ರೆನಾಲ್ಜ್‌ ರೆಹಮಾನ್‌ ನಿರ್ದೇಶನದ ‘ಓಹ್‌ ಸಿಂಡ್ರೆಲ್ಲಾ’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅನೂಪ್‌ ಮೆನನ್‌ ಮ್ತು ಅಜು ವರ್ಗೀಸ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಲಯಾಳಂ ಬಿಗ್ ಬಾಸ್ ವಿಜೇತೆ ದಿಲ್ಶಾ ಪ್ರಸನ್ನನ್ ನಟನೆಯ ‘ಓಹ್ ಸಿಂಡ್ರೆಲ್ಲಾ’ ಮಲಯಾಲಂ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ರೆನಾಲ್ಜ್ ರೆಹಮಾನ್ ನಿರ್ದೇಶನದ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಅನೂಪ್ ಮೆನನ್ ಮತ್ತು ಅಜು ವರ್ಗೀಸ್ ಪ್ರಮುಖ ಅಭಿನಯಿಸಿದ್ದಾರೆ. ಜಿ-ಶಾಕ್ (G-Shock) ವಾಚ್ ಧರಿಸಿದ್ದಕ್ಕಾಗಿ ಸ್ನೇಹಿತರಿಂದ ಅನೂಪ್‌ ಹಾಸ್ಯಕ್ಕೆ ಈಡಾಗುವ ಸನ್ನಿವೇಶದಿಂದ ಟೀಸರ್‌ ಪ್ರಾರಂಭವಾಗುತ್ತದೆ. ಅನೂಪ್ ಆ ನಾಲ್ಕು ಜನ ಸ್ನೇಹಿತರಿಂದ ಬಲವಂತವಾಗಿ ತಪ್ಪಿಸಿಕೊಂಡು ಮೆಟ್ಟಿಲುಗಳನ್ನು ಏರುತ್ತಿರುವುದನ್ನು ಕಾಣಬಹುದು. ಮಹಡಿಯ ಮೇಲೆ ಬಂದ ನಂತರ ಅವನು ನೃತ್ಯ ಮಾಡುತ್ತಿರುವ ದಿಲ್ಶಾಳನ್ನು ಕಂಡು ಅವಳಿಗೆ ಕೈ ಮುಗಿಯುತ್ತಾನೆ. ಅವಳು ಅನೂಪ್‌ನತ್ತ ನಗೆ ಬೀರಿ ಅವನನ್ನು ನೋಡುತ್ತಾಳೆ. ಆಗ ‘ಓ… ಸಿಂಡ್ರೆಲ್ಲಾ’ ಹಾಡು ಕೇಳಿಸುತ್ತದೆ. ನಟ ಅನೂಪ್ ಮೆನನ್ ಅವರು ಈ ಹಿಂದೆ ಜೀತು ಜೋಸೆಫ್ ನಿರ್ದೇಶನದ ‘ಕೂಮನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ನಿರ್ದೇಶನದ ‘ಓರು ನಲ್ಪತುಕಾರಂತೆ ಇರುಪತೊನ್ನುಕಾರಿ’ ಮತ್ತು ‘ತಿಮಿಂಗಲ ವೆಟ್ಟ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. Anoopmenon Storyz ಬ್ಯಾನರ್‌ ಅಡಿ ‘ಓಹ್‌ ಸಿಂಡ್ರೆಲ್ಲಾ’ ನಿರ್ಮಾಣವಾಗುತ್ತಿದೆ.

Previous articleಚಿನ್ನದ ಪದಕ ಗೆದ್ದು ಹೊಸ ದಾಖಲೆ ಸೃಷ್ಟಿಸಿದ ನೀರಜ್‌ ಚೋಪ್ರಾ | ತಾರೆಯರಿಂದ ಅಭಿನಂದನೆ
Next articleಆಯಿರತೊನ್ನ್ ನುಣಗಳ್ | ಸುಳ್ಳುಗಳ ಸುರುಳಿ ಬಿಚ್ಚಿ ಸತ್ಯಶೋಧನೆ

LEAVE A REPLY

Connect with

Please enter your comment!
Please enter your name here