ಜೀತು ಜೋಸೆಫ್‌ ನಿರ್ದೇಶನದ ‘ನೆರು’ ಮಲಯಾಳಂ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಮೋಹನ್‌ ಲಾಲ್‌ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇದೇ ಡಿಸೆಂಬರ್‌ 21ರಂದು ತೆರೆಕಾಣಲಿದೆ.

ಮೋಹನ್‌ ಲಾಲ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕೋರ್ಟ್‌ ಡ್ರಾಮಾ ‘ನೆರು’ ಮಲಯಾಳಂ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ‘ದೃಶ್ಯಂ’ ನಿರ್ದೇಶಕ ಜೀತು ಜೋಸೆಫ್ ನಿರ್ದೇಶಿಸಿದ್ದಾರೆ. ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಮೋಹನ್‌ಲಾಲ್ ಮತ್ತು ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ರಾಜನ್ ಅವರ ಲುಕ್ ಕುತೂಹಲ ಮೂಡಿಸುವಂತಿದೆ. 13 ವರ್ಷಗಳ ಸುದೀರ್ಘ ಅಂತರದ ನಂತರ ಮೋಹನ್‌ಲಾಲ್ ಈ ಸಿನಿಮಾದಲ್ಲಿ ವಕೀಲರಾಗಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ 12 ವರ್ಷಗಳ ನಂತರ ಪ್ರಿಯಾಮಣಿ ಮತ್ತು ಮೋಹನ್‌ ಲಾಲ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮೊದಲು 2012ರಲ್ಲಿ ಬಿಡುಗಡೆಯಾದ ಕ್ರೈಮ್ ಥ್ರಿಲ್ಲರ್ ‘ಗ್ರ್ಯಾಂಡ್‌ ಮಾಸ್ಟರ್’ ಸಿನಿಮಾದಲ್ಲಿ ಇವರು ಒಟ್ಟಿಗೆ ಅಭಿನಯಿಸಿದ್ದರು. ಸಿದ್ದಿಕ್, ಜಗದೀಶ್, ಗಣೇಶ್ ಕುಮಾರ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತೀಶ್ ಕುರುಪ್ ಛಾಯಾಗ್ರಹಣ, ವಿಷ್ಣು ಶ್ಯಾಮ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ವಿ ಎಸ್ ವಿನಾಯಕ್ ಸಂಕಲನ ನಿಭಾಯಿಸಿದ್ದಾರೆ. Aashirvad Cinemas ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಅವರು ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್‌ 21 ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here