ಬೋಯಾಪಾಟಿ ಶ್ರೀನು ನಿರ್ದೇಶನದ ‘ಸ್ಕಂದ’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌ ಆಗಿದೆ, ರಾಮ್‌ ಪೋತಿನೇನಿ ಮತ್ತು ಕನ್ನಡತಿ ಶ್ರೀಲೀಲಾ ಜೋಡಿ ಮೇಲೆ ಈ ಹಾಡು ಪಿಕ್ಚರೈಸ್‌ ಆಗಿದೆ. ಈ ತೆಲುಗು ಮಾಸ್‌ ಎಂಟರ್‌ಟೇನರ್‌ ಸೆಪ್ಟೆಂಬರ್‌ 15ರಂದು ತೆರೆಕಾಣಲಿದೆ.

ರಾಮ್‌ ಪೋತಿನೇನಿ ಮತ್ತು ಶ್ರೀಲೀಲಾ ಜೋಡಿಯ ‘ಸ್ಕಂದ’ ತೆಲುಗು ಚಿತ್ರದ ಮೊದಲ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಬೋಯಾಪಾಟಿ ಶ್ರೀನು ನಿರ್ದೇಶನದ ಬಹುನಿರೀಕ್ಷಿತ ಚಿತ್ರವಿದು. ಮೂಲ ತೆಲುಗು ಹಾಡನ್ನು ಸಿದ್‌ ಶ್ರೀರಾಂ ಮತ್ತು ಸಂಜನಾ ಕಲ್ಮಂಜೆ ಹಾಡಿದ್ದಾರೆ. ಕನ್ನಡ ಅವತರಣಿಕೆಯಲ್ಲೂ ಸಾಂಗ್‌ ಬಿಡುಗಡೆಯಾಗಿದೆ. ‘ನಿನ್ ಸುತ್ತ ಸುತ್ತ ತಿರುಗಿದೆ’ ಎಂದು ಶುರುವಾಗುವ ಗೀತೆಯನ್ನು ವರದರಾಜು ಚಿಕ್ಕಬಳ್ಳಾಪುರ ರಚಿಸಿದ್ದಾರೆ. ಸಂತೋಷ್‌ ವೆಂಕಿ ಮತ್ತು ಶ್ರೀನಿಧಿ ತಿರುಮಲ ಹಾಡಿದ್ದಾರೆ. ಎಸ್ ಎಸ್ ತಮನ್ ಸಂಗೀತ ಸಂಯೋಜನೆಯ ಹಾಡು ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿದೆ.

ಲವರ್ ಬಾಯ್ ಪಾತ್ರಗಳಲ್ಲಿ ನಟಿಸುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ‘ಸ್ಕಂದ’ ಸಿನಿಮಾಗಾಗಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಶ್ರೀಲೀಲಾ ಚಿತ್ರದ ಹಿರೋಯಿನ್‌. ಸಂತೋಷ್ ಡಿಟೇಕ್ ಛಾಯಾಗ್ರಹಣ ಮಾಡಿದ್ದಾರೆ. ಸಿಲ್ವರ್ ಸ್ಕ್ರೀನ್ ಬ್ಯಾನರ್‌ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿರುವ ಚಿತ್ರವನ್ನು ಜೀ ಸ್ಟುಡಿಯೋಸ್‌ ಮತ್ತು ಪವನ್‌ ಕುಮಾರ್‌ ಪ್ರಸೆಂಟ್‌ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ 15ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous article‘ಮಿಸ್ಟರ್‌ ಪ್ರೆಗ್ನೆಂಟ್‌’ ಟ್ರೈಲರ್‌ | ವಿಭಿನ್ನ ಕತೆಯ ತೆಲುಗು ಸಿನಿಮಾ
Next article‘Chef ಚಿದಂಬರ’ ಅನಿರುದ್ಧ್‌ | ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ ನಟ ಸುದೀಪ್

LEAVE A REPLY

Connect with

Please enter your comment!
Please enter your name here