ಶಶಾಂಗ್‌ ಸೋಗಾಲ್‌ ನಿರ್ದೇಶನದ ‘ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದೊಡ್ಡ ಸಂಖ್ಯೆಯಲ್ಲಿ ಜನರ ಸಿನಿಮಾ ನೋಡುತ್ತಿದ್ದು, ವಿದೇಶಗಳಲ್ಲೂ ಸಿನಿಮಾಗೆ ಬೇಡಿಕೆ ಬಂದಿದೆ ಎನ್ನುವುದು ಚಿತ್ರತಂಡದ ಖುಷಿ. ಸಿನಿಮಾ ಪ್ರಸೆಂಟ್‌ ಮಾಡಿದ ನಟ ಧನಂಜಯ ಮತ್ತು DDM ಚಿತ್ರತಂಡ ಯಶಸ್ಸಿನ ಖುಷಿಯನ್ನು ಹಂಚಿಕೊಂಡಿದೆ.

‘ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್‌ ಸಂದರ್ಭದಲ್ಲಿ ಪ್ರಚಾರಕ್ಕೆ ಖರ್ಚು ಮಾಡಲು ಹಣವಿರುವುದಿಲ್ಲ ಎನ್ನುವಂತಾಗಿರುತ್ತದೆ. ನಮ್ಮ ಸಿನಿಮಾಗೆ ಮಾಧ್ಯಮದ ಬೆಂಬಲ ಸಿಕ್ಕಿತು. contribution is the greatest philosophy ಎಂಬುದನ್ನು ನಾನು ನಂಬಿದ್ದೇನೆ. ಒಳ್ಳೆಯದು ಏನೋ ಆಗುತ್ತಿದೆ ಅಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಇದು ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೇಟ್ ಮಾಡಲು ಸಿಕ್ಕ ಅವಕಾಶ. ತೇಜಸ್ವಿ ಅವರ ಕಟೌಟ್ ಮುಂದೆ ಕುಣಿದಾಗ ಸಿಕ್ಕ ಖುಷಿ ಅಷ್ಟಿಷ್ಟಲ್ಲ!’ ಎನ್ನುತ್ತಾರೆ ಧನಂಜಯ. ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರವನ್ನು ಅವರು ತಮ್ಮ Daali Pictures ಮೂಲಕ ಪ್ರಸೆಂಟ್‌ ಮಾಡಿ ನಾಡಿನ ಹಲವೆಡೆ ಸಂಚರಿಸಿ ಪ್ರೊಮೋಟ್‌ ಮಾಡಿದ್ದರು.

ಚಿತ್ರದ ನಿರ್ದೇಶಕ ಶಶಾಂಕ್ ಸೋಗಾಲ್ ಅವರಿಗೆ ಇದು ಸ್ವತಂತ್ರ್ಯ ನಿರ್ದೇಶನದ ಚೊಚ್ಚಲ ಪ್ರಯೋಗ. ಅವರು ಎಂಜನಿಯರಿಂಗ್‌ ಓದುವಾಗ ಸ್ನೇಹಿತರು ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆಯಿಂದ ಮಾತನಾಡುತ್ತಿದ್ದರಂತೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ಅವರು ಒಂದೊಳ್ಳೆಯ ಚಿತ್ರ ಮಾಡಬೇಕೆಂದು ಪಣತೊಟ್ಟಿದ್ದರು. ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದ ಮೂಲಕ ತಮ್ಮ ಆಶಯ ಸಾಕಾರವಾಗಿದೆ ಎನ್ನುವ ವಿಶ್ವಾಸದಲ್ಲಿದ್ದಾರವರು. ವೀಕೆಂಡ್‌ಗಳಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್‌ ಆಗುತ್ತಿದ್ದು, ವಿದೇಶಗಳಿಂದಲೂ ಚಿತ್ರಕ್ಕೆ ಬೇಡಿಕೆ ಬಂದಿದೆ ಎನ್ನುತ್ತಾರೆ.

ಚಿತ್ರದಲ್ಲಿ ರಾಮಾನುಜ ಅಯ್ಯಂಗಾರಿ ಪಾತ್ರ ಮಾಡಿದ್ದ ಆದಿತ್ಯ ಅಶ್ರೀ ಮತ್ತು ಮುಸ್ತಾಫಾ ಪಾತ್ರಧಾರಿ ಶಿಶಿರ್‌ ಬೈಕಾಡಿ ಅವರಿಗೆ ಸಿನಿಮಾದ ಗೆಲುವು ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ನಟನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಕೆರಿಯರ್‌ ರೂಪಿಸಿಕೊಳ್ಳುವ ಇರಾದೆಯಲ್ಲಿದ್ದಾರೆ ಅವರು. ಸಿನಿಮಾ ಗೆಲ್ಲಿಸಿದ ಜನರಿಗೆ ಕೃತಜ್ಞತೆ ಅರ್ಪಿಸುತ್ತಾರೆ. ಸಾಹಿತಿ ತೇಜಸ್ವಿ ಅವರ ಅಭಿಮಾನಿಗಳೇ ಹಣ ಹಾಕಿ ನಿರ್ಮಿಸಿದ ಸಿನಿಮಾ DDM. ಧನಂಜಯ್‌ ತಮ್ಮ ಡಾಲಿ ಪಿಕ್ಚರ್ಸ್‌ ಮೂಲಕ ಅರ್ಪಿಸಿದ್ದು, KRG Studios ರಾಜ್ಯದಲ್ಲೆಡೆ ವಿತರಿಸಿದೆ. ಸಿನಿಮಾ ರಾಜ್ಯ ಹಾಗೂ ಹೊರ ದೇಶಗಳ 80ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಮೂರನೇ ವಾರವೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕಾ, ಯುರೋಪ್ ದೇಶಗಳಲ್ಲೂ ಸಿನಿಮಾ ಜನಮನಗೆದ್ದಿದೆ.

Previous article‘The Night Manager 2’ ಟ್ರೈಲರ್‌ | ಅನಿಲ್‌ ಕಪೂರ್‌, ಆದಿತ್ಯ ರಾಯ್‌ ಕಪೂರ್‌ ಸರಣಿ ಜೂನ್‌ 30ರಿಂದ
Next article‘O Baby’ ಟ್ರೈಲರ್‌ | ದಿಲೀಶ್‌ ಪೋತಾನ್‌ ನಟನೆಯ ಮಲಯಾಳಂ ಥ್ರಿಲ್ಲರ್‌

LEAVE A REPLY

Connect with

Please enter your comment!
Please enter your name here