ನಿತಿನ್‌ ಮತ್ತು ಶ್ರೀಲೀಲಾ ನೂತನ ತೆಲುಗು ಸಿನಿಮಾದ ಶೀರ್ಷಿಕೆ ‘EXTRA’ ಎಂದಾಗಿದೆ. ವಕ್ಕಂತಂ ವಂಶಿ ನಿರ್ದೇಶನದ ಆಕ್ಷನ್‌ – ಎಂಟರ್‌ಟೇನರ್‌ ಇದು. ಈಗಾಗಲೇ ಶೇ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಡಿಸೆಂಬರ್‌ 23ರಂದು ಸಿನಿಮಾ ತೆರೆಕಾಣಲಿದೆ.

ನಿತಿನ್‌ ನಟನೆಯ ನೂತನ ತೆಲುಗು ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಇದು ನಿತಿನ್‌ರ 32ನೇ ಚಿತ್ರವಾಗಿದ್ದು, ಕನ್ನಡತಿ ಶ್ರೀಲೀಲಾ ಚಿತ್ರದ ನಾಯಕಿ. ನಿತಿನ್‌ ಚಿತ್ರಕ್ಕೆ ‘EXTRA’ ಎಂದು ನಾಮಕರಣವಾಗಿದ್ದು, ಅಡಿಬರಹ – ‘Ordinary Man’. ಈ ಆಕ್ಷನ್‌ – ಎಂಟರ್‌ಟೇನರ್‌ ಚಿತ್ರವನ್ನು ವಕ್ಕಂತಂ ವಂಶಿ ನಿರ್ದೇಶಿಸುತ್ತಿದ್ದಾರೆ. ಪೋಸ್ಟರ್‌ನಲ್ಲಿ ಹಿನ್ನಲೆಯು ಒಂದು ನಿರ್ದಿಷ್ಟ ದೃಶ್ಯದ ಸ್ಕ್ರಿಪ್ಟ್ ಪೇಪರ್‌ನಂತೆ ಗೋಚರಿಸುತ್ತದೆ ಮತ್ತು ಮುಂಭಾಗದಲ್ಲಿ ಕ್ಲ್ಯಾಪ್‌ಬೋರ್ಡ್ ಕಾಣಿಸುತ್ತದೆ. ಇದರ ಮಧ್ಯೆ ಗಡ್ಡಧಾರಿಯಾಗಿ ನಿತಿನ್‌ ತೀಕ್ಷ್ಣ ನೋಟವಿದೆ! ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ನಿತಿನ್ ಹಿಂದೆಂದೂ ನೋಡದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪೋಸ್ಟರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ವಕ್ಕಂತಂ ವಂಶಿ, ‘ಚಿತ್ರವು ಔಟ್ ಅಂಡ್ ಔಟ್ ಎಂಟರ್‌ಟೇನರ್‌ ಆಗಿರಲಿದೆ. ಚಿತ್ರಕಥೆ ರೋಲರ್ ಕೋಸ್ಟರ್ ರೈಡ್‌ನಂತೆ ಪ್ರೇಕ್ಷಕರಿಗೆ ಅಚ್ಚರಿ ಉಂಟುಮಾಡುತ್ತದೆ’ ಎಂದಿದ್ದಾರೆ.ಈಗಾಗಲೇ ಸಿನಿಮಾದ ಚಿತ್ರೀಕರಣ ಶೇ 60ರಷ್ಟು ಪೂರ್ಣಗೊಂಡಿದೆ. ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಧಾಕರ್ ರೆಡ್ಡಿ ಮತ್ತು ನಿಕಿತಾ ರೆಡ್ಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಡಿಸೆಂಬರ್ 23ರಂದು ಸಿನಿಮಾ ತೆರೆಕಾಣಲಿದೆ.

Previous articleಏಳು ಮಜಲುಗಳು, ಏಳು ದೌರ್ಬಲ್ಯಗಳು, ಏಳು ಬಣ್ಣಗಳು…
Next articleಶೂಟಿಂಗ್‌ ಮುಗಿಸಿದ ‘ಎಲ್ಲೋ ಜೋಗಪ್ಪ ನಿನ್ನರಮನೆ’ | ಹಯವದನ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here