ಸಮರ್ಥ್‌ ಕಡ್ಕೋಳ್‌ ನಿರ್ದೇಶನದ ದಿಗಂತ್‌ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾತಂಡಕ್ಕೆ ನಟಿ ನಿಧಿ ಸುಬ್ಬಯ್ಯ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಯೋಗರಾಜ್‌ ಭಟ್ಟರ ಯಶಸ್ವೀ ಸಿನಿಮಾ ‘ಪಂಚರಂಗಿ’ ಇವರಿಬ್ಬರಿಗೂ ಹೆಸರು ತಂದುಕೊಟ್ಟಿತ್ತು.

ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿದ್ದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರಕ್ಕೆ ನಟಿ ನಿಧಿ ಸುಬ್ಬಯ್ಯ ಆಯ್ಕೆಯಾಗಿರುವ ಸುದ್ದಿ ಹೊರಬಿದ್ದಿದೆ. ಈ ಹಿಂದೆ ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚರಂಗಿ’ ಚಿತ್ರದಲ್ಲಿ ದಿಗಂತ್‌ ಮತ್ತು ನಿಧಿ ಜೊತೆಯಾಗಿ ಅಭಿನಯಿಸಿದ್ದರು. ದಶಕದ ನಂತರ ಈಗ ಮತ್ತೊಮ್ಮೆ ಒಂದೇ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ನಿಧಿ ಪಾತ್ರದ ಬಗ್ಗೆ ಗುಟ್ಟುಬಿಟ್ಟುಕೊಡದ ನಿರ್ದೇಶಕ ಸಮರ್ಥ್ ಕಡ್ಕೋಳ್, ಈ ಪಾತ್ರ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎನ್ನುತ್ತಾರೆ.

ಸಮರ್ಥ್ ಕಡ್ಕೋಳ್‌ ನಿರ್ದೇಶಿಸುತ್ತಿರುವ ಸಿನಿಮಾವನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್‌ ಗಾಣಿಗ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಮರ್ಥ್ ಅವರೂ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. “ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ವಿಶೇಷವಾದ ಸಬ್ಜೆಕ್ಟ್ ಹೊಂದಿದೆ. ಯಲಹಂಕ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ದಿಗಂತ್‌ ಜೋಡಿಯಾಗಿ ನಾಯಕಿ ಧನು ಹರ್ಷ ನಟಿಸುತ್ತಿದ್ದಾರೆ” ಎನ್ನುತ್ತಾರೆ ನಿರ್ದೇಶಕ ಸಮರ್ಥ್‌. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ತವಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.

Previous articleವಿಷ್ಣುವರ್ಧನ್; ವಿಭಿನ್ನ ದಾರಿಯ ವಿಶಿಷ್ಟ ಪಯಣಿಗ
Next articleವಿಚಾರಣಾ ಕೊಠಡಿಯ ಆಚೆ-ಈಚೆ

LEAVE A REPLY

Connect withPlease enter your comment!
Please enter your name here