ರಜನೀಕಾಂತ್‌ ಅಭಿನಯದ ನೂತನ ಸಿನಿಮಾ ‘ತಲೈವಾ 171’ ಘೋಷಣೆಯಾಗಿದೆ. ಸೂಪರ್‌ಹಿಟ್‌ ‘ಜೈಲರ್‌’ ಸಿನಿಮಾ ನಿರ್ಮಿಸಿದ್ದ Sun Pictures ಈ ಸಿನಿಮಾ ನಿರ್ಮಿಸಲಿದ್ದು, ಲೋಕೇಶ್‌ ಕನಗರಾಜ್‌ ನಿರ್ದೇಶಿಸಲಿದ್ದಾರೆ.

ರಜನಿಕಾಂತ್​ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಹೊಸ ಸಿನಿಮಾ ‘ತಲೈವಾ 171’ ಚಿತ್ರವನ್ನು ಲೋಕೇಶ್​ ಕನಗರಾಜ್ ನಿರ್ದೇಶಿಸಲಿದ್ದಾರೆ.​ ‘ಜೈಲರ್’ ಚಿತ್ರಕ್ಕೆ ಸಂಗೀತ ನೀಡಿದ್ದ ಅನಿರುದ್ಧ್​ ರವಿಚಂದರ್​ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಜನೀಕಾಂತ್ ಅವರ ‘ಜೈಲರ್’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಈ ದೊಡ್ಡ ಯಶಸ್ಸಿನ ಬೆನ್ನಲ್ಲೇ ಅವರ 171ನೇ ಸಿನಿಮಾದ ಅಧಿಕೃತ ಘೋಷಣೆ ಹೊರಬಿದ್ದಿದೆ. ಚಿತ್ರವನ್ನು ತಾತ್ಕಾಲಿಕವಾಗಿ ‘ತಲೈವಾ 171’ ಎಂದು ಕರೆಯಲಾಗಿದ್ದು, ‘ಜೈಲರ್‌’ ಚಿತ್ರವನ್ನು ನಿರ್ಮಾಣ ಮಾಡಿದ್ದ Sun Pictures ಸಂಸ್ಥೆಯೇ ಈ ಸಿನಿಮಾವನ್ನು ನಿರ್ಮಿಸಲಿದೆ.

ರಜನೀಕಾಂತ್‌ ಅವರು 1970ರಿಂದ ಇಲ್ಲೀವರೆಗೂ ಆಗಿಂದಾಗ್ಗೆ ಬ್ಲಾಕ್‌ ಬಸ್ಟರ್‌ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ‘ಭೈರವಿ’, ‘ಮುಳ್ಳುಮ್ ಮಲರುಮ್’, ‘ಬಿಲ್ಲಾ’, ‘ಮುರಟ್ಟು ಕಾಲೈ’, ‘ನಾನ್ ಸಿಗಪ್ಪು ಮಾನಿತನ್’, ‘ಪಡಿಕ್ಕಥವನ್’, ‘ಶ್ರೀ ಭರತ್’, ‘ವೆಲೈಕಾರನ್’, ‘ದಳಪತಿ’, ‘ಅಣ್ಣಾಮಲೈ’, ‘ಬಾಷಾ’, ‘ಮುತ್ತು’, ‘ಅರುಣಾಚಲಂ’, ‘ಚಂದ್ರಮುಖಿ’ ಸೇರಿದಂತೆ ಮುಂತಾದ ಚಿತ್ರಗಳು ಈ ಬ್ಲಾಕ್‌ ಬಸ್ಟರ್‌ ಪಟ್ಟಿಯಲ್ಲಿವೆ.

Previous article‘ಛೂ ಮಂತರ್‌’ ಟೈಟಲ್‌ ಟ್ರ್ಯಾಕ್‌ ಬಿಡುಗಡೆ | ಶರಣ್‌, ಅದಿತಿ, ಮೇಘನಾ ನಟನೆಯ ಸಿನಿಮಾ
Next article‘ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ’ ಟ್ರೈಲರ್‌ | ವಿಕ್ಕಿ ಕೌಶಲ್‌ ಸಿನಿಮಾ ಸೆ. 22ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here