ಡಾ ಗಿರಿಧರ್‌ ಎಚ್‌ ಟಿ ನಿರ್ದೇಶನದ ‘ಪರಿಮಳ ಡಿಸೋಜಾ’ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಕಾಣಲಿದೆ. ಭವ್ಯ, ಶ್ರೀನಿವಾಸ ಪ್ರಭು, ಕೋಮಲ ಬನವಾಸೆ, ವಿನೋದ್‌ ಶೇಷಾದ್ರಿ, ಶ್ವೇತಾ ರಮೇಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ಕ್ರಿಸ್ಟೋಪರ್‌ ಜೇಸನ್‌ ಅವರ ಸಂಗೀತ ಸಂಯೋಜನೆಯಿದೆ.

ಭವ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪರಿಮಳ ಡಿಸೋಜಾ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸಸ್ಪೆನ್ಸ್‌ – ಥ್ರಿಲ್ಲರ್‌ ಚಿತ್ರವನ್ನು ಡಾ ಗಿರಿಧರ್‌ ಹೆಚ್‌ ಟಿ ನಿರ್ದೇಶಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 15ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಿಂದ ಚಿತ್ರ U/A ಪ್ರಮಾಣ ಪತ್ರ ಪಡೆದುಕೊಂಡಿದೆ. ಕೋಮಲ ಬನವಾಸೆ, ಶ್ರೀನಿವಾಸ್‌ ಪ್ರಭು, ವಿನೋದ್‌ ಶೇಷಾದ್ರಿ, ಶ್ವೇತಾ ರಮೇಶ್‌, ಪೂಜಾ ರಾಮಚಂದ್ರ, ನಾಗಮಂಗಲ ಜಯರಾಮ್‌, ಮೀಸೆ ಆಂಜನಪ್ಪ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿ ನಾಗೇಂದ್ರ ಪ್ರಸಾದ್‌, ಜಯಂತ್‌ ಕಾಯ್ಕಿಣಿ, ಕೆ ಕಲ್ಯಾಣ್‌ ಚಿತ್ರಕ್ಕೆ ಹಾಡುಗಳನ್ನು ರಚಿಸಿದ್ದು, ಕ್ರಿಸ್ಟೋಪರ್‌ ಜೇಸನ್‌ ಸಂಗೀತ ಸಂಯೋಜಿಸಿದ್ದಾರೆ. ಕೆ ರಾಮ್‌ ಛಾಯಾಗ್ರಹಣ, ಸಂಜೀವ್‌ ರೆಡ್ಡಿ ಸಂಕಲನ ಚಿತ್ರಕ್ಕಿದೆ. Village Road Films ಬ್ಯಾನರ್‌ ಅಡಿ ವಿನೋದ್‌ ಶೇಷಾದ್ರಿ ಚಿತ್ರ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಚೆನ್ನೈ, ಮುಂಬೈ, ಹೈದರಾಬಾದ್‌ ಹಾಗೂ ವಿದೇಶಗಳಲ್ಲೂ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here