ಕಮಲ ಹಾಸನ್‌ ಅಭಿನಯದ ‘ಇಂಡಿಯನ್‌ 2’ ತಮಿಳು ಸಿನಿಮಾದ ನೂತನ ಪೋಸ್ಟರ್‌ ರಿಲೀಸ್‌ ಆಗಿದೆ. Lyca Productions ಮತ್ತು Red Giants Movies ಬ್ಯಾನರ್‌ ಅಡಿಯಲ್ಲಿ ತಯಾರಾಗುತ್ತಿರುವ ದುಬಾರಿ ಚಿತ್ರವನ್ನು ಶಂಕರ್‌ ನಿರ್ದೇಶಿಸುತ್ತಿದ್ದಾರೆ.

ಕಮಲ ಹಾಸನ್‌ ಅಭಿನಯದ ‘ಇಂಡಿಯನ್‌ 2’ ತಮಿಳು ಸಿನಿಮಾದ ನೂತನ ಪೋಸ್ಟರ್‌ ರಿಲೀಸ್‌ ಆಗಿದೆ. ನಿನ್ನೆ (ನವೆಂಬರ್‌ 7) ಕಮಲ್‌ ಹುಟ್ಟುಹಬ್ಬದಂದು ಪೋಸ್ಟರ್‌ ಬಿಡುಗಡೆಯಾಗಿದೆ. Lyca Productions ತನ್ನ X ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು, ‘ಲೆಜೆಂಡ್‌ನ ಜನ್ಮದಿನ ಆಚರಿಸಲಾಗುತ್ತಿದೆ! ಇಂಡಿಯನ್ 2 ತಂಡದಿಂದ ನಮ್ಮ ವೀರಶೇಖರನ್ ಸೇನಾಪತಿ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದೆ. ಈ ಪೋಸ್ಟರ್‌ನಿಂದಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರವನ್ನು Lyca Productions ಮತ್ತು Red Giants Movies ಬ್ಯಾನರ್‌ ಅಡಿಯಲ್ಲಿ ಸುಭಾಸ್ಕರನ್ ಅಲ್ಲಿರಾಜ ಮತ್ತು ಉದಯನಿಧಿ ಸ್ಟಾಲಿನ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ನೆಡುಮುಡಿ ವೇಣು, ಸಿದ್ಧಾರ್ಥ್, ಕಾಜಲ್ ಅಗರ್‌ವಾಲ್‌, ರಾಕುಲ್ ಪ್ರೀತ್ ಸಿಂಗ್, ಗುಲ್ಶನ್ ಗೋವರ್, ವಿವೇಕ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಸಮುದ್ರಕನಿ, ಬಾಬಿ ಸಿಂಹ, ಗುರು ಸೋಮಸುಂದರಂ, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್, ಡೆಲ್ಲಿ ಗಣೇಶ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಸಿನಿಮಾಗೆ ರವಿವರ್ಮನ್ ಮತ್ತು ರತ್ನವೇಲು ಛಾಯಾಗ್ರಹಣ, ಅನಿರುದ್ಧ ರವಿಚಂದರ್ ಸಂಗೀತ, ಎ. ಶ್ರೀಕರ್ ಪ್ರಸಾದ್ ಸಂಕಲನವಿದೆ.

‘ಇಂಡಿಯನ್ 2’ ಸಿನಿಮಾವು 1996ರಲ್ಲಿ ತೆರೆಕಂಡಿದ್ದ ‘ಇಂಡಿಯನ್’ ಚಿತ್ರದ ಸೀಕ್ವೆಲ್. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರವನ್ನು ಪುನರಾವರ್ತಿಸಿದ್ದಾರೆ. ಈ ಚಿತ್ರದ ಸೀಕ್ವೆಲ್ ಭಾಗವೇ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದು, ಮೊದಲ ಭಾಗ ಮುಂದಿನ ವರ್ಷ ಏಪ್ರಿಲ್ 12ರಂದು ತೆರೆಕಾಣಲಿದೆ. ಚಲನಚಿತ್ರರಂಗದಲ್ಲಿ ಸುಮಾರು 64 ವರ್ಷಗಳ ಅನುಭವ ಹೊಂದಿರುವ ಕಮಲ್‌ ಹಾಸನ್ ನಿರ್ದೇಶನ, ನಿರ್ಮಾಣ, ನೃತ್ಯ ಸಂಯೋಜನೆ, ಚಿತ್ರಕಥೆ, ಹಿನ್ನೆಲೆ ಗಾಯನ, ಮೇಕಪ್ ಮತ್ತು ಗೀತೆರಚನೆಯಂತಹ ವಿಭಿನ್ನ ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದಾರೆ. 230ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್‌ ಅವರು ಶೂಟಿಂಗ್‌ ಸೆಟ್‌ನ ಒಂದು ಫೋಟೊ ಟ್ವೀಟ್‌ ಮಾಡಿ ತಮ್ಮ ಹೀರೋ ಕಮಲ್‌ರಿಗೆ ಶುಭ ಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here