ಮತ್ತೊಂದು ಹೊಸಬರ ಪ್ರಯತ್ನ ‘ಮಾಂಕ್‌ ದಿ ಯಂಗ್‌’. ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಮಾಸ್ಚಿತ್‌ ಸೂರ್ಯ ಅವರು ತಮ್ಮ ಚಿತ್ರವನ್ನು ವಿಂಟೇಜ್‌ ಫ್ಯಾಮಿಲಿ – ಥ್ರಿಲ್ಲರ್‌ ಎಂದು ಕರೆಯುತ್ತಾರೆ. ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ.

‘ಮಾಂಕ್ ದಿ ಯಂಗ್ ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರದ ಚಿತ್ರ. ಇಂದು ಟೀಸರ್ ಬಿಡುಗಡೆಯಾಗಿದೆ. ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಇನ್ನು ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದಂತಹ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ‘ಮಾಂಕ್‌ ದಿ ಯಂಗ್‌’ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ. ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಹೊಸತನದಿಂದ ಕೂಡಿದೆ. ನಿರ್ದೇಶಕರು ಹೇಳಿದಂತೆ ಚಿತ್ರದಲ್ಲಿ ಮಿಸ್ಟರಿ ಅಂಶಗಳು ಸಾಕಷ್ಟಿವೆ ಎನಿಸುತ್ತದೆ.

ರಾಜೇಂದ್ರನ್‌ ಚಿತ್ರದ ನಿರ್ಮಾಪಕರಲ್ಲೊಬ್ಬರು. ಅವರು ನಿರ್ದೇಶಕರಲ್ಲಿಗೆ ಹೋಗಿದ್ದು ಪಾತ್ರ ಮಾಡಲು. ಕತೆ ಕೇಳಿದ ನಂತರ ತಾವೇ ನಿರ್ಮಿಸಲು ಮುಂದಾಗಿದ್ದಾರೆ. ಇನ್ನೂ ನಾಲ್ವರು ಸಮಾನಮನಸ್ಕ ಸ್ನೇಹಿತರ ಜೊತೆಗೂಡಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ‘ನಾವು ಸೀಮಿತ ಆದಾಯದಲ್ಲಿ ಜೀವನ ನಡೆಸುತ್ತಿರುತ್ತೇವೆ. ಆದರೆ ಅದರ ಆಚೆ ಬಂದು ನೋಡಿದಾಗ ಬೇರೆ ಜೀವನ ಇದೆ. ಹಾಗೆ ನಮ್ಮ ಚಿತ್ರ ಕೂಡ. ಮಾಮೂಲಿ ಜಾನರ್‌ ಗಿಂತ ಸ್ವಲ್ಪ ಭಿನ್ನವಾದ ಪ್ರಯತ್ನ’ ಎನ್ನುತ್ತಾರೆ ಚಿತ್ರದ ನಟ, ನಿರ್ಮಾಪಕ ಸರೋವರ್ ಸೌಂದರ್ಯ ಗೌಡ ಚಿತ್ರದ ನಾಯಕನಟಿ. ಧನುಷ್‌ ಎಲ್‌ ಬೇದ್ರೆ ಸಂಕಲನ, ಸ್ವಾಮಿನಾಥನ್‌ ಸಂಗೀತ ಚಿತ್ರಕ್ಕಿದೆ. ಜಯೇಂದ್ರ ವಾಕ್ವಾಡಿ VFX ಕೆಲಸ ಮಾಡಿದ್ದಾರೆ.

Previous articleರಿಷಭ್‌ ಶೆಟ್ಟಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ | ಅಮೆರಿಕ ಕನ್ನಡಿಗರಿಂದ ಗೌರವ
Next article‘ಲವ್‌’ ಸಿನಿಮಾ ‘ಕಣ್ಮಣಿ’ ಸಾಂಗ್‌ | ನೈಜ ಘಟನೆ ಆಧರಿಸಿದ ಲವ್‌ಸ್ಟೋರಿ

LEAVE A REPLY

Connect with

Please enter your comment!
Please enter your name here