ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’ ನೂತನ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. 64ರ ಹರೆಯದ ನಾಗಾರ್ಜುನ ಟೀಸರ್‌ನಲ್ಲಿ Young ಆಗಿ ಕಾಣಿಸುತ್ತಿದ್ದು, ಇದೊಂದು ಆಕ್ಷನ್‌ ಎಂಟರ್‌ಟೇನರ್‌ ಚಿತ್ರ ಎನ್ನುವ ಸುಳಿವು ಸಿಗುತ್ತದೆ.

ನಟ ನಾಗಾರ್ಜುನ ಅವರು ಇಂದು ತಮ್ಮ 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಅಂಗವಾಗಿ ಅವರ ಬಹುನಿರೀಕ್ಷಿತ ‘ನಾ ಸಾಮಿ ರಂಗ’ ಚಿತ್ರದ ಫಸ್ಟ್‌ಲುಕ್‌ ಟೀಸರ್‌ ರಿಲೀಸ್‌ ಆಗಿದೆ. ಇದು ನಾಗಾರ್ಜುನ ಅವರ 99ನೇ ಸಿನಿಮಾ. ಜನಪ್ರಿಯ ನೃತ್ಯ ಸಂಯೋಜಕ ವಿಜಯ್ ಬಿನ್ನಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಕಳೆದ ವರ್ಷ ‘ದಿ ಘೋಸ್ಟ್’ ಚಿತ್ರದ ಬಿಡುಗಡೆ ನಂತರ ನಾಗಾರ್ಜುನ ಸಣ್ಣ ಬ್ರೇಕ್‌ ಪಡೆದಿದ್ದರು. ಇಂದು ಅವರ ನೂತನ ಸಿನಿಮಾ ಸುದ್ದಿ ಮತ್ತು ಲುಕ್‌ ಹೊರಬಿದ್ದಿದೆ. ಇದು ಜೋಶಿ (Joshiy) ನಿರ್ದೇಶನದ ಮಲಯಾಳಂ ಸಿನಿಮಾ ‘ಪೊರಿಜ್ನು ಮರಿಯಮ್ ಜೋಸ್‌’ (2019) ಅಧಿಕೃತ ತೆಲುಗು ರೀಮೇಕ್‌. ಚಿತ್ರಕ್ಕೆ ಆಸ್ಕರ್‌ ಪುರಸ್ಕೃತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ.

Srinivasaa Silver Screen ಬ್ಯಾನರ್‌ ಅಡಿ ಶ್ರೀನಿವಾಸ ಚಿತ್ತೂರಿ ಸಿನಿಮಾ ನಿರ್ಮಿಸುತ್ತಿದ್ದು, ಪ್ರಸನ್ನ ಕುಮಾರ್ ಬೆಜವಾಡ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ನಾಲ್ಕು ದಶಕಗಳ ವೃತ್ತಿಬದುಕಿನಲ್ಲಿ ನಾಗಾರ್ಜುನ ಜನಪ್ರಿಯ ನಟ, ನಿರ್ಮಾಪಕ, ಟೀವಿ ನಿರೂಪಕ, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಜನಪ್ರಿಯ ಹೀರೋ ತಮಿಳು ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅವರಿಗೆ ಒಂಬತ್ತು ರಾಜ್ಯ ಪ್ರಶಸ್ತಿ (ನಂದಿ ಪ್ರಶಸ್ತಿ), ಮೂರು ಫಿಲ್ಮ್‌ ಫೇರ್ ಪ್ರಶಸ್ತಿಗಳು ಮತ್ತು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

Previous articleನಟ ವಿಜಯ್‌ ಮಗ ಜೇಸನ್‌ ಸಂಜಯ್‌ ಈಗ ಚಿತ್ರನಿರ್ದೇಶಕ | Lyca Productions ಸಿನಿಮಾ
Next articleನೂಪುರ್‌ ಸನೂನ್‌ ಫಸ್ಟ್ ಲುಕ್‌ | ರವಿತೇಜಾ ‘ಟೈಗರ್‌ ನಾಗೇಶ್ವರ ರಾವ್‌’ ತೆಲುಗು ಸಿನಿಮಾ

LEAVE A REPLY

Connect with

Please enter your comment!
Please enter your name here