ಖ್ಯಾತ ತಮಿಳು ನಟ ವಿಜಯ್‌ ಪುತ್ರ ಜೇಸನ್‌ ಸಂಜಯ್‌ ಚಿತ್ರನಿರ್ದೇಶನಕ್ಕೆ ವೇದಿಕೆ ಸಿದ್ಧವಾಗಿದೆ. ಅವರ ಚೊಚ್ಚಲ ನಿರ್ದೇಶನದ ಚಿತ್ರವನ್ನು ಪ್ರತಿಷ್ಠಿತ Lyca productions ನಿರ್ಮಿಸಲಿದೆ. ಜೇಸನ್‌ ಅವರು ಟೊರಾಂಟೊ, ಲಂಡನ್‌ನಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಓದಿಕೊಂಡಿದ್ದು, ಸಾಕಷ್ಟು ಸಿದ್ಧತೆಯೊಂದಿಗೆ ನಿರ್ದೇಶಕ್ಕಿಳಿಯುತ್ತಿದ್ದಾರೆ. ಈ ಸಿನಿಮಾ ಕುರಿತಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.

ಖ್ಯಾತ ತಮಿಳು ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರವನ್ನು Lyca Productions ನಿರ್ಮಿಸಲಿದೆ. ಈ ಕುರಿತು Lyca ಸಂಸ್ಥೆ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ಜೇಸನ್‌ ನಿರ್ದೇಶನದ ಕುರಿತು Lyca ಸಂಸ್ಥೆಯ ಮಾಲಿಕ ಸುಭಾಸ್ಕರನ್‌, ‘Lyca ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿಕೊಡುತ್ತದೆ. ನಮ್ಮ ಮುಂದಿನ ಸಿನಿಮಾ ಜೇಸನ್‌ ಸಂಜಯ್ ಜೊತೆಗೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ. ಜೇಸನ್‌ ಲಂಡನ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. Toronto Film Schoolನಲ್ಲಿ ಸಿನಿಮಾ ನಿರ್ಮಾಣ ಕುರಿತು ಡಿಪ್ಲೋಮಾ ಪದವಿ ಪಡೆದಿದ್ದಾರೆ. ಅವರು ತಮ್ಮ ಸ್ಕ್ರಿಪ್ಟ್‌ ವಿವರಿಸಿದಾಗ ಒಂದು ಸಿನಿಮಾ ನೋಡಿದಂತೆಯೇ ಭಾಸವಾಯ್ತು. ನಿರ್ದೇಶಕರಿಗೆ ಇರಬೇಕಾದ ಗುಣಗಳು ಜೇಸನ್‌ ಅವರಲ್ಲಿವೆ’ ಎಂದಿದ್ದಾರೆ.

ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡುವ ಜೇಸನ್‌, ‘ನನ್ನ ಮೊದಲ ಸಿನಿಮಾ ನಿರ್ಮಾಣಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಕೈ ಜೋಡಿಸುವುದು ಅಷ್ಟು ಸುಲಭದ ಮಾತಲ್ಲ. ನನಗೆ ಇಂತಹ ಅವಕಾಶ ಸಿಕ್ಕಿದೆ. ಈ ಅವಕಾಶ ಸಿಕ್ಕಿರುವುದು ಅತ್ಯಂತ ಗೌರವದ ಸಂಗತಿ. ಯುವ ಪ್ರತಿಭೆಗಳಿಗೆ Lyca ಸಂಸ್ಥೆಯ ಪ್ರೋತ್ಸಾಹ ಸಿಕ್ಕಿದೆ. ಈ ಅವಕಾಶ ನೀಡಿದ್ದಕ್ಕಾಗಿ ಸುಭಾಸ್ಕರನ್‌ ಅವರಿಗೆ ಧನ್ಯವಾದ. ನಿರ್ದೇಶಕನಾಗಬೇಕೆಂಬ ನನ್ನ ಕನಸನ್ನು ನನಸಾಗಿಸಲು ಬೆಂಬಲಿಸಿದ ತಮಿಳ್‌ ಕುಮಾರನ್‌ ಅವರನ್ನೂ ಸ್ಮರಿಸುತ್ತೇನೆ’ ಎಂದು ಧನ್ಯವಾದ ಅರ್ಪಿಸಿದ್ದಾರೆ. ಜೇಸನ್ ಸಂಜಯ್ ಅವರು ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ (2018-2020) ಫಿಲ್ಮ್ ಪ್ರೊಡಕ್ಷನ್ ಡಿಪ್ಲೊಮಾ ಪಡೆದಿದ್ದಾರೆ. ತದನಂತರ ಲಂಡನ್‌ನಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಅಭ್ಯಾಸ ಮಾಡಿದ್ದಾರೆ.

Previous article‘ಸೆಕ್ಷನ್‌ 108’ ಟೀಸರ್‌ | ನವಾಜುದ್ದೀನ್‌ ಸಿದ್ದಿಕಿ ಹಿಂದಿ ಸಿನಿಮಾ 2024ರ ಫೆಬ್ರವರಿಗೆ
Next article‘ನಾ ಸಾಮಿ ರಂಗ’ ತೆಲುಗು ಸಿನಿಮಾ ಫಸ್ಟ್‌ಲುಕ್‌ ಟೀಸರ್‌ | ನಾಗಾರ್ಜುನ ಬರ್ತ್‌ಡೇ ಸ್ಪೆಷಲ್‌

LEAVE A REPLY

Connect with

Please enter your comment!
Please enter your name here