ವಿಜೇಶ್‌ ಪಾಣತ್ತೂರ್‌ ಮತ್ತು ಉನ್ನಿ ವೆಲ್ಲೂರ ನಿರ್ದೇಶಿಸಿರುವ ‘ನಧಿಕಲಿಲ್‌ ಸುಂದರಿ ಯಮುನಾ’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಧ್ಯಾನ್‌ ಶ್ರೀನಿವಾಸನ್‌ ಮುಖ್ಯ ಪಾತ್ರಗದಲ್ಲಿರುವ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಕಾಣಲಿದೆ.

ಧ್ಯಾನ್‌ ಶ್ರೀನಿವಾಸನ್‌ ನಟನೆಯ ‘ನಧಿಕಲಿಲ್‌ ಸುಂದರಿ ಯಮುನಾ’ ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರಜ್ಞಾ ನಾಗರ ಮತ್ತು ಅಜು ವರ್ಗೀಸ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಥ್ರಿಲ್ಲರ್‌ ಚಿತ್ರವನ್ನು ವಿಜೇಶ್ ಪಾಣತ್ತೂರ್ ಮತ್ತು ಉನ್ನಿ ವೆಲ್ಲೂರ ನಿರ್ದೇಶಿಸಿದ್ದಾರೆ. ತನ್ನ ಕನಸಿನ ಹುಡುಗಿಯನ್ನು ಮದುವೆಯಾಗಲು ಪ್ರಯತ್ನಿಸುತ್ತಿರುವ ಬ್ರಹ್ಮಚಾರಿ ಕಣ್ಣನ್ (ಧ್ಯಾನ್) ಸುತ್ತ ಚಿತ್ರದ ಕತೆ ಸುತ್ತುತ್ತದೆ. ಚಿತ್ರದ ಶೀರ್ಷಿಕೆಯನ್ನು ಪ್ರೇಮ್ ನಜೀರ್ ಮತ್ತು ಕೆ ಆರ್ ವಿಜಯ ಅಭಿನಯದ ಹಳೆಯ ಒಂದು ಮಲಯಾಳಂ ಚಿತ್ರದ ಹಾಡಿನಿಂದ ಆಯ್ದುಕೊಳ್ಳಲಾಗಿದೆ.

ನಟಿ ನಯನತಾರಾಳನ್ನು ಉದಾಹರಣೆಯನ್ನಾಗಿ ಬಳಸಿಕೊಂಡು ತನ್ನ ಭಾವಿ ಪತ್ನಿಯಲ್ಲಿ ಕಾಣಲು ಬಯಸುವ ಕಣ್ಣನ್ ಅವನ ಕನಸಿನ ಹುಡುಗಿಯ ಗುಣಗಳು ಹೇಗಿರಬೇಕೆಂದು ವಿವರಿಸುವುದರೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ. ಆದರೆ ಅವನ ಸ್ನೇಹಿತರು ಅವನ ಈ ಆಧ್ಯತೆಗಳಿಗೆ ಅಪಹಾಸ್ಯ ಮಾಡುತ್ತಾರೆ. ಕಣ್ಣನ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ ಸೂಕ್ತವಾದ ಸಂಗಾತಿಯನ್ನು ಹುಡುಕಲು ಹೆಣಗಾಡುತ್ತಿರುತ್ತಾನೆ. ಕ್ರಮೇಣ ಅವನ ಸ್ನೇಹಿತರು ಈ ಹುಡುಕಾಟದಲ್ಲಿ ಕಣ್ಣನ್‌ಗೆ ಸಹಾಯ ಮಾಡುತ್ತಾರೆ. ಚಿತ್ರವನ್ನು Cinematica Films Llp ಬ್ಯಾನರ್‌ ಅಡಿ ವಿಲಾಸ್ ಕುಮಾರ್ ಮತ್ತು ಸಿಮಿ ಮುರಳಿ ನಿರ್ಮಿಸಿದ್ದಾರೆ. ಫೈಜಲ್‌ ಅಲಿ ಛಾಯಾಗ್ರಹಣ, ರತಿನ್ ರಾಧಾಕೃಷ್ಣನ್ ಸಂಕಲನ, ಅರುಣ್ ಮುರಳೀಧರನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸಿನಿಮಾ ಸೆಪ್ಟೆಂಬರ್ 15ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here