ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಅಭಿನಯದ ಕನ್ನಡ – ತೆಲುಗು ದ್ವಿಭಾಷಾ ಸಿನಿಮಾ ನಾಳೆ ಜೂನ್‌ 23ರಿಂದ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ. ಚಿತ್ರಮಂದಿರದಲ್ಲಿ ತೆರೆಕಂಡಾಗ ತೆಲುಗು ಅವತರಣಿಕೆಗೆ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತೆಲುಗು ನಟ ನರೇಶ್‌ ಮತ್ತು ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್‌ ಅವರ ನಿಜ ಬದುಕಿನ ಕತೆ ಎಂದೇ ಕರೆಸಿಕೊಂಡಿದ್ದ ‘ಮತ್ತೆ ಮದುವೆ’ OTTಗೆ ಬರುತ್ತಿದೆ. ನಾಳೆಯಿಂದ Amazon Prime Video ದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ. ಮೇ 26ರಂದು ಮೊದಲು ತೆಲುಗು ಅವತರಣಿಕೆ (‘ಮಳ್ಳಿ ಪೆಳ್ಳಿ’) ಬಿಡುಗಡೆಯಾಗಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೂನ್‌ 9ರಂದು ಕರ್ನಾಟಕದಲ್ಲಿ ತೆರೆಕಂಡ ಕನ್ನಡ ಅವತರಣಿಕೆ ‘ಮತ್ತೆ ಮದುವೆ’ಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಥಿಯೇಟರ್‌ಗೆ ಬಂದ ಎರಡು ವಾರಗಳಲ್ಲೇ ಸಿನಿಮಾ ಈಗ ಓಟಿಟಿಗೆ ಬರುತ್ತಿದೆ.

ನಟ ನರೇಶ್ ಅವರ ತಾಯಿ – ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ನಟ ಕೃಷ್ಣ ಅವರ ಜತೆಗೂಡಿ ‘ವಿಜಯ ಕೃಷ್ಣ ಮೂವೀಸ್’ ಆರಂಭಿಸಿದ್ದರು. ಈ ಬ್ಯಾನರ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಯಾರಾದ ಸಿನಿಮಾ ‘ಮತ್ತೆ ಮದುವೆ’. ಚಿತ್ರಕ್ಕೆ ಎಂ ಎಸ್ ರಾಜು ಕತೆ ಬರೆದು ನಿರ್ದೇಶನ ಮಾಡಿದ್ದರು. ಜಯಸುಧಾ, ಶರತ್ ಬಾಬು, ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

Previous articleರಾಗಿಣಿ ದ್ವಿವೇದಿ ‘ಶೀಲ’ | ಕನ್ನಡ – ಮಲಯಾಳಂ ದ್ವಿಭಾಷಾ ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾ
Next article‘Online ಮದುವೆ, Offline ಶೋಭನ’ | ಕಾಮಿಡಿ ಕಿಲಾಡಿಗಳ ಸಿನಿಮಾ

LEAVE A REPLY

Connect with

Please enter your comment!
Please enter your name here