ನಟಿ ರಶ್ಮಿಕಾ ಮಂದಣ್ಣ ಇಂದು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪಾಸ್‌ಪೋರ್ಟ್ ಫೋಟೊ ಹಾಕಿ ವಿಮಾನ ಪ್ರಯಾಣದ ಬಗ್ಗೆ ಬರೆದುಕೊಂಡಿದ್ದರು. ಇದು ಆಕೆ ಹಾಲಿವುಡ್ ಸಿನಿಮಾ ಆಡಿಷನ್‌ಗೆ ಹೋಗುತ್ತಿದ್ದಾರೆ ಎನ್ನುವ ವದಂತಿಗೆ ಕಾರಣವಾಗಿತ್ತು. ‘ಲಿಗರ್’ ಸಿನಿಮಾ ಚಿತ್ರೀಕರಣದಲ್ಲಿರುವ ತಮ್ಮ ಗೆಳೆಯ ವಿಜಯ್ ದೇವರಕೊಂಡ ಅವರ ಭೇಟಿಗೆ ರಶ್ಮಿಕಾ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ನಟಿ ರಶ್ಮಿಕಾ ಮಂದಣ್ಣ ಅವರಿಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್ ಆಕೆಯ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಪಾಸ್‌ಪೋರ್ಟ್ ಫೋಟೊ ಹಾಕಿ, “ಈ ಬಾರಿ ನಾನು ದೂರ ಹೋಗುತ್ತಿದ್ದೇನೆ, ಆದರೆ ಶೀಘ್ರವೇ ಮರಳುತ್ತೇನೆ” ಎಂದು ಹಾಕಿದ್ದರು. ಅವರು ಹಾಲಿವುಡ್ ಸಿನಿಮಾವೊಂದರ ಆಡಿಷನ್‌ಗೆ ಹೋಗುತ್ತಿದ್ದಾರೆ ಎನ್ನುವ ವದಂತಿ ಹರಡಿತ್ತು. ಆದರೆ ಬಲ್ಲ ಮೂಲಗಳ ಪ್ರಕಾರ ಅವರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅಲ್ಲಿ ಅವರ ಗೆಳೆಯ, ನಟ ವಿಜಯ್ ದೇವರಕೊಂಡ ನಟನೆಯ ‘ಲಿಗರ್’ ಸಿನಿಮಾದ ಚಿತ್ರೀಕರಣ ನಡೆದಿದೆ. ವಿಜಯ್‌ರನ್ನು ಭೇಟಿ ಮಾಡಲು ರಶ್ಮಿಕಾ ತೆರಳುತ್ತಿರುವುದು ಕೂಡ ವಿಶೇಷವೆನಿಸಿದೆ.
‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ನಂತರ ವಿಜಯ್ ಮತ್ತು ರಶ್ಮಿಕಾ ಹೆಚ್ಚು ಹತ್ತಿರವಾಗಿದ್ದಾರೆ. ಇಬ್ಬರೂ ಆಗಿಂದಾಗ್ಗೆ ಭೇಟಿ ಮಾಡುತ್ತಿರುತ್ತಾರೆ. ಈಗ ವಿಜಯ್ ಭೇಟಿಗೆ ರಶ್ಮಿಕಾ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಇಬ್ಬರ ನಡುವಿನ ಹೊಸ ಲೆಕ್ಕಾಚಾರದ ಬಗ್ಗೆ ಮಾತನಾಡತೊಡಗಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ರಶ್ಮಿಕಾರ ಮೂರ್ನಾಲ್ಕು ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ಎರಡು ತೆಲುಗು ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ.