor ಮರಿಯನ್ನು ದುಷ್ಟರು ಅಪಹರಿಸುವ ಸನ್ನಿವೇಶದೊಂದಿಗೆ ಟ್ರೈಲರ್‌ ಶುರುವಾಗುತ್ತದೆ. ದಟ್ಟ ಕಾಡು ಮತ್ತು ನಗರದಲ್ಲಿ ಡೈನೋಸರಸ್‌ಗಳ ದಾಳಿಯ ಮೈನವಿರೇಳಿಸುವ ಸನ್ನಿವೇಶಗಳು ಕಾಣಿಸುತ್ತವೆ. Owen ಮತ್ತು Claire ಇಬ್ಬರೂ ಡೈನೊಸರ್‌ಗಳಿಂದ ತಪ್ಪಿಸಿಕೊಳ್ಳುವ ಸೀನ್‌ಗಳು ಜುರಾಸಿಕ್‌ ಫ್ರಾಂಚೈಸ್‌ನ ಈ ಹಿಂದಿನ ಸಿನಿಮಾಗಳ ಚೇಸಿಂಗ್‌ ನೆನಪಿಸುತ್ತದೆ.

‘Jurassic World Dominion’ನಲ್ಲಿ Chris Pratt ಮತ್ತು Bryce Dallas Howard ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಹಿಂದಿನ ಸರಣಿಗಳಲ್ಲಿ ನಟಿಸಿದ್ದ Laura Dern, Sam Neill, Jeff Goldblum ಕೂಡ ಚಿತ್ರದಲ್ಲಿ ಇದ್ದಾರೆ. Steven Spielberg ನಿರ್ದೇಶನದ 1993ರ jurassic park ಸಿನಿಮಾದಲ್ಲಿ Neill ಮತ್ತು Dern Paleontologist Dr.Alan Grant, Dr.Ellie Sattler ಪಾತ್ರಗಳಲ್ಲಿ ನಟಿಸಿದ್ದರು. Goldblum ಅವರು chaos theorist Ian Malcolm ಆಗಿ ಕಾಣಿಸಿಕೊಂಡಿದ್ದರು. ಹಳಬರ ಜೊತೆ ಯುವ ಕಲಾವಿದರು ಇಲ್ಲಿದ್ದು, ನೂತನ ಸಿನಿಮಾದಲ್ಲಿ ಈ ಹಿಂದೆ ತೆರೆಕಂಡ ಜುರಾಸಿಕ್‌ ಫ್ರಾಂಚೈಸ್‌ ಸಿನಿಮಾಗಳ BTS ವೀಡಿಯೋ ಇರಲಿದೆ. JA Bayona ನಿರ್ದೇಶನದ ‘Jurassic World : Fallen Kingdom’ ತೆರೆಕಂಡ ಸರಣಿಯ ಕೊನೆಯ ಸಿನಿಮಾ. ‘ಜುರಾಸಿಕ್‌ ವರ್ಲ್ಡ್‌ ಡೊಮಿನಿಯಾನ್‌’ ಜೂನ್‌ 10ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here