ನೈಜ ಘಟನೆಗಳನ್ನು ಆಧರಿಸಿ ಹೆಣೆದಿರುವ ‘ಲವ್‌’ ಪ್ರೇಮಸಿನಿಮಾದ ‘ಕಣ್ಮಣಿ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಮಹೇಶ್‌ ಅಮ್ಮಳ್ಳಿದೊಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಜಯ್‌ ಜಯರಾಂ ಮತ್ತು ವೃಷ ಪಾಟೀಲ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ಮಿಲನಾ ನಾಗರಾಜ್‌ ಮತ್ತು ಅಮೃತಾ ಅಯ್ಯಂಗಾರ್‌ ನಟನೆಯ ‘ಓ’ ಸಿನಿಮಾ ನಿರ್ದೇಶಿಸಿದ್ದ ಮಹೇಶ್‌ ಅಮ್ಮಳ್ಳಿದೊಡ್ಡಿ ‘ಲವ್‌’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ನೈಜ ಘಟನೆ ಆಧರಿಸಿ ಅವರು ಮಾಡಿರುವ ಕತೆಯಲ್ಲಿ ಪ್ರಜಯ್‌ ಜಯರಾಂ ಮತ್ತು ವೃಷ ಪಾಟೀಲ್‌ ನಾಯಕ – ನಾಯಕಿ. ಇಬ್ಬರಿಗೂ ಇದು ಚೊಚ್ಚಲ ಸಿನಿಮಾ. ಇದೀಗ ಚಿತ್ರದ ‘ಕಣ್ಮಣಿ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ನಿರ್ದೇಶಕ ಮಹೇಶ್‌ ರಚಿಸಿರುವ ಈ ಗೀತೆಗೆ ರೋಸಿತ್‌ ವಿಜಯನ್‌ ಮತ್ತು ಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ರೋಸಿತ್‌ ವಿಜಯನ್‌ ಹಾಡಿದ್ದಾರೆ. ‘ಕಾಂತಾರ’ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಿವಾಕರ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ಲೋಕೇಶ್ ಪುಟ್ಟೇಗೌಡ ಸಂಕಲನ ಚಿತ್ರಕ್ಕಿದೆ. ಉಡುಪಿ,‌ ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿವೆ.

LEAVE A REPLY

Connect with

Please enter your comment!
Please enter your name here