ವಿಶಾಲ್‌ ನೂತನ ತಮಿಳು ಸಿನಿಮಾಗೆ ‘ರತ್ನಂ’ ಶೀರ್ಷಿಕೆ ನಿಗಧಿಯಾಗಿದೆ. ‘ತಾಮಿರ ಭರಣಿ’ (2007) ಮತ್ತು ‘ಪೂಜೈ’ (2014) ಚಿತ್ರಗಳ ನಂತರ ವಿಶಾಲ್ ಮತ್ತು ನಿರ್ಮಾಪಕ ಹರಿ ಈ ಹೊಸ ಯೋಜನೆಗೆ ಕೈಜೋಡಿಸಿದ್ದಾರೆ. ಪ್ರಿಯಾ ಭವಾನಿ ಶಂಕರ್, ಸಮುದ್ರಕನಿ, ಯೋಗಿ ಬಾಬು ಮತ್ತು ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಶಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ನೂತನ ಸಿನಿಮಾಗೆ ‘ರತ್ನಂ’ ಶೀರ್ಷಿಕೆ ನಿಗಧಿಯಾಗಿದೆ. ಚಿತ್ರತಂಡ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಟೀಸರ್‌ ಸಹ ಹಂಚಿಕೊಂಡಿದೆ. ‘ತಾಮಿರ ಭರಣಿ’ (2007) ಮತ್ತು ‘ಪೂಜೈ’ (2014) ಚಿತ್ರಗಳ ನಂತರ ವಿಶಾಲ್ ಮತ್ತು ನಿರ್ಮಾಪಕ ಹರಿ ಈ ಹೊಸ ಯೋಜನೆಗೆ ಕೈಜೋಡಿಸಿದ್ದಾರೆ. ವಿಶಾಲ್ ಅವರು ಚಿತ್ರದ ಮೊದಲ ಟೀಸರ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ಇದು ನನ್ನ 34ನೇ ಚಿತ್ರಕ್ಕೆ ಮೂರನೇ ಬಾರಿಗೆ ಸಹಕರಿಸಲಿರುವ ಹರಿ ಸರ್ ಜೊತೆಗಿನ ‘ರತ್ನಂ’ನ ಮೊದಲ ಶಾಟ್ ಮತ್ತು ನನ್ನ ವೃತ್ತಿಜೀವನದಲ್ಲಿ ಸಂಗೀತ ಸಂಯೋಜಕರಾಗಿ ರಾಕ್‌ಸ್ಟಾರ್ D S P ಅವರೊಂದಿಗಿನ ನನ್ನ ಮೊದಲ ಸಹಯೋಗವನ್ನು ಹಂಚಿಕೊಳ್ಳಲು ಸಂತೋಷವಾಗಿದೆ’ ಎಂದು ಬರೆದುಕೊಂಡಿದ್ದಾರೆ.

https://youtu.be/wBt7hofHYmk

ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್, ಸಮುದ್ರಕನಿ, ಯೋಗಿ ಬಾಬು ಮತ್ತು ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. Stonebench Films ಮತ್ತು Zee Studios ಬ್ಯಾನರ್‌ ಅಡಿಯಲ್ಲಿ ಕಾರ್ತಿಕೇಯನ್ ಸಂತಾನಂ ನಿರ್ಮಿಸುತ್ತಿರುವ ಚಿತ್ರಕ್ಕೆ ಎಂ ಸುಕುಮಾರ್ ಛಾಯಾಗ್ರಹಣ, ಟಿ ಎಸ್ ಜಯ್ ಸಂಕಲನವಿದೆ. ‘ಸಿಂಗಂ’, ‘ಸಿಂಗಂ 2’, ‘ವೆಂಘೈ’ ಮತ್ತು ‘ಸಾಮಿ ಸ್ಕ್ವೇರ್’ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ದೇವಿ ಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. 2024ರ ಆರಂಭದಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here