ಡಾ.ಪ್ರಗ್ಬಲ್ ದಾಸ್ ನಿರ್ದೇಶನದ ಸ್ಪೋರ್ಟ್ಸ್ ಅಡ್ವೆಂಚರಸ್ ಸಿನಿಮಾ ‘ಮಡ್ಡಿ’ ಡಿಸೆಂಬರ್ 10ರಂದು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡಿತ್ತು. ಈ ಸಿನಿಮಾ ನಾಳೆಯಿಂದ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗಲಿದೆ.
ಭಾರತದ ಮೊದಲ ಮಡ್ರೇಸ್ ಸಿನಿಮಾ ಎನ್ನುವ ಹೆಗ್ಗಳಿಕೆಯೊಂದಿಗೆ ಡಿಸೆಂಬರ್ 10ರಂದು ಸಿನಿಮಾ ‘ಮಡ್ಡಿ’ ತೆರೆಕಂಡಿತ್ತು. ಸುಮಾರು ಐದು ವರ್ಷಗಳ ಪ್ರಾಜೆಕ್ಟ್ ಇದು. ಸಾಕಷ್ಟು ಅಧ್ಯಯನ, ತಯಾರಿಯೊಂದಿಗೆ ಮಾಡಿದ ಸಿನಿಮಾ ಎಂದಿದ್ದರು ನಿರ್ದೇಶಕ ನಿರ್ದೇಶಕ ಡಾ.ಪ್ರಗ್ವಲ್ ದಾಸ್. “ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಚಿತ್ರಕ್ಕೆ ಮೊದಲೇ ಬೇಡಿಕೆ ಬಂದಿತ್ತು. ಆದರೆ ದೊಡ್ಡ ಪರದೆ ಮೇಲೆ ನೋಡಿದರೇ ನಮ್ಮ ಸಿನಿಮಾ ಎಫೆಕ್ಟೀವ್. ಹಾಗಾಗಿ ಥಿಯೇಟರ್ನಲ್ಲಿ ಬಿಡುಗಡೆ ಮಾಡಿದ್ದೆವು. ಅಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಳೆಯಿಂದ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ದೊಡ್ಡ ವೀಕ್ಷಕ ಬಳಗವನ್ನು ತಲುಪಲಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಪ್ರಗ್ಬಲ್. ‘ರಾಕ್ಷಸನ್’ ಸಿನಿಮಾ ಖ್ಯಾತಿಯ ಸ್ಯಾನ್ ಲೋಕೇಶ್ ಸಂಕಲನ, ‘ಕೆಜಿಎಫ್’ ಸಿನಿಮಾ ಖ್ಯಾತಿಯ ರವಿ ಬಸ್ರೂರು ಸಂಗೀತ, ಹಾಲಿವುಡ್ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಛಾಯಾಗ್ರಹಣ ಚಿತ್ರಿಕ್ಕಿದೆ.
ಹದಿಮೂರು ಕ್ಯಾಮರಾಗಳನ್ನು ಶೂಟಿಂಗ್ನಲ್ಲಿ ಬಳಕೆ ಮಾಡಿದ್ದಾರೆ. ಅನುಭವಿ ತಂತ್ರಜ್ಞರ ಜೊತೆ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧವಾದ ಪ್ರಯತ್ನ ಎನ್ನುತ್ತಾರೆ ನಿರ್ದೇಶಕರು. ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿ ಪ್ರೇಮ್ ಕೃಷ್ಣ ದಾಸ್ ಚಿತ್ರ ನಿರ್ಮಿಸಿದ್ದಾರೆ. ನೈಜ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.