ZEE5ನಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾ ಬರುತ್ತಿರುವ ಸುದ್ದಿ ಹೊರಬಿದ್ದಿದೆ. ಜುಲೈ 28ರಂದು ಥಿಯೇಟರ್‌ಗೆ ಬಂದಿದ್ದ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಸಿನಿಮಾ ಓಟಿಟಿಗೆ ಬರುತ್ತಿದ್ದು, ZEE5 ವಿಶೇಷ ವೀಡಿಯೋಗಳೊಂದಿಗೆ ಸುದ್ದಿಯನ್ನು ಹೊರಗೆಡಹಿದೆ.

ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ಸಿನಿಮಾ ‘ವಿಕ್ರಾಂತ್ ರೋಣ’ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾದ ಪ್ರಯೋಗ. ಸುದೀಪ್‌ ವೃತ್ತಿ ಬದುಕಿನ ವಿಶಿಷ್ಟ ಪ್ರಯೋಗ ಎನಿಸಿಕೊಂಡ ಸಿನಿಮಾದ ಮೇಕಿಂಗ್‌ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜುಲೈ 28 ರಂದು ಥಿಯೇಟರ್‌ಗೆ ಬಂದ ಸಿನಿಮಾ ಸಾಕಷ್ಟು ಸುದ್ದಿಯನ್ನಂತೂ ಮಾಡಿತು. ಇದೀಗ ಸಿನಿಮಾ ಸೆಪ್ಟೆಂಬರ್‌ 2, ಸುದೀಪ್‌ ಹುಟ್ಟುಹಬ್ಬದಂದು ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಕನ್ನಡದಲ್ಲಿ ಮಾತ್ರ ‘ವಿಕ್ರಾಂತ್ ರೋಣ’ ಸ್ಟ್ರೀಮ್‌ ಆಗಲಿದ್ದು, ಶೀರ್ಘದಲ್ಲಿಯೂ ಬೇರೆ ಭಾಷೆಗಳಲ್ಲಿ ಬರಲಿದೆ. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾದ ಚಿತ್ರವಿದು. ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುದೀಪ್ ಹೆಜ್ಜೆ ಹಾಕಿದ್ದ ‘ರಾ ರಾ ರಕ್ಕಮ್ಮ’ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿತ್ತು. ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಜಾಕ್ವೆಲಿನ್‌ ಉಪಸ್ಥಿತಿ ಚಿತ್ರದ ಪ್ರೊಮೋಷನ್‌ಗೆ ನೆರವಾಗಿತ್ತು. ನಿರೂಪ್​ ಭಂಡಾರಿ, ನೀತಾ ಅಶೋಕ್​, ಮಿಲನ ನಾಗರಾಜ್​, ​ ಮಧುಸೂದನ್​ ರಾವ್​, ರವಿಶಂಕರ್ ಗೌಡ ನಟನೆಯ ಚಿತ್ರಕ್ಕೆ ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನವಿದೆ.

Previous articleಉತ್ತಮ ಆಶಯದ ಕತೆ, ಕಾಡುವ ಮಾತುಗಳು…
Next article‘The Ghost’ ಟ್ರೈಲರ್‌; ನಾಗಾರ್ಜುನ ಆಕ್ಷನ್‌ – ಥ್ರಿಲ್ಲರ್‌ ತೆಲುಗು ಸಿನಿಮಾ

LEAVE A REPLY

Connect with

Please enter your comment!
Please enter your name here