2021ರ ಫೀಲ್ಮ್‌’ಫೇರ್ ಓಟಿಟಿ ಪ್ರಶಸ್ತಿಗಳಿಗೆ ವೀಕ್ಷಕರ ವೋಟಿನ ಆಧಾರದ ಮೇಲೆ ವೆಬ್ ಸರಣಿಗಳನ್ನು ನಾಮಿನೇಟ್ ಮಾಡಲಾಗಿದೆ. ವೆಬ್ ಸರಣಿ ಮತ್ತು ವೆಬ್ ಸಿನಿಮಾಗಳಿಗಾಗಿ ನಾಮಿನೇಷನ್ಸ್‌ ನಡೆದಿದ್ದು ಕಾಮಿಡಿ, ಡ್ರಾಮಾ, ನಾನ್‌ – ಫಿಕ್ಷನ್‌ ಜಾನರ್‌ಗಳಲ್ಲಿ ನಾಮನಿರ್ದೇಶನ ನಡೆದಿದೆ.

2021ನೇ ಸಾಲಿನ ಮೈಗ್ಲ್ಯಾಮ್‌ ಫಿಲ್ಮ್‌’ಫೇರ್ ಓಟಿಟಿ ಅವಾರ್ಡ್‌ಗೆ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇಲ್ಲಿ ಆಗಸ್ಟ್‌ 2020ರಿಂದ ಜುಲೈ 2021ರವರೆಗೆ ಸ್ಟ್ರೀಮ್‌ ಆದ ವೆಬ್ ಸರಣಿ ಮತ್ತು ವೆಬ್‌ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ನಾಮಿನೇಷನ್ಸ್ ಘೋಷಣೆಯಾಗಿದ್ದು ಹನ್ಸಲ್ ಮೆಹ್ತಾ ನಿರ್ದೇಶನದ ‘ಸ್ಕ್ಯಾಮ್‌ 1992: ದಿ ಹರ್ಷದ್ ಮೆಹ್ತಾ ಸ್ಟೋರಿ’ ಅತಿ ಹೆಚ್ಚು ಹದಿನಾಲ್ಕು ನಾಮಿನೇಷನ್ಸ್ ಪಡೆದಿದೆ. ‘ಮಿರ್ಝಾಪುರ್‌’ ಮತ್ತು ‘ದಿ ಫ್ಯಾಮಿಲಿ ಮ್ಯಾನ್‌’ ಹದಿಮೂರು ಮತ್ತು ಹನ್ನೆರೆಡು ನಾಮಿನೇಷನ್ಸ್ ಪಡೆದಿವೆ. ನಟ ಮನೋಜ್ ಭಾಜಪೈ ಅವರು ವೆಬ್ ಸರಣಿ ಮತ್ತು ವೆಬ್ ಸಿನಿಮಾ ಎರಡೂ ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮಿನೇಟ್ ಆಗಿರುವುದು ವಿಶೇ‍ಷ. ವೀಕ್ಷಕರ ವೋಟಿನ ಆಧಾರದ ಮೇಲೆ ಈ ನಾಮಿನೇಷನ್ಸ್ ನಡೆದಿವೆ. ವೆಬ್ ಸರಣಿ ಮತ್ತು ವೆಬ್ ಸಿನಿಮಾಗಳಿಗಾಗಿ ನಾಮಿನೇಷನ್ಸ್‌ ನಡೆದಿದ್ದು ಕಾಮಿಡಿ, ಡ್ರಾಮಾ, ನಾನ್‌ – ಫಿಕ್ಷನ್‌ ಜಾನರ್‌ಗಳಲ್ಲಿ ನಾಮನಿರ್ದೇಶನ ನಡೆದಿದೆ.

ಇದೇ ಡಿಸೆಂಬರ್‌ 9ರಂದು ಮುಂಬಯಿಯಲ್ಲಿ ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿದೆ. ಅಮೇಜಾನ್‌ನ ‘ದಿ ಫ್ಯಾಮಿಲಿ ಮ್ಯಾನ್‌’ ಮತ್ತು ‘ಮಿರ್ಝಾಪುರ್‌’, ಸೋನಿLIVನ ‘ಸ್ಕ್ಯಾಮ್‌ 1992’, ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನ ಒರಿಜಿನಲ್ ಸರಣಿಗಳಾದ ‘ಕ್ರಿಮಿನಲ್ ಜಸ್ಟೀಸ್‌: ಬಿಹೈಂಡ್ ಕ್ಲೋಸ್ಡ್‌ ಡೋರ್ಸ್‌’ ಮತ್ತು ‘ಗ್ರಹಣ್‌’, MX ಪ್ಲೇಯರ್‌ನ ‘ಆಶ್ರಮ್‌’ ಸರಣಿಗಳು ‘ಡ್ರಾಮಾ’ ವಿಭಾಗದಲ್ಲಿ ನಾಮಿನೇಟ್‌ ಆಗಿವೆ. ಮನೋಜ್ ಭಾಜಪೈ, ಬಾಬ್ಬಿ ಡಿಯೋಲ್‌, ಪ್ರತೀಕ್ ಗಾಂಧಿ, ಪಂಕಜ್ ತ್ರಿಪಾಠಿ, ಅತುಲ್ ಕುಲಕರ್ಣಿ ಮತ್ತು ಅನ್ಶುಮಾನ್ ಪುಷ್ಕರ್.. ‘ಅತ್ಯುತ್ತಮ ನಟ’ ಕೆಟಗರಿಯಲ್ಲಿ (ಡ್ರಾಮಾ) ಸ್ಪರ್ಧೆಯಲ್ಲಿದ್ದಾರೆ.

‘ಅತ್ಯುತ್ತಮ ನಟಿ’ ಪಟ್ಟಿಯಲ್ಲಿ ಸಮಂತಾ, ಕೃತಿ ಕುಲ್ಹರಿ, ಹ್ಯೂಮಾ ಖುರೇಶಿ, ಶ್ವೇತಾ ತ್ರಿಪಾಠಿ, ಶ್ರೇಯಾ ಧನ್ವಂತರಿ ಮತ್ತು ಜೋಯಾ ಹುಸೇನ್‌ ಇದ್ದಾರೆ. ಕಾಮಿಡಿ ಸೆಗ್‌ಮೆಂಟ್‌ನಲ್ಲಿ ಗುಲ್ಲಕ್‌, ಹಾಸ್ಟೆಲ್ ಡೇಝ್‌, ಕಾಲೇಜ್ ರೊಮ್ಯಾನ್ಸ್‌, ಮಸಬಾ ಮಸಬಾ, ಮೆಟ್ರೋ ಪಾರ್ಕ್‌, ಅಲಾಸ್‌ ಮೋಟಪ್ಪ ಗಬರಾಹಟ್‌… ‘ಕಾಮಿಡಿ’ ವಿಭಾಗದಲ್ಲಿ ನಾಮಿನೇಟ್ ಅಗಿರುವ ಸರಣಿಗಳು. ಇನ್ನು ವೆಬ್ ಸಿನಿಮಾ ವಿಭಾಗದಲ್ಲಿ ನೆಟ್‌ಫ್ಲಿಕ್ಸ್‌’ನಲ್ಲಿ ಸ್ಟ್ರೀಮ್‌ ಆದ ಅಜೀಬ್‌ ದಾಸ್ತಾನಾಸ್‌, ರೇ, ಸೀರಿಯಸ್ ಮ್ಯಾನ್, ಮೀ ರಾಕ್ಸಮ್‌, ಸ್ಟೇಟ್ ಆಫ್ ಸೀಝ್‌, ಕಾಗಝ್‌ ಚಿತ್ರಗಳೂ ನಾಮಿನೇಟ್‌ ಆಗಿವೆ.

LEAVE A REPLY

Connect with

Please enter your comment!
Please enter your name here