ಬಾಂಡ್ ಸಿನಿಮಾ ‘ನೋ ಟೈಂ ಟು ಡೈ’ ಜಾಗತಿಕ ಬಾಕ್ಸ್ ಆಫೀಸ್ ವಹಿವಾಟು 600 ಮಿಲಿಯನ್ ಡಾಲರ್‌ ದಾಟಿದೆ. ನಟ ಡೇನಿಯಲ್ ಕ್ರೆಗ್‌ ಅಭಿನಯದ ಈ ಬಾಂಡ್ ಸಿನಿಮಾದ ಬಜೆಟ್‌ 250 ಮಿಲಿಯನ್‌ ಡಾಲರ್‌ ಎನ್ನಲಾಗಿದೆ.

ಇಪ್ಪತ್ತೈದನೇ ಜೇಮ್ಸ್ ಬಾಂಡ್ ಸಿನಿಮಾ ‘ನೋ ಟೈಂ ಟು ಡೈ’ ಜಾಗತಿಕ ವಹಿವಾಟು 600 ಮಿಲಿಯನ್ ಡಾಲರ್ ದಾಟಿದೆ. ಚಿತ್ರದ ಮಾರುಕಟ್ಟೆ ಕುರಿತಾಗಿ ಫೋರ್ಬ್ಸ್‌ ಮ್ಯಾಗಜಿನ್ ವರದಿ ಮಾಡಿದೆ. ಒಪ್ಪಂದದಂತೆ ನಟ ಡೇನಿಯಲ್ ಕ್ರೆಗ್ ಅವರಿಗೆ ಇದು ಕೊನೆಯ ಬಾಂಡ್ ಸಿನಿಮಾ. ಹಿಂದಿನ ಕ್ರೆಗ್‌ ಅವರ ಬಾಂಡ್ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ಅವರ ಅಭಿನಯ, ಆಕ್ಷನ್ ಪ್ರಭಾವಶಾಲಿಯಾಗಿದೆ ಎಂದು ಚಿತ್ರವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. 250 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದ್ದು ಕೋವಿಡ್‌ ಸಂಕಷ್ಟದ ದಿನಗಳಲ್ಲೂ ಉತ್ತಮ ವಹಿವಾಟು ನಡೆಸಿದೆ ಎನ್ನುವುದು ಟ್ರೇಡ್‌ ಅನಲಿಸ್ಟ್’ಗಳ  ಲೆಕ್ಕಾಚಾರ. ಅಪಹರಿಸಲ್ಪಟ್ಟ ವಿಜ್ಞಾನಿಯನ್ನು ರಕ್ಷಿಸುವ ಕತೆಯ ಎಳೆ ಚಿತ್ರದ್ದು. ನೀಲ್ ಪರ್ವಿಸ್‌, ರಾಬರ್ಟ್‌ ವೇಡ್‌, ಫುಕುನಾಗ, ಫೋಬ್ ವಾಲರ್ ಬ್ರಿಡ್ಜ್‌ ಚಿತ್ರಕಥೆ ರಚಿಸಿರುವ ಚಿತ್ರದ ನಿರ್ದೇಶಕರು ಕೇರಿ ಜೋಜಿ ಫುಕುನಾಗ. ಈ ಹಿಂದಿನ ಬಾಂಡ್ ಚಿತ್ರದಲ್ಲಿ ನಟಿಸಿದ್ದ ಲಿಯೋ ಸಿಡಾಕ್ಸ್‌, ಬೆನ್‌ ವಿಶಾ, ನವೋಮಿ ಹ್ಯಾರಿಸ್‌, ಜೆಫ್ರಿ ರೈಟ್‌, ಕ್ರಿಸ್ಟೋಫ್‌ ಇಲ್ಲಿಯೂ ಅಭಿನಯಿಸಿದ್ದರು.

Previous articleಟೀಸರ್ | ರಾಜಮೌಳಿ ‘RRR’ ಸಿನಿಮಾ; ಸೂಪರ್‌ಹೀರೋಗಳಾಗಿ ರಾಮ್‌ಚರಣ್, ಜ್ಯೂ.ಎನ್‌ಟಿಅರ್
Next articleಟ್ರೈಲರ್ | ‘ದಿ ರಿಯಲ್ ಚಾರ್ಲಿ ಚಾಪ್ಲಿನ್’; ಲೆಜೆಂಡರಿ ನಟನ ಡಾಕ್ಯುಮೆಂಟರಿ

LEAVE A REPLY

Connect with



Please enter your comment!
Please enter your name here