ಗೌತಮ್‌ ಮತ್ತು ರಚನಾ ಇಂದರ್‌ ನಟನೆಯ ‘ನಾಲ್ಕನೇ ಆಯಾಮ’ ಸಿನಿಮಾ ಈ ವಾರ (ಏಪ್ರಿಲ್‌ 19) ತೆರೆಕಾಣುತ್ತಿದೆ. ಹೀರೋ ಗೌತಮ್‌ ಅವರೇ ಚಿತ್ರ ನಿರ್ದೇಶಿಸಿದ್ದಾರೆ. ಹಾರರ್‌ – ಥ್ರಿಲ್ಲರ್‌ ಕಥಾಹಂದರದ ಚಿತ್ರದ ಮೂಲಕ ನಟ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಗೌತಮ್‌ ಹೀರೋ ಆಗಿ ನಟಿಸಿ, ನಿರ್ದೇಶಿಸಿರುವ ‘ನಾಲ್ಕನೇ ಆಯಾಮ’ ಸಿನಿಮಾ ಇದೇ ಶುಕ್ರವಾರ (ಏಪ್ರಿಲ್‌ 19) ತೆರೆಕಾಣಲಿದೆ. ‘ಪ್ರೇಮಗೀಮ ಜಾನೆದೋ’ ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಗೌತಮ್ ಈ ಚಿತ್ರದಲ್ಲಿ ನಟನೆ ಜೊತೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಅವರ ನಿರ್ದೇಶನದ ‘ನಾಲ್ಕನೇ ಆಯಾಮ’ ತೆರೆಗೆ ಬರುತ್ತಿದೆ. ಚಿತ್ರದ ನಾಯಕಿಯಾಗಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಮಾಸ್ಟರ್ ಆನಂದ್ ಮಗಳು ಅಂಜನಿ ವಂಶಿಕಾ ಕಶ್ಯಪ್ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಮಿತ್ ಗೌಡ ಯಶಸ್ವಿನಿ ಎಂ, ಬಲ ರಾಜ್‌ವಾಡಿ, ವಿನ್ಸೆಂಟ್, ಮಂಜು ಸ್ವಾಮಿ, ಚಂದ್ರಕಲಾ ಮೋಹನ್, ಬೇಬಿ ನಿಷಿತಾ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ನಾಲ್ಕನೇ ಆಯಾಮ’ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ಅಭಿನಂದನ್ ಕಶಪ್ಯ ಹಿನ್ನೆಲೆ ಸಂಗೀತ ಹಾಗೂ ಸೌಂಡ್ ಡಿಸೈನ್ ಮಾಡಿದ್ದು, ಕೆ ಭ್ರಮೇಂದ್ರ ಹಾಗೂ ಅರುಣ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನವಿದೆ. ಇಂಚರಾ ಕ್ರಿಯೇಷನ್ಸ್‌ನಡಿ ಅರುಣಾ ಮುತ್ತು ರಾಯಪ್ಪ ನಿರ್ಮಾಣ ಮಾಡಿದ್ದು, ಕಿರಣ್ ರಾಯಚೋಟಿ, ದಿವ್ಯಾ ಸಜೋಗ್ ನಿರ್ಮಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ.

LEAVE A REPLY

Connect with

Please enter your comment!
Please enter your name here