ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ‘ಪಠಾಣ್‌’ ಹಿಂದಿ ಚಿತ್ರದ ಮೊದಲ ವೀಡಿಯೋ ಸಾಂಗ್‌ ರಿಲೀಸ್‌ ಆಗಿದೆ. ಶಾರುಖ್‌ ಮತ್ತು ದೀಪಿಕಾ ಜೋಡಿಯ ರೊಮ್ಯಾಂಟಿಕ್‌ ಪಾರ್ಟಿ ಸಾಂಗ್‌ ಚಿತ್ರದ ದೊಡ್ಡ ಸ್ಕೇಲ್‌ ಕುರಿತು ಮಾಹಿತಿ ನೀಡುತ್ತದೆ.

ಬಹುನಿರೀಕ್ಷಿತ ‘ಪಠಾಣ್‌’ ಸಿನಿಮಾದಿಂದ ಮೊದಲ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ರೊಮ್ಯಾಂಟಿಕ್‌ ‘ಬೇಷರಮ್‌ ರಂಗ್‌’ ಹಾಡು ಸೆನ್ಶುಯಸ್‌ ಆಗಿದೆ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಯೂರೋಪ್‌ನ ಸುಂದರ ಲೊಕೇಶನ್‌, ದೊಡ್ಡ ಸ್ಕೇಲ್‌ನಲ್ಲಿ ಹಾಡನ್ನು ಚಿತ್ರಿಸಲಾಗಿದೆ. ಇದು ಮುಂದಿನ ಕೆಲ ಅವಧಿಗೆ ಪಾರ್ಟಿ ಸಾಂಗ್‌ ಆಗುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಕುಮಾರ್‌ ರಚನೆಯ ಈ ಗೀತೆಗೆ ವಿಶಾಲ್‌ – ಶೇಖರ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಆರಂಭದಲ್ಲಿ ಬರುವ ಸ್ಪಾನಿಷ್‌ ಸಾಲುಗಳನ್ನು ವಿಶಾಲ್‌ ದದ್ಲಾನಿ ರಚಿಸಿದ್ದಾರೆ. ಶಿಲ್ಪಾ ರಾವ್‌, ಕೆರಾಲಿಸಾ ಮಾಂಟಿರೊ, ವಿಶಾಲ್‌, ಶೇಖರ್‌ ಈ ಹಾಡಿಗೆ ದನಿಯಾಗಿದ್ದಾರೆ. ನಾಲ್ಕು ವರ್ಷಗಳ ಸುದೀರ್ಘ ಬ್ರೇಕ್‌ನ ನಂತರ ಶಾರುಖ್‌ ‘ಪಠಾಣ್‌’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಹಿಂದಿರುಗುತ್ತಿದ್ದಾರೆ. ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರದ ಖಳಪಾತ್ರದಲ್ಲಿ ಜಾನ್‌ ಅಬ್ರಹಾಂ ಅಭಿನಯಿಸಿದ್ದಾರೆ. 2023ರ ಜನವರಿ 25ಕ್ಕೆ ಸಿನಿಮಾ ತೆರೆಕಾಣಲಿದೆ.

Previous articleರಜನೀಕಾಂತ್‌ ಜೊತೆಗಿನ ನೆನಪು; ‘ಗೆಳೆಯ ಶಿವಾಜಿ’
Next articleಪ್ರೇಮ, ಕಾಮನೆಯ ಮಧ್ಯೆ ಕಳೆದುಹೋಗುವ ಕಾದಂಬರಿಯ ನಿಜ ಆಶಯ

LEAVE A REPLY

Connect with

Please enter your comment!
Please enter your name here