ಪ್ರಣಯ್‌ ಮೆಶ್ರಾಮ್‌ ನಿರ್ದೇಶನದ ಆಕ್ಷನ್‌ – ಥ್ರಿಲ್ಲರ್‌ ಹಿಂದಿ ಸಿನಿಮಾ ‘ಅಕೇಲಿ’ ಟೀಸರ್‌ ಬಿಡುಗಡೆಯಾಗಿದೆ. ನುಶ್ರತ್‌ ಭರೂಚಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಆಗಸ್ಟ್‌ 18ರಂದು ತೆರೆಕಾಣಲಿದೆ.

ನುಶ್ರತ್‌ ಭರೂಚಾ ನಟನೆಯ ‘ಅಕೇಲಿ’ ಆಕ್ಷನ್‌ – ಥ್ರಿಲ್ಲರ್‌ ಹಿಂದಿ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ನಕ್ಸಲ್‌ ಯುದ್ಧ ಪೀಡಿತ ಪ್ರದೇಶದ ವಿಹಂಗಮ ನೋಟದಿಂದ ಟೀಸರ್‌ ಆರಂಭಗೊಳ್ಳುತ್ತದೆ. ಅಲ್ಲಿ ನಡೆಯುತ್ತಿರುವ ಘಟನೆಗಳ ಅರಿವಿಲ್ಲದೇ ಗಾಬರಿಗೊಂಡಿರುವ ಯುವತಿಯನ್ನು ಕಾಣಬಹುದು. ಗೂಡ್ಸ್‌ ವಾಹನದಲ್ಲಿ ಯುವತಿಯರನ್ನು ಕರೆತಂದು ನಿಗೂಢ ಬಂಗಲೆಯೊಳಗೆ ಅವರನ್ನು ತಳ್ಳುವುದು, ಕಥಾನಾಯಕಿಯನ್ನು (ನುಶ್ರತ್ ಭರೂಚಾ) ಬಲವಂತವಾಗಿ, ಬೆದರಿಸಿ ಗನ್‌ನಿಂದ ಅವಳಿಗೆ ತಿವಿದು ಕತ್ತಲು ಕೋಣೆಯೊಳಗೆ ಕಳುಹಿಸುವ ದೃಶ್ಯ ಕಾಣಬಹುದು. ಪ್ರಣಯ್‌ ಮೆಶ್ರಾಮ್‌ ನಿರ್ದೇಶನದ ಚಿತ್ರವನ್ನು ನಿನಾದ್‌ ವೈದ್ಯ, ನಿತಿನ್‌ ವೈದ್ಯ, ಅಪರ್ಣಾ ಪಡ್ಗಾಂವ್ಕರ್‌, ಶಶಾಂತ್‌ ಷಾ, ವಿಕ್ಕಿ ಸಿದ್ನಾ ನಿರ್ಮಿಸಿದ್ದಾರೆ. ನಿಶಾಂತ್ ದಹಿಯಾ, ತ್ಸಾಹಿ ಹಲೇವಿ ಮತ್ತು ಅಮೀರ್ ಬೌಟ್ರಸ್ ಪೋಷಕ ಪಾತ್ರಗಳಲ್ಲಿದ್ದಾರೆ. ಆಗಸ್ಟ್‌ 18ರಂದು ಸಿನಿಮಾ ತೆರೆಕಾಣಲಿದೆ.

Previous articleಮೂವರು ನಾಯಕಿಯರ ಸಿನಿಮಾ ‘ಫೀನಿಕ್ಸ್‌’ | ಓಂಪ್ರಕಾಶ್‌ ರಾವ್‌ ನಿರ್ದೇಶನ
Next articleSocial mediaದಲ್ಲಿ ಗಮನ ಸೆಳೆದ ಸೌಜನ್ಯ ಪ್ರಕರಣದ ಕುರಿತ ನಟ ವಿಜಯ್‌ ಪೋಸ್ಟ್‌

LEAVE A REPLY

Connect with

Please enter your comment!
Please enter your name here