ಎಂ ಎಸ್‌ ಶ್ರೀಪತಿ ನಿರ್ದೇಶನದ ‘800’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಶ್ರೀಲಂಕಾದ ಖ್ಯಾತ ಕ್ರಿಕೆಟರ್‌ ಮುತ್ತಯ್ಯ ಮುರಳೀಧರನ್‌ ಬಯೋಪಿಕ್‌ ಚಿತ್ರವಿದು. ಖ್ಯಾತ ಕ್ರಿಕೆಟರ್‌ ಸಚಿನ್‌ ತೆಂಡೂಲ್ಕರ್‌ ಟ್ರೈಲರ್‌ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಶ್ರೀಲಂಕಾದ ಆಫ್ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ಜೀವನ, ಕ್ರಿಕೆಟ್‌, ಸಾಧನೆ ಆಧರಿಸಿದ ‘800’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಭಾರತದ ಖ್ಯಾತ ಕ್ರಿಕೆಟರ್‌ ಸಚಿನ್‌ ತೆಂಡೂಲ್ಕರ್‌ ಮುಂಬೈನಲ್ಲಿ ಟ್ರೈಲರ್‌ ಅನಾವರಣಗೊಳಿಸಿದ್ದಾರೆ. ಎಂ ಎಸ್‌ ಶ್ರೀಪತಿ ನಿರ್ದೇಶನದ ಚಿತ್ರದಲ್ಲಿ ‘ಸ್ಲಂ ಡಾಗ್​​ ಮಿಲಿಯನೇರ್​’ ಸಿನಿಮಾ ಖ್ಯಾತಿಯ ನಟ ಮಧುರ್​ ಮಿತ್ತಲ್​ ಅವರು ಮುತ್ತಯ್ಯ ಮುರಳೀಧರನ್​ ಪಾತ್ರ ನಿರ್ವಹಿಸಿದ್ದಾರೆ. ಮಹಿಮಾ ನಂಬಿಯಾರ್​ ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್, ಅವರು ಪದೇ ಪದೇ ಎದುರಿಸುತ್ತಿದ್ದ ‘ನೋ-ಬಾಲ್’ ನಿಂದನೆಗಳು ಮತ್ತು ಅವರು ಹೇಗೆ ಅನ್ಯಾಯವಾಗಿ Bio Chemical Testingಗೆ ಗುರಿಯಾಗುತ್ತಿದ್ದರು ಎಂಬುದರ ಮೇಲೆ ಕೇಂದ್ರೀಕೃತವಾಗಿದೆ.

https://youtu.be/6kfaONhD0ks

ಕ್ರಿಕೆಟರ್​ಗಳ ಜೀವನದ ಕುರಿತು ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಆ ಪೈಕಿ ಕೆಲವು ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಮಹೇಂದ್ರ ಸಿಂಗ್​ ಧೋನಿ ಜೀವನಾಧಾರಿತ ‘ಎಂ ಎಸ್ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಒಂದು ಉತ್ತಮ ಉದಾಹರಣೆ. ಈಗ ಮುತ್ತಯ್ಯ ಮುರಳೀಧರನ್​ ಅವರ ಜೀವನದ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ‘800’ ಸಿನಿಮಾ ಮೂಡಿಬಂದಿದ್ದು, ಅವರ ಅಭಿಮಾನಿಗಳಲ್ಲಿ ಕೌತುಕ ಸೃಷ್ಟಿಸಿದೆ. ಮುತ್ತಯ್ಯ ಮುರಳೀಧರನ್​ ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು, ಅಂದರೆ 800 ವಿಕೆಟ್​ಗಳನ್ನು ಪಡೆದ ಏಕೈಕ ಬೌಲರ್​ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಆ ಕಾರಣದಿಂದಲೇ ಈ ಸಿನಿಮಾಗೆ ‘800’ ಎನ್ನುವ ಶೀರ್ಷಿಕೆ ಇಡಲಾಗಿದೆ. ಏಕದಿನ ಪಂದ್ಯಗಳಲ್ಲಿ ಮುತ್ತಯ್ಯ ಮುರಳೀಧರನ್​ ಅವರು 530 ವಿಕೆಟ್​ ಪಡೆದಿದ್ದಾರೆ. 1996ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್​ ಗೆದ್ದಾಗ ಆ ಟೀಮ್​ನಲ್ಲಿ ಮುತ್ತಯ್ಯ ಮುರಳೀಧರನ್​ ಅವರು ಆಟವಾಡಿದ್ದರು. ಅವರ ಬೌಲಿಂಗ್​ ಶೈಲಿಯ ಬಗ್ಗೆ ಹಲವು ಬಾರಿ ಪ್ರಶ್ನೆ ಎದುರಾಗಿತ್ತು. Movie Train Motion Pictures ಬ್ಯಾನರ್‌ ಅಡಿ ವಿವೇಕ್‌ ರಂಗಾಚಾರಿ ಚಿತ್ರ ನಿರ್ಮಿಸಿದ್ದು, ಗಿಬ್ರಾನ್​ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್​ ಭಾಷೆಗಳಲ್ಲಿ ಮೂಡಿಬಂದಿದ್ದು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here