ಆರತಿ ಕದಾವ್‌ ನಿರ್ದೇಶನದ ‘Mrs’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಸಾನ್ಯಾ ಮಲ್ಹೋತ್ರಾ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆರ್‌ ಕಣ್ಣನ್‌ ನಿರ್ದೇಶನದ ಯಶಸ್ವೀ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಮಲಯಾಳಂ ಸಿನಿಮಾದ ರೀಮೇಕಿದು.

ಸಾನ್ಯಾ ಮಲ್ಹೋತ್ರಾ ಮುಖ್ಯ ಭೂಮಿಕೆಯಲ್ಲಿ ಅಭಿನಯದ ʼMrs’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಆರತಿ ಕದಾವ್‌ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಿಶಾಂತ್ ದಹಿಯಾ ಮತ್ತು ಕನ್ವಲ್‌ಜಿತ್‌ ಸಿಂಗ್ ನಟಿಸಿದ್ದಾರೆ. ಅಡುಗೆಮನೆ ಮತ್ತು ಮನೆಕೆಲಸಗಳಲ್ಲಿ ತನ್ನ ಇಡೀ ಜೀವನವನ್ನು ಸವೆಸಿ ತನ್ನ ಗುರುತನ್ನು ಕಂಡುಕೊಳ್ಳುವ ವಿವಾಹಿತ ಮಹಿಳೆಯ ಕತೆಯಿದು. ಆರ್‌ ಕಣ್ಣನ್‌ ನಿರ್ದೇಶನದ ಯಶಸ್ವೀ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಮಲಯಾಳಂ ಸಿನಿಮಾದ ರೀಮೇಕ್‌. ಚಿತ್ರದ ಕುರಿತು ಮಾತನಾಡುವ ನಿರ್ದೇಶಕಿ, ‘ಗೃಹಿಣಿಯ ಪಾತ್ರವು ಯಾವಾಗಲೂ ನನ್ನನ್ನು ಕಾಡುತ್ತಿತ್ತು. ಚಿಕ್ಕಂದಿನಿಂದಲೂ ನನ್ನ ಸುತ್ತಲೂ ಪ್ರತಿಯೊಬ್ಬ ಮಹಿಳೆಯೂ ತಮ್ಮ ಕುಟುಂಬಕ್ಕಾಗಿ ದುಡಿಯವುದು, ಮಕ್ಕಳನ್ನು ಪೋಷಿಸುವುದು ತಮ್ಮ ಜವಾಬ್ದಾರಿ ಎಂದು ಹೊರಗಿನ ಪ್ರಪಂಚವನ್ನೇ ಮರೆತು ಬಿಡುತ್ತಾರೆ. ಗೃಹಿಣಿಯರಷ್ಟೇ ಅಲ್ಲ, ಉದ್ಯೋಗಸ್ಥ ಮಹಿಳೆಯರೂ ಸಹ ಈ ಡಬಲ್ ಶಿಫ್ಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೆಲ್ಲವೂ ನನಗೆ ವೈಯಕ್ತಿಕವಾಗಿ ಪ್ರಭಾವ ಬೀರಿದೆ’ ಎಂದಿದ್ದಾರೆ.

ನಟಿ ಸಾನ್ಯಾ, ‘ಪುರುಷ ಪ್ರಧಾನ ಕುಟುಂಬದಲ್ಲಿ ಮಹಿಳೆಯೊಬ್ಬಳು ತನ್ನ ಕನಸುಗಳನ್ನು ಬೆನ್ನತ್ತಿ ತನ್ನ ನೃತ್ಯದ ಕನಸನ್ನು ಹೇಗೆ ಸಾಕಾರಗೊಳಿಸಿಕೊಳ್ಳುತ್ತಾಳೆ ಎಂಬುದು ಈ ಸಿನಿಮಾದಲ್ಲಿದೆ. ಆರತಿ ಕದಾವ್‌ ಅವರೊಟ್ಟಿಗೆ ಕೆಲಸ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ’ ಎಂದಿದ್ದಾರೆ. ಮೂಲ ಮಲಯಾಳಂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಐಶ್ವರ್ಯಾ ರಾಜೇಶ್ ಮತ್ತು ಜೆರ್ರಿ ಸಿಲ್ವೆಸ್ಟರ್ ಕಾಣಿಸಿಕೊಂಡಿದ್ದರು. ‘Mrs’ ಚಿತ್ರವನ್ನು Jio Studios ಸಹಯೋಗದೊಂದಿಗೆ Baweja Studios ಬ್ಯಾನರ್‌ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರವು ನವೆಂಬರ್ 17ರಂದು 27ನೇ POFF: Tallinn Black Nights Film Festival ನಲ್ಲಿ Exceptional storytelling ಮತ್ತು Cinematic excellence ವಿಭಾಗದಲ್ಲಿ ಆಯ್ಕೆಯಾಗಿದ್ದು ಪ್ರೀಮಿಯರ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here