ನಟಿ ಜಾಹ್ನವಿ ಕಪೂರ್‌ ಅಭಿನಯದ ಬಹುನಿರೀಕ್ಷಿತ ಹಿಂದಿ ಸಿನಿಮಾ ‘ಉಲಜ್‌’. ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಜಾಹ್ನವಿ ಕಪೂರ್‌ ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದಂತಹ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಸುದಾಂಶು ಸರಿಯಾ ಆಕ್ಷನ್‌ ಕಟ್‌ ಹೇಳಿರುವ ದೇಶ ಪ್ರೇಮದ ಕಥೆ ಹೊಂದಿರುವ ಹಿಂದಿ ಸಿನಿಮಾ ‘ಉಲಜ್‌’. ಜಾಹ್ನವಿ ಕಪೂರ್‌ ಈ ಸಿನಿಮಾದಲ್ಲಿ ದೇಶದ ರಕ್ಷಣೆಗಾಗಿ ನಿಲ್ಲುವ ಯಂಗ್‌ ಡಿಪ್ಲೋಮ್ಯಾಟ್‌ ಪಾತ್ರದಲ್ಲಿ ನಟಿಸಿದ್ದಾರೆ. ‘ತಲ್ವಾರ್‌’, ‘ರಾಝಿ’, ‘ಬದಾಯಿ ದೊ’ ಸಿನಿಮಾಗಳನ್ನು ನಿರ್ಮಿಸಿರುವ ಜಂಗ್ಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿ ವಿನೀತ್‌ ಜೈನ್‌ ಉಲಜ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾದ ಟೀಸರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಜೊತೆಗೆ ರಿಲೀಸ್‌ ದಿನಾಂಕವನ್ನೂ ಪ್ರಕಟಿಸಿದೆ. ಜುಲೈ 5ಕ್ಕೆ ‘ಉಲಜ್‌’ ಸಿನಿಮಾ ತೆರೆಗೆ ಬರಲಿದೆ.

ಯಂಗ್‌ ಡಿಪ್ಲೋಮ್ಯಾಟ್‌ ಪಾತ್ರದಲ್ಲಿ ನಟಿಸಿರುವ ಜಾಹ್ನವಿಗೆ ಈ ರೀತಿಯ ಪಾತ್ರ ಸಿಕ್ಕಿರೋದು ಇದೇ ಮೊದಲು. ದೇಶ ಹಾಗೂ ತನ್ನ ವಿರುದ್ಧ ನಡೆಸುವ ಷಡ್ಯಂತ್ರವನ್ನು ತಪ್ಪಿಸಲು ಹೋರಾಡುವ ನಾಯಕಿಯಾಗಿ ಜಾಹ್ನವಿ ಅಭಿನಯ ಸಖತ್‌ ಥ್ರಿಲ್ಲಿಂಗ್‌ ಆಗಿದೆ. ಟೀಸರ್‌ನ ಆರಂಭ ನಾಯಕಿ ಸುಹಾನಾ ಪರಿಚಯ ನಟ ಗುಲ್ಶನ್‌ ದೇವಯ್ಯ ಅವರ ಹಿನ್ನಲೆ ಧ್ವನಿಯಿಂದ ಮಾಡಿಕೊಡಲಾಗುತ್ತದೆ. ಹೀಗಾಗಿ ಬ್ಯಾಕ್‌ಗ್ರೌಂಡ್‌ನಲ್ಲಿ ಬರುವ ಡೈಲಾಗ್ಸ್‌ ಕುತೂಹಲ ಹೆಚ್ಚಿಸುತ್ತದೆ. ನೆನಪಿನಲ್ಲಿ ಉಳಿಯುವ ಡೈಲಾಗ್ಸ್‌ ಜೊತೆಗೆ ಟೀಸರ್‌ ಸಾಕಷ್ಟು ಸವಾಲುಗಳನ್ನು ಬಿಟ್ಟು ಹೋಗುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ‘ಉಲಜ್‌’ನಲ್ಲಿ ಜಾಹ್ನವಿಯ ಆಕ್ಷನ್‌ ಅವತಾರವನ್ನೂ ನೋಡಬಹುದಾಗಿದೆ. ಜಾಹ್ನವಿ ಕಪೂರ್‌ ಜೊತೆಗೆ ಈ ಸಿನಿಮಾದಲ್ಲಿ ಗುಲ್ಶನ್‌ ದೇವಯ್ಯ ಹಾಗೂ ರೋಷನ್‌ ಮ್ಯಾಥ್ಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here