ರಂಜನ್‌ ಪ್ರಮೋದ್‌ ನಿರ್ದೇಶನದಲ್ಲಿ ದಿಲೀಶ್‌ ಪೋತಾನ್‌ ನಟಿಸಿರುವ ಮಲಯಾಳಂ ಸಿನಿಮಾ ‘ಓ ಬೇಬಿ’ ಟ್ರೈಲರ್‌ ರಿಲೀಸ್‌ ಆಗಿದೆ. ನಿರ್ದಿಷ್ಟ ಜಾನರ್‌ಗೆ ಹೊರತಾದ ಕಥಾವಸ್ತುವಿನ ಟ್ರೈಲರ್‌ ನೋಡುಗರಲ್ಲಿ ಕುತೂಹಲ ಉಂಟುಮಾಡುವಂತಿದ್ದು, ಜೂನ್‌ 9ರಂದು ಸಿನಿಮಾ ತೆರೆಕಾಣಲಿದೆ.

ರಂಜನ್‌ ಪ್ರಮೋದ್‌ ನಿರ್ದೇಶನದ ಮಲಯಾಳಂ ಥ್ರಿಲ್ಲರ್‌ ಸಿನಿಮಾ ‘O Baby’ ಟ್ರೈಲರ್‌ ಬಿಡುಗಡೆಯಾಗಿದೆ. ಮಧುರ ಹಿಂದಿ ಹಾಡೊಂದರ ಹಿನ್ನೆಲೆಯಲ್ಲಿ ಯುವ ಪ್ರೇಮಿಗಳು ಕಾಣಿಸಿಕೊಳ್ಳುತ್ತಾರೆ. ರೊಮ್ಯಾಂಟಿಕ್‌ ದೃಶ್ಯಗಳ ನಂತರ ಬಿಗುವಾದ ಕೆಲವು ಸನ್ನಿವೇಶಗಳೊಂದಿಗೆ ಕತೆ ಬೇರೆಯದ್ದೇ ಆಯಾಮ ಪಡೆಯುವಂತೆ ತೋರುತ್ತದೆ. ನಿರ್ದಿಷ್ಟ ಜಾನರ್‌ಗೆ ಹೊರತಾದ ಕಥಾವಸ್ತುವಿನ ಟ್ರೈಲರ್‌ ನೋಡುಗರಲ್ಲಿ ಕುತೂಹಲ ಉಂಟುಮಾಡುತ್ತದೆ. ‘ಬದುಕಿಗಾಗಿ ಹೋರಾಟ’ ಎನ್ನುವಂತೆ ಆಕ್ಷನ್‌ ದೃಶ್ಯಗಳೂ ಹಾಸುಹೊಕ್ಕಾಗಿವೆ. ದಿಲೀಶ್‌ ಪೋತಾನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ರಘುನಾಥ್‌ ಪಲೇರಿ, ಅತುಲ್ಯಾ, ಹನಿಯಾ ನಫೀಸಾ, ಸಾಜಿ ಸೋಮನ್‌, ಶಿನು ಸೈಮಲನ್‌ ಇತರೆ ಪಾತ್ರಗಳಲ್ಲಿದ್ದಾರೆ.

ಚಿತ್ರಕಥೆ ರಚನೆಯೊಂದಿಗೆ ಸಿನಿಮಾರಂಗ ಪ್ರವೇಶಿಸಿದವರು ರಂಜನ್‌ ಪ್ರಮೋದ್‌. ಇಲ್ಲಿಯವರೆಗೆ ಅವರ ಸ್ವತಂತ್ರ್ಯ ನಿರ್ದೇಶನದಲ್ಲಿ ‘ಫೋಟೊಗ್ರಾಫರ್‌’, ‘ರೋಸ್‌ ಗುತರಿನಾಲ್‌’, ‘ರಕ್ಷಾಧಿಕಾರಿ ಬೈಜು ಒಪ್ಪು’ ಸಿನಿಮಾಗಳು ಬಂದಿವೆ. ‘ಮೀಸ ಮಾಧವನ್‌’, ‘ಮನಸ್ಸಿನಕ್ಕರೆ’, ‘ಅಚುವಿಂತೆ ಅಮ್ಮ’, ‘ನಾರನ್‌’, ‘ಎನ್ನು ಎಪ್ಪೋಝಂ’ ಸಿನಿಮಾಗಳಿಗೆ ಚಿತ್ರಕಥೆ ರಚಿಸಿದ್ದಾರೆ. ದಿಲೀಶ್‌ ಪೋತಾನ್‌ ನಟನೆಯ ತೆರೆಕಂಡ ಇತ್ತೀಚಿನ ಸಿನಿಮಾ ‘ಕ್ರಿಸ್ಟೋಫರ್‌’. ಬಿ ಉನ್ನಿಕೃಷ್ಣನ್‌ ನಿರ್ದೇಶನದ ಚಿತ್ರವಿದು. ‘O Baby’ ಜೂನ್‌ 9ರಂದು ತೆರೆಕಾಣಲಿದೆ.

Previous articleDDM ಸಕ್ಸಸ್‌, ತೇಜಸ್ವಿ ಅವರ ಕಟೌಟ್‌ ಎದುರು ಕುಣಿದ ಸಂಭ್ರಮ!
Next articleಆಡೇ ನಮ್‌ GOD! | ತೆರೆಗೆ ಸಿದ್ಧವಾಗಿದೆ ಪಿ ಎಚ್‌ ವಿಶ್ವನಾಥ್‌ ನೂತನ ಸಿನಿಮಾ

LEAVE A REPLY

Connect with

Please enter your comment!
Please enter your name here