ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಕೃತಿ ‘ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ ಆಧಿರಿಸಿದ ಸರಣಿಯ ಟೀಸರ್ ಬಿಡುಗಡೆಯಾಗಿದೆ. Laura Mora and Alex Garcia Lopez ನಿರ್ದೇಶಿಸಿರುವ ಸರಣಿ ಹದಿನಾರು ಸಂಚಿಕೆಗಳಲ್ಲಿ Netflixನಲ್ಲಿ ಸ್ಟ್ರೀಮ್ ಆಗಲಿದೆ.
ಖ್ಯಾತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಕೃತಿ ‘ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ ಆಧಿರಿಸಿದ ಸರಣಿಯ ಟೀಸರ್ ಬಿಡುಗಡೆಯಾಗಿದೆ. ಹದಿನಾರು ಎಪಿಸೋಡ್‌ಗಳ ಸರಣಿ ಶೀಘ್ರದಲ್ಲೇ Netflixನಲ್ಲಿ ಮೂಡಿಬರಲಿದೆ. ಅತೀಂದ್ರಿಯ ಪಟ್ಟಣ ಮೆಕಾಂಡೋದ Buendia ಕುಟುಂಬದ ಹೋರಾಟದ ಕತೆಯಿದು. ಟೀಸರ್, ಆಕರ್ಷಕ ವಿಶ್ಯುಯೆಲ್ಸ್ ಮತ್ತು ಕತೆ ಇರುವ ಸುಳಿವು ನೀಡುತ್ತದೆ. ‘Many years later, as he faced the firing squad, Colonel Aureliano Buendía was to remember that distant afternoon when his father took him to discover ice.’ ಎನ್ನವು ಐಕಾನಿಕ್ ಸಾಲುಗಳೊಂದಿಗೆ ಟೀಸರ್ ಓಪನ್ ಆಗುತ್ತದೆ.
Laura Mora and Alex Garcia Lopez ನಿರ್ದೇಶಿಸಿರುವ ಸರಣಿಯಲ್ಲಿ ದೊಡ್ಡ ತಾರಾಬಳಗವಿದೆ. ಮಾರ್ಕ್ವೆಝ್ ಕೃತಿಯ ನೇಟಿವಿಟಿಗೆ ಹೊಂದುವಂತೆ ಕೊಲಂಬಿಯಾ ಮತ್ತು ಲ್ಯಾಟಿನ್ ಅಮೆರಿಕದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಟೀಸರ್‌ನಲ್ಲಿ ಕಲಾವಿದರಾದ Claudio Catano, Marco Gonzalez, Susana Morales ಅವರ ಪಾತ್ರಗಳನ್ನು ಪರಿಚಯಿಸಲಾಗಿದೆ. ಸ್ಪಾನಿಷ್‌ನಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದ್ದು, ಮಾರ್ಕ್ವೆಝ್ ಕುಟುಂಬದ ನೆರವು ಪಡೆಯಲಾಗಿದೆ. 1967ರಲ್ಲಿ ಪ್ರಕಟವಾದ ಮಾರ್ಕ್ವೆಝ್ ಅವರ ‘ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ ಜಗತ್ತಿನಾದ್ಯಂತ ಓದುಗರನ್ನು ಸೆಳೆದ ಕೃತಿ. ಈ ಮೇರು ಕೃತಿಗಾಗಿ ಮಾರ್ಕ್ವೆಝ್ ಅವರಿಗೆ ನೋಬೆಲ್ (1982) ಪುರಸ್ಕಾರ ಸಂದಿದೆ. Netflix ಟೀಸರ್ ಹಂಚಿಕೊಂಡಿದ್ದು, ಸ್ಟ್ರೀಮಿಂಗ್ ದಿನಾಂಕವಿನ್ನೂ ಘೋಷಣೆಯಾಗಿಲ್ಲ.